ವಿದೇಶ

ಆಗಸ್ಟ್ 31 ರಂದು ಸೇನೆ ಹಿಂಪಡೆಯುವ ನಿರ್ಧಾರಕ್ಕೆ ಬದ್ಧ: ಜೋ ಬೈಡನ್

Nagaraja AB

ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಇದೇ 31 ರಂದು ಎಲ್ಲಾ ಅಮೆರಿಕನ್ ಸೈನಿಕರನ್ನು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ತಾನು ಬದ್ಧನಾಗಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಪುನರುಚ್ಚರಿಸಿದ್ದಾರೆ.

"ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಸ್ಥಾಪಿಸಲು ನಾವು ಅಮೆರಿಕಾದ ಜೀವಗಳನ್ನು ತ್ಯಾಗ ಮಾಡಬೇಕು ಎಂದು ನಾನು ಎಂದಿಗೂ ಭಾವಿಸಿಲ್ಲ, ಅಫ್ಘಾನಿಸ್ತಾನ ತನ್ನ ಇಡೀ ಇತಿಹಾಸದಲ್ಲಿ ಎಂದಿಗೂ ಒಗ್ಗಟ್ಟಿನ ದೇಶವಾಗಿರಲಿಲ್ಲ. ಇಪ್ಪತ್ತು ವರ್ಷಗಳ ಯುದ್ಧವನ್ನು ಕೊನೆಗೊಳಿಸುವ ಸಮಯ ಬಂದಿದೆ" ಎಂದಿದ್ದಾರೆ.

ಭಯೋತ್ಪಾದಕರು ಕಾಬೂಲ್ ವಿಮಾನ ನಿಲ್ದಾಣದ ಮೇಲೆ ದಾಳಿ ಹತ್ತಾರು ಅಮೆರಿಕನ್ ಸೇನಾಧಿಕಾರಿಗಳು ಸೇರಿದಂತೆ ಹಲವಾರು ಜನರನ್ನು ಕೊಂದ ಸಂದರ್ಭದಲ್ಲಿಯೂ ಜೋ ಬಿಡೆನ್ ಇದೇ ಹೇಳಿಕೆ ನೀಡಿದ್ದರು. ಸಾವಿರಾರು ಅಫ್ಘಾನ್ ನಾಗರಿಕರು ಮತ್ತು ವಿದೇಶಿ ಪ್ರಜೆಗಳು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸ್ಥಳಾಂತರಗೊಳ್ಳಲು ಕಾಯುತ್ತಿದ್ದಾರೆ ಎಂಬುದು ಈ ಸಂದರ್ಭದಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. 

SCROLL FOR NEXT