ವಿದೇಶ

ಸಂಬಳ ನೀಡಲಾಗದೆ ವಿಶ್ವಬ್ಯಾಂಕ್ ನೌಕರರಿಗೆ ಗೇಟ್ ಪಾಸ್: ತಾಲಿಬಾನ್ ಸರ್ಕಾರಕ್ಕೆ ಮುಖಭಂಗ

Harshavardhan M

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದೇಶದಲ್ಲಿ ಕಾರ್ಯಾಚರಿಸುತ್ತಿದ್ದ ವಿಶ್ವಬ್ಯಾಂಕ್ ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಆಫ್ಘನ್ನರನ್ನು ಕೆಲಸದಿಂದ ಗೇಟ್ ಪಾಸ್ ನೀಡಿದೆ. 

ಅಲ್ಲಿನ ಉದ್ಯೋಗಿಗಳಿಗೆ ಸಂಬಳ ನೀಡಲು ಸಾಮರ್ಥ್ಯ ಇಲ್ಲದೇ ಇರುವುದರಿಂದ ಅವರನ್ನು ಕೆಲಸದಿಂದ ಕಿತ್ತು ಹಾಕಲಾಗಿರುವುದಾಗಿ ತಾಲಿಬಾನ್ ಸ್ಪಷ್ಟನೆ ನೀಡಿದೆ.

ಅಲ್ಲಿನ ವಿಶ್ವಬ್ಯಾಂಕ್ ಕಚೇರಿಯಲ್ಲಿ ಕೆಲಸದಿಂದ ತೆಗೆದುಹಾಕಲ್ಪಟ್ಟ ನೌಕರರು 15,000 ರೂ.ಗಳಿಗೆ ಕೆಲಸಕ್ಕಿದ್ದರು ಎಂದು ತಿಳಿದುಬಂದಿದೆ.

ಆಫ್ಘನ್ ನೆಲದಲ್ಲಿ ಕಾರ್ಯಾಚರಿಸುತ್ತಿರುವ ವಿಶ್ವಸಂಸ್ಥೆ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳ ಉದ್ಯೋಗಿಗಳಿಗೂ ಹಲವು ತಿಂಗಳುಗಳಿಂದ ಸಂಬಳ ನೀಡಲಾಗಿಲ್ಲ.

SCROLL FOR NEXT