ವಿದೇಶ

ತಾಲಿಬಾನ್ ಗೆ ನಿಷೇಧ ಹೇರಿದ ಫೇಸ್ ಬುಕ್

Harshavardhan M

ಲಂಡನ್: ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್ ಬುಕ್ ತಾನು ತಾಲಿಬಾನ್ ಗೆ ನಿಷೇಧ ಹೇರಿರುವುದಾಗಿ ಘೋಷಿಸಿದೆ. ಈಗಾಗಲೇ ತಾಲಿಬಾನ್ ಬೆಂಬಲಿಗರ ಖಾತೆಗಳು, ಬರಹಗಳು, ಪೋಸ್ಟ್ ಗಳನ್ನು ಅಳಿಸಿಹಾಕಿರುವುದಾಗಿ ಫೇಸ್ ಬುಕ್ ತಿಳಿಸಿದೆ. ಅಫ್ಘಾನಿಸ್ತಾನ ವಿದ್ಯಮಾನಗಳನ್ನು ಪರಿಶೀಲಿಸಲು ಪ್ರತ್ಯೇಕ ತಂಡವನ್ನು ಫೇಸ್ ಬುಕ್ ನಿಯೋಜಿಸಿದ್ದು ತಾಲಿಬಾನ್ ಬೆಂಬಲಿಗರು ನಾಯಕರಿಂದ ಹಾಗೂ ತಾಲಿಬಾನ್ ಕುರಿತು ಫೇಸ್ ಬುಕ್ ನಲ್ಲಿ ಶೇರ್ ಮಾಡಲ್ಪಡುವ ಪೋಸ್ಟ್ ಗಳ ಮೇಲೆ ನಿಗಾ ಇರಿಸಲಿದೆ. 

ಹಲವು ವರ್ಷಗಳಿಂದ ತಾಲಿಬಾನ್ ಸಂಘಟನೆ ಜನರಲ್ಲಿ ಭಯ ಬಿತ್ತಲು ಸಾಮಾಜಿಕ ಜಾಲತಾಣಗಳ ಬಳಕೆ ಮಾಡಿಕೊಂಡಿತ್ತು. ಫೇಸ್ ಬುಕ್ ಸಂಸ್ಥೆಯ ಅಧೀನದಲ್ಲಿರುವ ವಾಟ್ಸ್ ಆಪ್ ಮತ್ತು ಇನ್ಸ್ಟಾಗ್ರಾಂಗೂ ಈ ನಿಯಮಾವಳಿ ಅನ್ವಯವಾಗಲಿದೆ. 

ಅಂತಾರಾಷ್ಟ್ರೀಯ ಸಮುದಾಯದ ಅಭಿಪ್ರಾಯಗಳ ಅನ್ವಯ ತಾನು ಕಾರ್ಯಾಚರಿಸುವುದಾಗಿ ಫೇಸ್ ಬುಕ್ ಹೇಳಿಕೊಂಡಿದೆ. ಅಂದರೆ ತಾಲಿಬಾನ್ ಸರ್ಕಾರದ ಮಾತಿಗೆ ತಾನು ಕಿವಿಗೊಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದಂತಾಗಿದೆ.

SCROLL FOR NEXT