ಅಮೆರಿಕ ಅಧ್ಯಕ್ಷ ಜೋ- ಬೈಡನ್ 
ವಿದೇಶ

ಅಫ್ಘಾನಿಸ್ತಾನ ಭಯೋತ್ಪಾದನೆಯ ನೆಲೆಯಾಗದಂತೆ ತಡೆಯಲು ಜಿ-7 ರಾಷ್ಟ್ರಗಳು ಒಪ್ಪಿಗೆ: ಜೋ ಬೈಡನ್

ತಾಲಿಬಾನ್ ವಿಚಾರದಲ್ಲಿ ಜಿ-7 ರಾಷ್ಟ್ರಗಳು ಒಗ್ಗಟ್ಟಾಗಿದ್ದು, ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ನೆಲೆಯಾಗದಂತೆ ತಡೆಯಲು ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ವಾಷಿಂಗ್ಟನ್:  ತಾಲಿಬಾನ್ ವಿಚಾರದಲ್ಲಿ ಜಿ-7 ರಾಷ್ಟ್ರಗಳು ಒಗ್ಗಟ್ಟಾಗಿದ್ದು, ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ನೆಲೆಯಾಗದಂತೆ ತಡೆಯಲು ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಜಿ-7, ವಿಶ್ವಸಂಸ್ಥೆ, ನ್ಯಾಟೋ ಮತ್ತು ಯುರೋಪಿಯನ್ ಯೂನಿಯನ್ ಮುಖಂಡರುಗಳ ಜೊತೆಗೆ ಮಂಗಳವಾರ ನಡೆದ ವರ್ಚುಯಲ್ ಸಭೆಯ ಬಳಿಕ ಬೈಡನ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಜಿ-7  ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಇಂಗ್ಲೆಂಡ್ ನೊಳ್ಳಗೊಂಡ ಅಂತರ್ ಸರ್ಕಾರಿ ರಾಜಕೀಯ ವೇದಿಕೆಯಾಗಿದೆ. ತಾಲಿಬಾನ್ ವಿಚಾರದಲ್ಲಿ ಒಗ್ಗಟ್ಟಿನಿಂದ ನಿಲ್ಲುವುದಾಗಿ ಜಿ-7, ಯುರೋಪಿಯನ್ ಯೂನಿಯನ್, ನ್ಯಾಟೋ ಮತ್ತು ವಿಶ್ವಸಂಸ್ಥೆಯ ನಾಯಕರು ಒಪ್ಪಿಕೊಂಡಿರುವುದಾಗಿ ಶ್ವೇತಭವನದಲ್ಲಿ ಬೈಡನ್ ತಿಳಿಸಿದರು. 

ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ಮೂಲ ನೆಲೆಯಾಗದಂತೆ ತಡೆಗಟ್ಟುವುದು ಸೇರಿದಂತೆ ಅಫ್ಘಾನಿಸ್ತಾದಲ್ಲಿ ಯಾವುದೇ ಭವಿಷ್ಯದ ಸರ್ಕಾರದ ನ್ಯಾಯಸಮ್ಮತತೆಯು ಅಂತರಾಷ್ಟ್ರೀಯ ಬಾಧ್ಯತೆಗಳನ್ನು ಎತ್ತಿಹಿಡಿಯಲು ಈಗ (ತಾಲಿಬಾನ್) ತೆಗೆದುಕೊಳ್ಳುವ ವಿಧಾನವನ್ನು ಅವಲಂಬಿಸಿದೆ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ, ಜಿ-7 ದೇಶಗಳು ತಮ್ಮಲ್ಲಿ ಯಾರೂ ತಾಲಿಬಾನ್‌ ಮಾತನ್ನು ತೆಗೆದುಕೊಳ್ಳುವುದಿಲ್ಲ ಎಂದು ಒಪ್ಪಿಕೊಂಡಿವೆ ಎಂದು ಬೈಡನ್ ಹೇಳಿದರು.

ತಾಲಿಬಾನ್ ಕ್ರಮಗಳಿಂದ ನಾವು ನಿರ್ಣಯಿಸುತ್ತೇವೆ, ತಾಲಿಬಾನ್ ನಡವಳಿಕೆಗೆ ಯಾವುದೇ ಕ್ರಮ ಕೈಗೊಳ್ಳಬೇಕಾದರೂ ನಾವು ನಿಕಟ ಸಹಕಾರದಿಂದ ಇರುತ್ತೇವೆ, ಇದೇ ವೇಳೆ ಆಫ್ಘನ್ ಜನರಿಗೆ ಮಾನವೀಯ ಬದ್ಧತೆಯನ್ನು ನಾವು ನವೀಕರಿಸಿದ್ದು, ಅಫ್ಘಾನಿಸ್ತಾನದಲ್ಲಿ ಅನಿಯಮಿತ ಮಾನವೀಯ ಪ್ರವೇಶದೊಂದಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರ ಪ್ರಸ್ತಾವನೆಯನ್ನು ಬೆಂಬಲಿಸಿದ್ದೇವೆ ಎಂದು ಬಿಡೆನ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಯಕತ್ವ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಗರಂ; ನಾಯಕರಿಗೆ ಖಡಕ್ ಸಂದೇಶ

ಡಿ.26ರಿಂದ ರೈಲ್ವೆ ಪ್ರಯಾಣ ದರ ಏರಿಕೆ; 500 ಕಿ.ಮೀವರೆಗಿನ ಪ್ರಯಾಣಕ್ಕೆ ನಾನ್ ಎಸಿ ರೈಲುಗಳಲ್ಲಿ 10 ರೂ. ಹೆಚ್ಚಳ!

U-19 Asia Cup ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಹೀನಾಯ ಸೋಲು!

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ನೇತೃತ್ವದ ಮಹಾಯುತಿ ಮ್ಯಾಜಿಕ್; ಅಘಾಡಿ ಗಾಡಿ ಪಂಕ್ಚರ್!

Pakistan: 17 ವರ್ಷ ಜೈಲು ಶಿಕ್ಷೆ ಹಿನ್ನೆಲೆ, ದೇಶಾದ್ಯಂತ ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗಿ, ಇಮ್ರಾನ್ ಖಾನ್ ಕರೆ!

SCROLL FOR NEXT