ಸಂಗ್ರಹ ಚಿತ್ರ 
ವಿದೇಶ

ಭಾರತೀಯ ನೌಕಾಪಡೆಗೆ ಅಮೆರಿಕಾದ ಎರಡು ಎಂಹೆಚ್-60ಆರ್ ಹೆಲಿಕಾಪ್ಟರ್ ಸೇರ್ಪಡೆ

ಅಮೆರಿಕ ನೌಕಾಪಡೆಯು ಮೊದಲ ಎರಡು ಎಂಹೆಚ್-60ಆರ್ ಹೆಲಿಕಾಪ್ಟರ್‌ಗಳನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ.

ವಾಷಿಂಗ್ಟನ್: ಅಮೆರಿಕ ನೌಕಾಪಡೆಯು ಮೊದಲ ಎರಡು ಎಂಹೆಚ್-60ಆರ್ ಹೆಲಿಕಾಪ್ಟರ್‌ಗಳನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ. 

ಮಲ್ಟಿ ರೋಲ್ ಹೆಲಿಕಾಪ್ಟರ್‌ ಎಂಆರ್ ಎಚ್ ಅನ್ನು ಭಾರತೀಯ ನೌಕಾಪಡೆಗೆ ಔಪಚಾರಿಕವಾಗಿ ಹಸ್ತಾಂತರಿಸುವ ಸಮಾರಂಭವನ್ನು ನೇವಲ್ ಏರ್ ಸ್ಟೇಷನ್ ನಾರ್ತ್ ಐಲ್ಯಾಂಡ್ ಅಥವಾ ಎನ್ಎಎಸ್ ನಾರ್ತ್ ಐಲ್ಯಾಂಡ್, ಸ್ಯಾನ್ ಡಿಯಾಗೋದಲ್ಲಿ ನಡೆಸಲಾಯಿತು.

ಸಮಾರಂಭದಲ್ಲಿ ಅಮೆರಿಕಾದಲ್ಲಿ ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಭಾಗವಹಿಸಿದ್ದರು. ಎಲ್ಲಾ ಹವಾಮಾನಗಳಿಗೂ ಹೊಂದಿಕೊಳ್ಳುವ ಬಹು ಪಾತ್ರ ಹೆಲಿಕಾಪ್ಟರ್‌ಗಳ ಸೇರ್ಪಡೆಯು ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ಸಂಬಂಧವನ್ನು ಬಲಪಡಿಸುತ್ತದೆ ಎಂದು ಸಂಧು ಹೇಳಿದ್ದಾರೆ.

"ಹೆಲಿಕಾಪ್ಟರ್ ಗಳ ಸೇರ್ಪಡೆ ಭಾರತ-ಅಮೆರಿಕ ರಕ್ಷಣಾ ಸಂಬಂಧಗಳನ್ನು ಬಲಪಡಿಸುತ್ತದೆ" ಎಂದು ಸಂಧು ಟ್ವೀಟ್ ಮಾಡಿದ್ದಾರೆ. 

ಕಳೆದ ಎರಡು ವರ್ಷಗಳಲ್ಲಿ ದ್ವಿಪಕ್ಷೀಯ ರಕ್ಷಣಾ ವ್ಯಾಪಾರವು 20 ಬಿಲಿಯನ್ ಡಾಲರ್‌ಗಳಿಗೆ ವಿಸ್ತರಿಸಿದೆ ಎಂದು ಅವರು ಗಮನಿಸಿದ್ದಾರೆ. ರಕ್ಷಣಾ ವ್ಯಾಪಾರವನ್ನು ಮೀರಿ, ಭಾರತ ಮತ್ತು ಯುಎಸ್ ಬೇರೆ ಬೇರೆ ಕ್ಷೇತ್ರಗಳಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. ವಿದೇಶಿ ಹೂಡಿಕೆದಾರರಿಗೆ ಹೊಸ ಅವಕಾಶಗಳನ್ನು ತೆರೆದಿಟ್ಟಿರುವ ಇತ್ತೀಚಿನ ದಿನಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಭಾರತ ಕೈಗೊಂಡಿರುವ ಸುಧಾರಣಾ ಕ್ರಮಗಳನ್ನೂ ಅವರು ಎತ್ತಿ ತೋರಿಸಿದರು.

ಎಂಹೆಚ್-60 ಆರ್ ಹೆಲಿಕಾಪ್ಟರ್‌ ಎಲ್ಲಾ ಹವಾಮಾನದಲ್ಲು ಚಲಾಯಿಸಬಲ್ಲ ಸಮುದ್ರ ಹೆಲಿಕಾಪ್ಟರ್ ಆಗಿದ್ದು, ಅತ್ಯಾಧುನಿಕ ಏವಿಯಾನಿಕ್ಸ್‌ನೊಂದಿಗೆ ಅನೇಕ ಕಾರ್ಯಾಚರಣೆಗಳನ್ನು ನಡೆಸಲು ವಿನ್ಯಾಸಗೊಳಿಸಲಾಗಿದೆ. ಈ ವಾಹಕವು ಭಾರತೀಯ ನೌಕಾಪಡೆಯ ಮೂರು ಆಯಾಮದ ಸಾಮರ್ಥ್ಯಗಳನ್ನು ಇನ್ನಷ್ಟು ಹೆಚ್ಚಳ ಮಾಡಲಿದೆ.

ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ಭೇಟಿಗೆ ವಾರಗಳ ಮುಂಚೆ 2020 ರ ಫೆಬ್ರವರಿಯಲ್ಲಿ ಭಾರತ ಸರ್ಕಾರದ ಸಚಿವ ಸಂಪುಟ  ಹೆಲಿಕಾಪ್ಟರ್ ಖರೀದಿಗೆ ಅನುಮತಿ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT