ವಿದೇಶ

ಭಾರತದ ಪ್ರತಿಭಟನೆಗೆ ಮಣಿದ ಚೀನಾ: ಶ್ರೀಲಂಕಾ ದ್ವೀಪಗಳಲ್ಲಿನ ಯೋಜನೆಗಳನ್ನು ಸ್ಥಗಿತಗೊಳಿಸಿದ ಡ್ಯ್ರಾಗನ್ ರಾಷ್ಟ್ರ

ಶ್ರೀಲಂಕಾದ ಮೂರು ದ್ವೀಪಗಳಲ್ಲಿ ಹೈಬ್ರಿಡ್ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಿರುವ ಚೀನಾದ ಯೋಜನೆಗಳ ಸಂಬಂಧ ಭಾರತ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದು ಇದರ ಬೆನ್ನಲ್ಲೇ ಈ ಯೋಜನೆಗಳನ್ನು ಸ್ಥಗಿತಗೊಳಿಸುವುದಾಗಿ ಚೀನಾ ಹೇಳಿದೆ.

ಕೊಲಂಬೊ: ಶ್ರೀಲಂಕಾದ ಮೂರು ದ್ವೀಪಗಳಲ್ಲಿ ಹೈಬ್ರಿಡ್ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಿರುವ ಚೀನಾದ ಯೋಜನೆಗಳ ಸಂಬಂಧ ಭಾರತ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದು ಇದರ ಬೆನ್ನಲ್ಲೇ ಈ ಯೋಜನೆಗಳನ್ನು ಸ್ಥಗಿತಗೊಳಿಸುವುದಾಗಿ ಚೀನಾ ಹೇಳಿದೆ.

ಭಾರತದ ಹೆಸರನ್ನು ಉಲ್ಲೇಖಿಸದೆ 'ಮೂರನೇ ವ್ಯಕ್ತಿ' ಎತ್ತಿರುವ 'ಭದ್ರತಾ ಕಾಳಜಿ'ಯನ್ನು ಉಲ್ಲೇಖಿಸಿ ಈ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಶ್ರೀಲಂಕಾದಲ್ಲಿರುವ ಚೀನಾದ ರಾಯಭಾರಿ ಕಚೇರಿ ಬುಧವಾರ ಟ್ವೀಟ್‌ ಮಾಡಿದೆ.

ಟ್ವೀಟ್ ನಲ್ಲಿ 'ಮೂರನೇ ವ್ಯಕ್ತಿಯಿಂದ ವ್ಯಕ್ತವಾದ ಸುರಕ್ಷತೆಯ ಕಾಳಜಿಯಿಂದಾಗಿ ಉತ್ತರ ದ್ವೀಪಗಳಲ್ಲಿ ಮೂವರು ಹೈಬ್ರಿಡ್ ಪವರ್ ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸುವುದನ್ನು 'ಸೈನೋ ಸೋರ್ ಹೈಬ್ರಿಡ್ ಟೆಕ್ನಾಲಜಿ' ನಿಲ್ಲಿಸಲಾಗಿದೆ ಎಂದು ತಿಳಿಸಿದೆ. 

ಜನವರಿಯಲ್ಲಿ ಚೀನಾದ ಕಂಪನಿ 'ಸಿನೋ ಸೋರ್ ಹೈಬ್ರಿಡ್ ಟೆಕ್ನಾಲಜಿ'ಗೆ ಜಾಫ್ನಾ ಕರಾವಳಿಯ ಡೆಲ್ಫ್ಟ್, ನಗಾಡಿಪಾ ಮತ್ತು ಅಲಂಥಿವು ದ್ವೀಪಗಳಲ್ಲಿ ಹೈಬ್ರಿಡ್ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳನ್ನು ಸ್ಥಾಪಿಸಲು ಗುತ್ತಿಗೆ ನೀಡಲಾಯಿತು. . ಈ ಮೂರು ದ್ವೀಪಗಳು ತಮಿಳುನಾಡಿನ ಸಮೀಪದಲ್ಲಿವೆ.

ಬದಲಿಗೆ ಮಾಲ್ಡೀವ್ಸ್‌ನಲ್ಲಿ 12 ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಚೀನಾ ನವೆಂಬರ್ 29ರಂದು ಮಾಲೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಗಮನ ಸೆಳೆದಿದೆ. 2021ರ ಆರಂಭದಲ್ಲಿ, ಡೆಲ್ಫ್ಟ್, ನಗಾಡಿಪಾ ಮತ್ತು ಅನಲತೀವುಗಳಲ್ಲಿ ನವೀಕರಿಸಬಹುದಾದ ಇಂಧನ ಸ್ಥಾವರಗಳ ನಿರ್ಮಾಣ ಕಾರ್ಯವನ್ನು ಚೀನಾದ ಕಂಪನಿಗೆ ಹಸ್ತಾಂತರಿಸುವ ಕುರಿತು ಭಾರತವು ಶ್ರೀಲಂಕಾಗೆ 'ಬಲವಾದ ಪ್ರತಿಭಟನೆಯನ್ನು' ಸಲ್ಲಿಸಿತು. 

ಈ ಒಪ್ಪಂದವು ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್(CEB) ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್(ADB) ನಿಂದ ಧನಸಹಾಯದೊಂದಿಗೆ ಜಾರಿಗೊಳಿಸುತ್ತಿರುವ 'ಸಹಾಯಕ ವಿದ್ಯುತ್ ಸರಬರಾಜು ವಿಶ್ವಾಸಾರ್ಹತೆ ಸುಧಾರಣೆ ಯೋಜನೆಯ' ಭಾಗವಾಗಿದೆ ಎಂದು ಅದು ಹೇಳಿದೆ.

ಕೊಲಂಬೊ ಬಂದರಿನ ಪೂರ್ವ ಕಂಟೈನರ್ ಟರ್ಮಿನಸ್ ಅನ್ನು ಅಭಿವೃದ್ಧಿಪಡಿಸಲು ಶ್ರೀಲಂಕಾ ಸರ್ಕಾರವು ಕಳೆದ ತಿಂಗಳು ಚೀನಾ ಸರ್ಕಾರ ನಡೆಸುವ ಚೀನಾ ಹಾರ್ಬರ್ ಎಂಜಿನಿಯರಿಂಗ್ ಕಂಪನಿಗೆ ಗುತ್ತಿಗೆ ನೀಡಿತು. ಕೆಲವು ತಿಂಗಳ ಹಿಂದೆ, ಆಳ ಸಮುದ್ರದ ಕಂಟೈನರ್ ಬಂದರು ನಿರ್ಮಿಸಲು ಭಾರತ ಮತ್ತು ಜಪಾನ್‌ನೊಂದಿಗೆ ಸಹಿ ಹಾಕಿದ್ದ ತ್ರಿಪಕ್ಷೀಯ ಒಪ್ಪಂದವನ್ನು ಲಂಕಾ ರದ್ದುಗೊಳಿಸಿತ್ತು.

ಚೀನಾ ವಿವಾದಾತ್ಮಕ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್(BRI) ಅಡಿಯಲ್ಲಿ ಶ್ರೀಲಂಕಾದಲ್ಲಿ ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಿದೆ. ಶ್ರೀಲಂಕಾದ ವಿವಿಧ ಯೋಜನೆಗಳಲ್ಲಿ ಅತಿದೊಡ್ಡ ಹೂಡಿಕೆದಾರರಲ್ಲಿ ಚೀನಾ ಒಂದಾಗಿದೆ. ಆದರೆ BRI ಉಪಕ್ರಮವು ಸ್ಥಳೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಟೀಕೆಗೆ ಒಳಗಾಗಿದೆ. ಚೀನಾ ಶ್ರೀಲಂಕಾವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ.

1.2 ಶತಕೋಟಿ ಡಾಲರ್ ಸಾಲದ ಕಾರಣದಿಂದಾಗಿ ಶ್ರೀಲಂಕಾವು ಹಂಬಂಟೋಟಾ ಬಂದರನ್ನು 2017ರಲ್ಲಿ 99 ವರ್ಷಗಳ ಕಾಲ ಚೀನಾದ ಕಂಪನಿಗೆ ಗುತ್ತಿಗೆ ನೀಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT