ವಿದೇಶ

ನೇಪಾಳದ ಪ್ರಧಾನಿಯಾಗಿ ಶೇರ್ ಬಹದ್ದೂರ್ ದೇವುಬಾ ಪದಗ್ರಹಣ 

Srinivas Rao BV

ಕಠ್ಮಂಡು: ಶೇರ್ ಬಹದ್ದೂರ್ ದೇವುಬಾ ಅವರು ನೇಪಾಳದ ಪ್ರಧಾನಿಯಾಗಿ ಜು.13 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.  ದಾಖಲೆಯ 5 ನೇ ಬಾರಿಗೆ ದೇವುಬಾ ನೇಪಾಳದ ಪ್ರಧಾನಿಯಾಗಿ ದೇವುಬಾ ನೇಮಕಗೊಂಡಿದ್ದು, ಪ್ರಮಾಣವಚನ ಸ್ವೀಕಾರ ಸಮಾರಂಭ ಎರಡು ಗಂಟೆಗಳ ಕಾಲ ವಿಳಂಬವಾಗಿತ್ತು. 

ಸಂಜೆ 6:00 ಗಂಟೆಗೆ ಪದಗ್ರಹಣ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ರಾಷ್ಟ್ರಪತಿಗಳು ತಮ್ಮ ನೇಮಕಾತಿಯ ನೊಟೀಸ್ ನ್ನು ಪರಿಷ್ಕರಿಸುವವರೆಗೂ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಶೇರ್ ಬಹದ್ದೂರ್ ದೇವುಬಾ ಪಟ್ಟು ಹಿಡಿದಿದ್ದರಿಂದ ವಿಳಂಬವಾಯಿತು. 

2 ದಿನಗಳಲ್ಲಿ ಶೇರ್ ಬಹದ್ದೂರ್ ದೆವುಬಾ ಅವರನ್ನು ಪ್ರಧಾನಿಯಾಗಿ ನೇಮಕ ಮಾಡುವಂತೆ ಅಲ್ಲಿನ ಸರ್ವೋಚ್ಛ ನ್ಯಾಯಾಲಯ ಆದೇಶಿಸಿತ್ತು. ನೇಪಾಳದ ರಾಷ್ಟ್ರಪತಿ ವಿದ್ಯಾ ಭಂಡಾರಿ ಕೆಲ ದಿನಗಳ ಹಿಂದೆಷ್ಟೇ ನೇಪಾಳ ಸಂಸತ್ತನ್ನು ವಿಸರ್ಜಿಸಿದ್ದರು. ರಾಷ್ಟ್ರಪತಿಗಳ  ನಿರ್ಧಾರದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿತ್ತು. 

ಆದರೆ ನೊಟೀಸ್ ನಲ್ಲಿ ದೆವುಬಾ ಅವರನ್ನು ಅಲ್ಲಿನ ಸಂವಿಧಾನದ ಯಾವ ಆರ್ಟಿಕಲ್ ನ ಅಡಿಯಲ್ಲಿ ಪ್ರಧಾನಿಯನ್ನಾಗಿ ಮಾಡಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಲು ವಿಫಲವಾದ ಕಾರಣ, ನೇಮಕಾತಿಯ ನೊಟೀಸ್ ನ್ನು ಪರಿಷ್ಕರಿಸುವವರೆಗೂ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ದೆವುಬಾ ಪಟ್ಟು ಹಿಡಿದಿದ್ದರು. 

ನಂತರ ಕಾನೂನು ಸಲಹೆಗಾರರ ಜತೆ ಚರ್ಚಿಸಿ ರಾಷ್ಟ್ರಪತಿ ಭಂಡಾಗಿ ಅವರ ಕಚೇರಿಗೆ ನೊಟೀಸ್ ನ್ನು ಪರಿಷ್ಕರಿಸುವವರೆಗೂ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂಬ ಸಂದೇಶ ರವಾನೆ ಮಾಡಿದರು. ಎರಡು ಗಂಟೆಗಳ ನಂತರ ರಾಷ್ಟ್ರಪತಿಗಳ ಕಚೇರಿ ಪರಿಷ್ಕೃತ ನೊಟೀಸ್ ಜಾರಿಗೊಳಿಸಿದ ಬಳಿಕ ದೆವುಬಾ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 

SCROLL FOR NEXT