ಕಾಬೂಲ್ ನಲ್ಲಿ ತಾಲಿಬಾನ್ ಉಗ್ರರು 
ವಿದೇಶ

ಅಫ್ಘಾನ್ ಬಿಕ್ಕಟ್ಟು: ಮುಂದಿನ ಕೆಲ ದಿನಗಳಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಬೇಡಿಕೆಯಿಟ್ಟ ತಾಲಿಬಾನ್

ಇನ್ನೂ ಕೆಲವೇ ದಿನಗಳಲ್ಲಿ ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಳುವುದಕ್ಕೆ ತಾಲಿಬಾನ್ ಬಯಸಿರುವುದಾಗಿ ಉಗ್ರ ಗುಂಪಿನ ವಕ್ತಾರರೊಬ್ಬರು ಭಾನುವಾರ ಬಿಬಿಸಿಗೆ ಹೇಳಿದ್ದಾರೆ.

ಕಾಬೂಲ್: ಇನ್ನೂ ಕೆಲವೇ ದಿನಗಳಲ್ಲಿ ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಳುವುದಕ್ಕೆ ತಾಲಿಬಾನ್ ಬಯಸಿರುವುದಾಗಿ ಉಗ್ರ ಗುಂಪಿನ ವಕ್ತಾರರೊಬ್ಬರು ಭಾನುವಾರ ಬಿಬಿಸಿಗೆ ಹೇಳಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಶಾಂತಿಯುತ ಅಧಿಕಾರವನ್ನು ಬಯಸುತ್ತೇವೆ ಎಂದು ಉಗ್ರರ ಮಾತುಕತೆ ತಂಡದ ಭಾಗವಾಗಿ ಕತಾರ್ ಮೂಲದ ಸುಹೈಲ್ ಶಾಹೀನ್ ಬಿಬಿಸಿಗೆ ತಿಳಿಸಿದ್ದಾರೆ.

ಸೆಪ್ಟೆಂಬರ್ 11, 2001ರ  ದಾಳಿ ನಂತರ ಅಮೆರಿಕ ನೇತೃತ್ವದ ಪಡೆಗಳು ಮಟ್ಟ ಹಾಕಿದ ತಾಲಿಬಾನ್ ಇಸ್ಲಾಮಿಕ್ ಉಗ್ರ ಸಂಘಟನೆ ಎರಡು ದಶಕಗಳ ನಂತರ ಅಪ್ಘಾನಿಸ್ತಾನದಲ್ಲಿ ಅಧಿಕಾರ ಹಸ್ತಾಂತರದ ನಿರೀಕ್ಷೆಯಲ್ಲಿದ್ದು, ತಾಲಿಬಾನ್ ನೀತಿಯನ್ನು ಶಾಹೀನ್ ರೂಪಿಸಿದ್ದಾರೆ.  ಇಸ್ಲಾಮಿಕ್ ಸರ್ಕಾರವನ್ನು ನಾವು ಬಯಸುತ್ತೇವೆ, ಅಂದರೆ ಎಲ್ಲಾ ಅಪ್ಘಾನರು ಸರ್ಕಾರದ ಭಾಗವಾಗಬೇಕು, ''ಮುಂದಿನ ದಿನಗಳಲ್ಲಿ ಅಧಿಕಾರ ಶಾಂತಿಯುತವಾಗಿ ಹಸ್ತಾಂತರವಾಗುವುದನ್ನು ನಾವು ನೋಡಲಿದ್ದೇವೆ''  ಎಂದು ಶಾಹೀನ್ ಹೇಳಿದ್ದಾರೆ. 

ವಿದೇಶಿ ರಾಯಭಾರಿಗಳು, ಎನ್ ಜಿ ಒಗಳಿಗೆ ಯಾರಿಂದಲೂ ತೊಂದರೆಯಾಗುವುದಿಲ್ಲ,  ಈ ಹಿಂದೆ ಯಾವ ರೀತಿಯ ಕೆಲಸ ಮಾಡುತ್ತಿದ್ದಾರೋ ಅದೇ ರೀತಿಯಲ್ಲಿ ಕೆಲಸ ಮುಂದುವರೆಸಲಿದ್ದಾರೆ.  ಅವರಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ, ಅವರು ದೇಶದಲ್ಲಿಯೇ ಉಳಿಯಬೇಕು ಎಂದರು. 

ಕರಾಳ ದಿನಗಳಿಗೆ ದೇಶವನ್ನು ಹಿಂದಕ್ಕೆ ತಳ್ಳಲಾಗುತ್ತಿದೆ ಎಂಬ ಭಯವನ್ನು ನಿರಾಕರಿಸಿದ ಶಾಹೀನ್, ತಾಲಿಬಾನ್ ಸಹಿಷ್ಣುತೆಯ ಹೊಸ ಅಧ್ಯಾಯವನ್ನು ಹುಡುಕುತ್ತಿದೆ. ಯಾವುದೇ ಅಪ್ಘಾನ್ ರ ಜೊತೆಗೆ ಕೆಲಸ ಮಾಡಲು ಬಯಸುತ್ತೇವೆ,  ದೇಶ ಮತ್ತು ಅಪ್ಘಾನ್ ಜನರಿಗಾಗಿ ಶಾಂತಿ, ಸಹಿಷ್ಣುತೆ, ಸಹಬಾಳ್ವೆ ಮತ್ತು  ರಾಷ್ಟ್ರೀಯ ಐಕ್ಯತೆಯ ಹೊಸ ಅಧ್ಯಾಯವನ್ನು ನಾವು ಬಯಸುತ್ತೇವೆ ಎಂದು ಅವರು ತಿಳಿಸಿದರು. ಅನೇಕ ಅಧಿಕಾರಿಗಳು, ಸೈನಿಕರು ಮತ್ತು ಪೋಲಿಸರು ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರ ಅಥವಾ ಪಾಶ್ಚಿಮಾತ್ಯ ಪಡೆಗಳೊಂದಿಗೆ ಕೆಲಸ ಮಾಡುವ ಶಂಕೆಯಿರುವವರ ವಿರುದ್ಧ ಪ್ರತೀಕಾರಕ್ಕೆ ಹೆದರಿ ಶರಣಾಗಿದ್ದಾರೆ. ಆದರೆ, ಅದು ಆಗುವುದಿಲ್ಲ ಎಂದು ಶಾಹೀನ್ ಹೇಳಿದರು.

ನಾವು ಯಾರ ಮೇಲೆಯೂ ಸೇಡು ತೀರಿಸಿಕೊಳ್ಳುವುದಿಲ್ಲ ಎಂದು ಭರವಸೆ ನೀಡುತ್ತೇವೆ. ಯಾವುದೇ ಪ್ರಕರಣದ ತನಿಖೆ ನಡೆಸಲಾಗುವುದು, ದಶಕಗಳಿಂದ ಮಾರಣಾಂತಿಕ ವಿರೋಧ ಎದುರಿಸುತ್ತಿರುವ ಅಮೆರಿಕದೊಂದಿಗೆ ತನ್ನ ಸಂಬಂಧವನ್ನು ಪರಿಶೀಲಿಸಲಾಗುವುದು ಎಂದು ದೋಹಾ ಮೂಲದ ವಕ್ಕಾರ ತಿಳಿಸಿದರು.  ಹಿಂದೆ ನನ್ನ ಸಂಬಂಧ ಹೀಗೆ ಇತ್ತು. ಇನ್ನೂ ಮುಂದೆ ಅಮೆರಿಕ  ನಮ್ಮ ಕಾರ್ಯಸೂಚಿಯನ್ನು ಮುಟ್ಟದಿದ್ದರೆ, ಅದು ಸಹಕಾರದ ಹೊಸ ಅಧ್ಯಾಯವಾಗುತ್ತದೆ ಎಂದು ಶಾಹೀನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT