ಹಿಬತ್-ಉಲ್ಲಾಹ್ ಅಖುಂಡಜಾದ 
ವಿದೇಶ

ಅಫ್ಘಾನಿಸ್ತಾನ ತಾಲೀಬಾನ್ ವಶವಾದರೂ ಅದರ ಸರ್ವೋಚ್ಛ ನಾಯಕ ಇನ್ನೂ ಅಜ್ಞಾತ ಸ್ಥಳದಲ್ಲಿರುವುದೇಕೆ?

 ಅಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಉಗ್ರ ಸಂಘಟನೆಯ ಹಲವು ಮುಖಗಳು-ಕಮಾಂಡೋಗಳು, ಸಶಸ್ತ್ರ ಮದರಸಾ ವಿದ್ಯಾರ್ಥಿಗಳು, ನಾಯಕರು ಹಲವು ವರ್ಷಗಳ ಅಜ್ಞಾತವಾಸದಿಂದ ಹೊರಬರಲಾರಂಭಿಸಿದ್ದಾರೆ.

ಕಾಬೂಲ್: ಅಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಉಗ್ರ ಸಂಘಟನೆಯ ಹಲವು ಮುಖಗಳು-ಕಮಾಂಡೋಗಳು, ಸಶಸ್ತ್ರ ಮದರಸಾ ವಿದ್ಯಾರ್ಥಿಗಳು, ನಾಯಕರು ಹಲವು ವರ್ಷಗಳ ಅಜ್ಞಾತವಾಸದಿಂದ ಹೊರಬರಲಾರಂಭಿಸಿದ್ದಾರೆ.

ಆದರೆ ಪ್ರಮುಖವಾದ ಮುಖ- ತಾಲೀಬಾನ್ ನ ಸರ್ವೋಚ್ಛ ನಾಯಕ ಹಿಬತ್-ಉಲ್ಲಾಹ್ ಅಖುಂಡಜಾದ ಮಾತ್ರ ಇನ್ನೂ ಅಜ್ಞಾತ ಸ್ಥಳದಲ್ಲೇ ಉಳಿದಿದ್ದು ಉಗ್ರ ಸಂಘಟನೆಯ ವಕ್ತಾರರು ಆತ ಶೀಘ್ರವೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ.

"ಆತ ಕಂದಹಾರ್ ನಲ್ಲಿದ್ದಾನೆ. ಪ್ರಾರಂಭದ ದಿನಗಳಿಂದಲೂ ಆತ ಅಲ್ಲಿಯೇ ಇದ್ದಾನೆ, ಶೀಘ್ರವೇ ಸಾರ್ವಜನಿಕವಾಗಿ ಪ್ರಕಟಗೊಳ್ಳಲಿದ್ದಾನೆ" ಎಂದು ತಾಲೀಬಾನ್ ಉಗ್ರ ಸಂಘಟನೆಯ ವಕ್ತಾರ ಜಬಿಹ್-ಉಲ್ಲಾಹ್ ಮುಜಾಹಿದ್ ಹೇಳಿದ್ದಾನೆ.

ತಾಲೀಬಾನ್ ಹಲವು ಉಗ್ರ ಸಂಘಟನೆಗಳ ಪ್ರತಿನಿಧಿಗಳಿರುವ ಒಂದು ಉಗ್ರರ ವ್ಯವಸ್ಥಿತ ಜಾಲ. ತಾಲಿಬಾನ್ ನ ಸಂಸ್ಥಾಪಕ ಮುಲ್ಲಾ ಓಮರ್ ನ ಸಾವಿನ ವಿಷಯ ಹಲವು ವರ್ಷಗಳ ನಂತರ ಬಹಿರಂಗಗೊಂಡಿದ್ದು ಹಾಗೂ ಈ ಹಿಂದೆ ನಾಯಕತ್ವ ವಹಿಸಿದ್ದ ಮುಲ್ಲಾ ಅಖ್ತರ್ ಮನ್ಸೂರ್ ಅಮೆರಿಕ ನಡೆಸಿದ ಡ್ರೋನ್ ಸ್ಟ್ರೈಕ್ ನಲ್ಲಿ ಸಾವನ್ನಪ್ಪಿದ್ದರ ಪರಿಣಾಮ 2016 ರಲ್ಲಿ ತಾಲೀಬಾನ್ ಚಳುವಳಿಯಲ್ಲಿ ಅಧಿಕಾರಕ್ಕಾಗಿ ಆಂತರಿಕ ಕಲ ಉಂಟಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ತಾಲೀಬಾನ್ ನೇತೃತ್ವ ವಹಿಸಿದ್ದು ಇದೇ ಹಿಬತ್-ಉಲ್ಲಾಹ್ ಅಖುಂಡಜಾದ.

ತಾನು ಅಧಿಕಾರ ವಹಿಸಿಕೊಂಡ ಬಳಿಕ ಬಂಡಾಯವನ್ನು ಶಮನಗೊಳಿಸುವುದರ ಜೊತೆಗೆ, ಅಧಿಕಾರಕ್ಕಾಗಿನ ಕಲಹದಿಂದ ಹರಿದು ಹಂಚಿಹೋಗಿದ್ದ ಜಿಹಾದಿ ಚಳುವಳಿಯಲ್ಲಿ ಒಗ್ಗಟ್ಟನ್ನು ತರುವುದಕ್ಕೂ ಈತ ಯತ್ನಿಸಿದ್ದ.

ತಾಲೀಬಾನ್ ಗೆ ಸಂಬಂಧಿಸಿದಂತೆ ಹಿಬತ್-ಉಲ್ಲಾಹ್ ಅಖುಂಡಜಾದ ನ ದಿನ ನಿತ್ಯದ ಚಟುವಟಿಕೆಗಳು ಬಹುತೇಕ ಗೌಪ್ಯವಾಗಿಯೇ ಇರುತ್ತವೆ. ಸಾರ್ವಜನಿಕವಾಗಿ ಸಾಧ್ಯವಾದಷ್ಟೂ ದೂರ ಉಳಿಯುವ ಈ ವ್ಯಕ್ತಿ ಇಸ್ಲಾಮಿಕ್ ರಜೆ ದಿನಗಳಲ್ಲಿ ಮಾತ್ರ ಹೊರಬಂದು ಸಂದೇಶ ನೀಡುತ್ತಾನೆ.

ತಾಲಿಬಾನ್ ಈತನ ಫೋಟೋ ಬಿಡುಗಡೆ ಮಾಡಿರುವುದನ್ನು ಹೊರತುಪಡಿಸಿದರೆ ಈತ ಸಾರ್ವಜನಿಕವಾಗಿ ಎಂದಿಗೂ ಕಾಣಿಸಿಕೊಂಡಿಲ್ಲ. ತಾಲೀಬಾನ್ ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆಯಿತಾದರೂ ಅಖುಂಡಜಾದ ಬಗ್ಗೆ "ಶೀಘ್ರವೇ ಆತನನ್ನು ನೋಡುತ್ತೀರಿ" ಎಂಬ ಮಾತನ್ನು ಹೊರತುಪಡಿಸಿ ಸಂಘಟನೆ ಯಾವುದೇ ಮಾಹಿತಿಯನ್ನೂ ಬಹಿರಂಗಪಡಿಸಿರಲಿಲ್ಲ. 

ಅಜ್ಞಾತದ ರಹಸ್ಯವೇನು?

ತಾಲೀಬಾನ್ ನ ಸರ್ವೋಚ್ಛ ನಾಯಕರು ಅಜ್ಞಾತ ಸ್ಥಳಗಳಲ್ಲೇ ಇರುವುದಕ್ಕೆ ಇಚ್ಛಿಸುವುದು ಹೊಸತೇನು ಅಲ್ಲ. ನಟೋರಿಯಸ್ ಹಾಗೂ ತೀವ್ರಗಾಮಿಯಾಗಿದ್ದ ಉಗ್ರ ಮುಲ್ಲಾ ಮೊಹಮ್ಮದ್ ಈ ಹಿಂದೆ ಅಫ್ಘಾನಿಸ್ತಾನ 1990 ರಲ್ಲಿ ತಾಲಿಬಾನ್ ವಶದಲ್ಲಿದ್ದಾಗಲೂ ಆತ ಕಂದಹಾರ್ ನಲ್ಲೇ ತನ್ನ ಸುತ್ತ ಕಟ್ಟಿಕೊಂಡಿದ್ದ ಭದ್ರ ಕೋಟೆಯಿಂದ ಸ್ಹೊರಬರುತ್ತಿದ್ದದ್ದು ಅಪರೂಪವೇ. ಆದರೂ ಆತ ಹೇಳಿದ್ದೇ ಕಾನೂನಾಗಿರುತ್ತಿತ್ತು.

ಅಂತಾರಾಷ್ಟ್ರೀಯ ಬಿಕ್ಕಟ್ಟು ತಂಡದ ಏಷ್ಯಾ ಯೋಜನೆಯ ಮುಖ್ಯಸ್ಥರಾಗಿರುವ ಲಾರೆಲ್ ಮಿಲ್ಲರ್ ಹಿಬತ್-ಉಲ್ಲಾಹ್ ಅಖುಂಡಜಾದನ ಬಗ್ಗೆ ಮಾತನಾಡಿದ್ದು, ಈತನೂ ಓಮರ್ ನ ಶೈಲಿಯನ್ನೇ ಅಳವಡಿಸಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾರೆ.

ಇನ್ನು ರಹಸ್ಯ ಸ್ಥಳದಲ್ಲಿರುವುದಕ್ಕೆ ಮತ್ತೊಂದು ಕಾರಣ ಭಯ ಹಾಗೂ ಭದ್ರತೆಯೂ ಇರಬಹುದು. ಅಮೆರಿಕ ಡ್ರೋನ್ ದಾಳಿಯಲ್ಲಿ ಮುಲ್ಲಾಹ್ ಅಖ್ತರ್ ಮನ್ಸೂರ್ ಮಾದರಿಯಲ್ಲೇ ತನಗೂ ಅಪಾಯ ಉಂಟಾಗಬಹುದೆಂಬ ಕಾರಣಕ್ಕಾಗಿ ಈತನೂ ಅಜ್ಞಾತ ಸ್ಥಳದಲ್ಲಿರಬಹುದೆಂದು ವಿಶ್ಲೇಷಿಸಲಾಗುತ್ತಿದೆ. ಆದರೆ ತಾನು ಇನ್ನೂ ಜೀವಂತ ಇದ್ದೇನೆ ಎಂಬುದನ್ನು ತಿಳಿಸುವುದಕ್ಕಾಗಿ "ಶೀಘ್ರವೇ ಬಹಿರಂಗವಾಗಿ ಕಾಣಿಸಿಕೊಳ್ಳುತ್ತೇನೆ" ಎಂದು ತನ್ನ ಸಂಘಟನೆಯವರಿಂದ ಹೇಳಿಸುತ್ತಿರುವುದಕ್ಕೆ ಕಾರಣ ಇರಬಹುದು ಎನ್ನಲಾಗುತ್ತಿದೆ.

ಆದರೆ ಒಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಂತರ ವಾಪಸ್ ಮತ್ತೆ ಅಜ್ಞಾತ ಸ್ಥಳದಿಂದಲೇ ಓಮರ್ ಮಾದರಿಯಲ್ಲಿ ನಾಯಕತ್ವವನ್ನು ಮುನ್ನಡೆಸಬಹುದೆಂದೂ ವಿಶ್ಲೇಷಿಸಲಾಗುತ್ತಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT