ವಿದೇಶ

ಆಗಸ್ಟ್ 31ರ ಗಡುವು ಮೀರಿದರೆ ಪರಿಣಾಮ ಎದುರಿಸಬೇಕಾಗುತ್ತದೆ: ಅಮೆರಿಕಾ, ಬ್ರಿಟನ್ ಗೆ ತಾಲೀಬಾನ್ ಎಚ್ಚರಿಕೆ

Srinivas Rao BV

ಕಾಬೂಲ್‌: ಅಫ್ಘಾನಿಸ್ತಾನದಿಂದ ಸೇನಾ ಪಡೆಗಳನ್ನು ಹಿಂಪಡೆದುಕೊಳ್ಳಲು ಹೆಚ್ಚುವರಿ ಸಮಯ ಕೋರಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕಾ ಹಾಗೂ ಬ್ರಿಟನ್ ದೇಶಗಳಿಗೆ ತಾಲಿಬಾನ್‌ ಗಳು  ಹೊಸದಾಗಿ ಎಚ್ಚರಿಕೆ ನೀಡಿದ್ದಾರೆ.   

ಸೇನಾ ಪಡೆಗಳನ್ನು ಹಿಂಪಡೆಯುವುದಕ್ಕೆ ಆಗಸ್ಟ್‌  31ರ  ಅಂತಿಮ ಗಡುವು ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿವೆ.

ಆಗಸ್ಟ್‌  31ವೇಳೆಗೆ ಸೇನಾ ಪಡೆಗಳ ವಾಪಸಾತಿ ಪೂರ್ಣಗೊಳಿಸಲಿದ್ದೇವೆ ಎಂದು ಅಮೆರಿಕಾ ಅಧ್ಯಕ್ಷ  ಬೈಡನ್‌  ಅವರೇ  ಖುದ್ದು ಘೋಷಿಸಿದ್ದರು. ಈ ಗಡುವನ್ನು ಅಮೆರಿಕವಾಗಲಿ, ಬ್ರಿಟನ್‌ ಆಗಲಿ ವಿಸ್ತರಿಸಿದ್ದೇ ಆದರೆ,     ಅವರು ಅಫ್ಘಾನಿಸ್ತಾನದಲ್ಲಿ ಮತ್ತಷ್ಟು ಸಮಯ ಉಳಿಯಲು  ನಿರ್ಣಯಿಸದಂತೆ ಎಂದು ಭಾವಿಸಿದಂತಾಗುತ್ತದೆ.
 
ಅವರು ತಮ್ಮ ನಿರ್ಣಯಗಳಿಗೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು  ತಾಲಿಬಾನ್‌  ವಕ್ತಾರ  ಸುಹೇಲ್‌ ಶಾಹಿನ್‌ ಎಚ್ಚರಿಕೆ ನೀಡಿದ್ದಾರೆ.

ಗಡುವು ವಿಸ್ತರಣೆ ಕೇಳಿದಲ್ಲಿ ಅದು ನಮ್ಮ ನಡುವೆ ಅಪನಂಬಿಕೆ ಉಂಟುಮಾಡಲಿದ್ದು ಪ್ರತಿಕ್ರಿಯೆಯನ್ನು ಪ್ರಚೋದಿಸಲಿದೆ ಎಂದು ತಾಲೀಬಾನ್ ವಕ್ತಾರರು ಹೇಳಿದ್ದಾರೆ.

ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದಿಂದ ವಿದೇಶಿ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುವುದಕ್ಕೂ ಹಾಗೂ ಆ.31 ರ ಗಡುವಿಗೂ ಅಂತರ ಕಡಿಮೆ ಇರುವುದರಿಂದ ಅಮೆರಿಕಾದ ಮೇಲೆ ಆ.31 ರ ಗಡುವು ವಿಸ್ತರಿಸಿಕೊಳ್ಳಬೇಕೆಂಬ ಒತ್ತಡ ಜಾಗತಿಕ ಸಮುದಾಯದಿಂದ ಹೆಚ್ಚಾಗುತ್ತಿದೆ. ಈ ನಡುವೆ ಅಫ್ಘಾನಿಸ್ತಾನದ ಬೆಳವಣಿಗೆ ಸಂಬಂಧ ಬ್ರಿಟನ್ ಪ್ರಧಾನಿ ತುರ್ತಾಗಿ ಜಿ-7 ಸಭೆಯನ್ನು ನಡೆಸಲು ಮುಂದಾಗಿದ್ದಾರೆ. 

SCROLL FOR NEXT