ವಿದೇಶ

ಅಫ್ಘಾನಿಸ್ತಾನದಿಂದ ಸುಮಾರು 5,500 ಅಮೆರಿಕದ ಪ್ರಜೆಗಳ ಸ್ಥಳಾಂತರ

Nagaraja AB

ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಸುಮಾರು 5,500 ಅಮೆರಿಕದ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.  ಇನ್ನೂ ಸುಮಾರು 250 ಅಮೆರಿಕನ್ ಪ್ರಜೆಗಳು ಯುದ್ಧ ಪೀಡಿತ ರಾಷ್ಟ್ರವನ್ನು ತೊರೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಟೇಟ್ ಡಿಪಾರ್ಟ್ ಮೆಂಟ್ ಭಾನುವಾರ ಹೇಳಿದೆ. ಆಗಸ್ಟ್ 14 ರಂದು ಅಫ್ಘಾನಿಸ್ತಾನ ಸರ್ಕಾರ ಪತನಗೊಂಡು ತಾಲಿಬಾನ್ ವಶಕ್ಕೆ ಪಡೆದ ನಂತರ ಕಾಬೂಲ್ ನಲ್ಲಿ ಅವ್ಯವಸ್ಥೆ ಉಂಟಾಗಿದೆ. 

ಆಗಸ್ಟ್ 14ರಿಂದ ಸುಮಾರು 5,500 ಅಮೆರಿಕದ ಪ್ರಜೆಗಳು,ಅದಕ್ಕೂ ಹೆಚ್ಚಿನ ಸಂಖ್ಯೆಯ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಸಾಧ್ಯತೆಯಿದೆ. ಇನ್ನೂ ಅಲ್ಲಿಯೇ ಇರುವ ಸುಮಾರು 250 ಅಮೆರಿಕದ ನಾಗರಿಕರು ಅಫ್ಘಾನಿಸ್ತಾನವನ್ನು ತೊರೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಜ್ಯ ಇಲಾಖೆ ವಕ್ತಾರರೊಬ್ಬರು ಹೇಳಿದ್ದಾರೆ.

ಅಫ್ಘಾನಿಸ್ತಾನದ ಪ್ರಸ್ತುತದಲ್ಲಿನ ಸುರಕ್ಷತೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಮೆರಿಕದ ಜನರಿಗೆ ದಿನದ 24 ಗಂಟೆಯೂ ಸಹಕಾರದ ನೆರವನ್ನು ನಮ್ಮ ತಂಡ ಮುಂದುವರೆಸಿದೆ. ಕೆಲವರು ಈಗಾಗಲೇ ಹಮೀದ್ ಕರ್ಜೈ ವಿಮಾನ ನಿಲ್ದಾಣ ತಲುಪಿದ್ದು, ಎಲ್ಲಾ ರೀತಿಯ ಮಾಹಿತಿಯನ್ನು ಅವರಿಗೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. 

ಅಪ್ಘಾನಿಸ್ತಾನದಲ್ಲಿರುವ ತಮ್ಮ ದೇಶದ ನಾಗರಿಕರು,ಉದ್ಯೋಗಿಗಳು, ಅವರೊಂದಿಗೆ ಕೆಲಸ ಮಾಡುತ್ತಿದ್ದ ಆಪ್ಘನ್ ಜನರನ್ನು ಸುರಕ್ಷಿತವಾಗಿ ಅಫ್ಘಾನಿಸ್ತಾನದಿಂದ ಮುಕ್ತವಾಗಿ ಬೇರೆಡೆಗೆ ಸ್ಥಳಾಂತರಿಸಲು ಬದ್ಧವಾಗಿರುವುದಾಗಿ ಅಮೆರಿಕ ನೇತೃತ್ವದ ಅನೇಕ ರಾಷ್ಟ್ರಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

SCROLL FOR NEXT