ವಿದೇಶ

ಇಂಗ್ಲೆಂಡ್: 1 ಲಕ್ಷ ರೂ. ಮೌಲ್ಯದ ಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಬಂದದ್ದು ಎರಡು ಕ್ಯಾಡ್ ಬರಿ ಚಾಕೋಲೇಟ್!

Nagaraja AB

ಲಂಡನ್: 1 ಲಕ್ಷ ಮೌಲ್ಯದ ಐಫೋನ್ ಆರ್ಡರ್ ಮಾಡಿದ್ದ ಇಂಗ್ಲೆಂಡ್  ಲೀಡ್ಸ್‌ ನ ಆನ್‌ಲೈನ್ ಶಾಪರ್ ಡೇನಿಯಲ್ ಕ್ಯಾರೊಲ್  ಅವರಿಗೆ ಫೋನ್ ಬದಲಿಗೆ ಎರಡು ಚಾಕೋಲೆಟ್ ಬಂದಿದೆ. ಇದನ್ನು ನೋಡಿ ದಂಗಾಗಿ ಹೋಗಿದ್ದಾರೆ.

ಈ ಕುರಿತು ಟ್ವೀಟರ್ ನಲ್ಲಿ ಬರೆದುಕೊಂಡಿರುವ ಕ್ಯಾರೊಲ್,  ಧೀರ್ಘ ವಾರಾಂತ್ಯದ ಬಳಿಕ ಹೊಸ  ಬ್ರಾಂಡೆಡ್ ಐಫೋನ್ 13 ಫ್ರೊ ಮ್ಯಾಕ್ಸ್  ಯುಕೆ ನೆಟ್ ವರ್ಕ್ ಡಿಹೆಚ್ ಎಲ್ ಪಾರ್ಸೆಲ್ ನಲ್ಲಿತ್ತು. ಅಂತಿಮವಾಗಿ ಡಿಹೆಚ್ ಎಲ್ ನಿಂದ ನಿನ್ನೆ ದಿನ ಪಾರ್ಸೆಲ್ ಬಂದಿದೆ. ಅದನ್ನು ತೆರೆದಾಗ ಐಫೋನ್ ಬದಲಿಗೆ ಎರಡು ಕ್ಯಾಡ್ ಬರಿ ಚಾಕೋಲೆಟ್ ಬಂದಿದೆ.

ಐಫೋನ್ ಮೊಬೈಲ್ ಗಾಗಿ 1,045 ಪೌಂಡ್ಸ್ ಪಾವತಿಸಿದ್ದ  ಡೇನಿಯಲ್,  120 ಗ್ರಾಂನ ಎರಡು ಟಾಯ್ಲೆಟ್ ರೋಲ್ ನಲ್ಲಿ ಸುತ್ತಿದ್ದ ಎರಡು ಚಾಕೋಲೆಟ್ ಫೋಟೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. 

ಮತ್ತೊಂದು ಫೋಸ್ಟ್ ನಲ್ಲಿ ಈ ಸಂಬಂಧ ವಿವರಣೆ ನೀಡಿರುವ ಡೇನಿಯಲ್, ಆಪಲ್ ವೆಬ್ ಸೈಟ್ ನಲ್ಲಿ ಡಿಸೆಂಬರ್ 2 ರಂದು ಫೋನ್ ಆರ್ಡರ್ ಮಾಡಿ್ದೆ. ಡಿಸೆಂಬರ್ 17 ರಂದೇ  ಅದು ಬರಬೇಕಾಗಿತ್ತು. ಆದರೆ, ಎರಡು ವಾರ ತಡವಾಗಿ ಪಾರ್ಸೆಲ್ ಸಿಕ್ಕಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಲೆವರಿ ಕಂಪನಿ, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಡೆನಿಯಲ್ ಅವರಿಗೆ ಕಳುಹಿಸಿರುವ ಪಾರ್ಸೆಲ್ ಬದಲಾಯಿಸುವಂತೆ ಅದನ್ನು ಕಳುಹಿಸಿದವರಿಗೆ ಹೇಳಲಾಗಿದೆ ಎಂದು ತಿಳಿಸಿದೆ. 

SCROLL FOR NEXT