ಶೇರ್ ಬಹದ್ದೂರ್ ಡಿಯುಬಾ 
ವಿದೇಶ

ನೇಪಾಳ: ಸಂಸತ್ ನಲ್ಲಿ ವಿಶ್ವಾಸ ಮತ ಗೆದ್ದ ನೂತನ ಪ್ರಧಾನಿ ಶೇರ್ ಬಹದ್ದೂರ್ ಡಿಯುಬಾ

ನೇಪಾಳದಲ್ಲಿ ನೂತನ ಪ್ರಧಾನಿಯಾಗಿ ಜು.13 ರಂದು ಅಧಿಕಾರ ವಹಿಸಿಕೊಂಡಿದ್ದ ಶೇರ್ ಬಹದ್ದೂರ್ ಡಿಯುಬಾ ಜು.18 ರಂದು ಅಲ್ಲಿನ ಸಂಸತ್ ನಲ್ಲಿ ವಿಶ್ವಾಸ ಮತ ಗೆದ್ದಿದ್ದು ಸರ್ಕಾರವನ್ನು ಭದ್ರಪಡಿಸಿಕೊಂಡಿದ್ದಾರೆ. 

ಕಠ್ಮಂಡು: ನೇಪಾಳದಲ್ಲಿ ನೂತನ ಪ್ರಧಾನಿಯಾಗಿ ಜು.13 ರಂದು ಅಧಿಕಾರ ವಹಿಸಿಕೊಂಡಿದ್ದ ಶೇರ್ ಬಹದ್ದೂರ್ ಡಿಯುಬಾ ಜು.18 ರಂದು ಅಲ್ಲಿನ ಸಂಸತ್ ನಲ್ಲಿ ವಿಶ್ವಾಸ ಮತ ಗೆದ್ದಿದ್ದು ಸರ್ಕಾರವನ್ನು ಭದ್ರಪಡಿಸಿಕೊಂಡಿದ್ದಾರೆ. 
 
275 ಸದಸ್ಯರಿದ್ದ ಪ್ರತಿನಿಧಿಗಳ ಪೈಕಿ ನೇಪಾಳಿ ಕಾಂಗ್ರೆಸ್ ನ ನಾಯಕನ ಪರವಾಗಿ 165 ಮತಗಳನ್ನು ಡಿಯುಬಾ ನೇತೃತ್ವದ ಸರ್ಕಾರ ಪಡೆದಿದೆ ಎಂದು ಹಿಮಾಲಯನ್ ಟೈಮ್ಸ್ ವರದಿ ಪ್ರಕಟಿಸಿದೆ. 

249 ಶಾಸಕರು ಮತಪ್ರಕ್ರಿಯೆಯಲ್ಲಿ ಭಜಗವಹಿಸಿದ್ದರು. 83 ಸದಸ್ಯರು ಡಿಯುಬಾ ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ ಓರ್ವ ಸದಸ್ಯ ಮಾತ್ರ ತಟಸ್ಥವಾಗಿ ಉಳಿದರು. ಸಂಸತ್ ನಲ್ಲಿ ವಿಶ್ವಾಸ ಮತ ಗೆಲ್ಲುವುದಕ್ಕೆ ಡಿಯುಬಾ ಅವರಿಗೆ 136 ಮತಗಳ ಅಗತ್ಯವಿತ್ತು. 

275 ಸದಸ್ಯ ಬಲ ಹೊಂದಿರುವ ಸದನದಲ್ಲಿ ನಡೆದ ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಓಲಿ ಸೋಲನ್ನನುಭವಿಸಿದ ನಂತರವೂ ಕೂಡ ಅಲ್ಪಸಂಖ್ಯಾತ ಸರ್ಕಾರವನ್ನು ಮುನ್ನಡೆಸುತ್ತಿದ್ದರು. ಇದೀಗ ಸುಪ್ರೀಂ ಕೋರ್ಟ್‌ನ ಆದೇಶದ ನಂತರ, ಡಿಯುಬಾ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT