ಡ್ಯಾನಿಶ್ ಸಿದ್ದಿಕಿ 
ವಿದೇಶ

ತಾಲಿಬಾನ್ ನಿಂದ ಭಾರತೀಯ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ಬರ್ಬರ ಹತ್ಯೆ: ವರದಿ

ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸುಮ್ಮನೆ ಕೊಲ್ಲಲ್ಪಟ್ಟಿಲ್ಲ, ಗುರುತನ್ನು ಪತ್ತೆಹಚ್ಚಿದ ನಂತರ ತಾಲಿಬಾನ್‌ನಿಂದ ಬರ್ಬರ ರೀತಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಯುಎಸ್ ಮೂಲದ ನಿಯತಕಾಲಿಕವೊಂದರಲ್ಲಿ ಗುರುವಾರ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.

ವಾಷಿಂಗ್ಟನ್: ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸುಮ್ಮನೆ ಕೊಲ್ಲಲ್ಪಟ್ಟಿಲ್ಲ, ಗುರುತನ್ನು ಪತ್ತೆಹಚ್ಚಿದ ನಂತರ ತಾಲಿಬಾನ್‌ನಿಂದ ಬರ್ಬರ ರೀತಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಯುಎಸ್ ಮೂಲದ ನಿಯತಕಾಲಿಕವೊಂದರಲ್ಲಿ ಗುರುವಾರ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ. 38 ವರ್ಷದ ಸಿದ್ಧಿಕಿ ಅಫ್ಘಾನಿಸ್ತಾನದಲ್ಲಿ ಕರ್ತವ್ಯದಲ್ಲಿ ನಿಯೋಜನೆಯಲ್ಲಿದ್ದಾಗ ಮೃತಪಟ್ಟಿದ್ದರು.

ವಾಷಿಂಗ್ಟನ್ ಪರಿಶೀಲನಾ ವರದಿ ಪ್ರಕಾರ, ಅಪ್ಘಾನ್ ಪಡೆ ಮತ್ತು ತಾಲಿಬಾನ್ ನಡುವಿನ ಕಾಳಗವನ್ನು ಸೆರೆ ಹಿಡಿಯಲು ಅಪ್ಘಾನ್ ರಾಷ್ಟ್ರೀಯ ಸೇನಾ ಸಿಬ್ಬಂದಿಯೊಂದಿಗೆ ಸ್ಪಿನ್ ಬೊಲ್ಡಾಕ್ ವಲಯಕ್ಕೆ ಸಿದ್ದಿಕಿ ತೆರಳಿದ್ದರು. ಕಸ್ಟಮ್ಸ್ ಪೋಸ್ಟ್‌ನ ಮೂರನೇ ಮೈಲಿಯಷ್ಟು ದೂರ ಹೋದಾಗ ತಾಲಿಬಾನ್  ಆ ತಂಡದ ಮೇಲೆ ದಾಳಿ ಮಾಡಿದ್ದು, ಕಮಾಂಡರ್ ಮತ್ತು ಕೆಲವರು ಸಿದ್ದಿಕಿಯಿಂದ ಪ್ರತ್ಯೇಕಗೊಂಡಿದ್ದಾರೆ. ಇತರ ಮೂವರು ಅಪ್ಘಾನ್ ಪಡೆ ಅವರೊಂದಿಗೆ ಇದ್ದರು. ದಾಳಿ ವೇಳೆ ಸ್ಫೋಟಕಗಳು ಸಿದ್ಧಿಕಿಗೆ ಹೊಡೆದ್ದಿದ್ದರಿಂದ ಸ್ಥಳೀಯ ಮಸೀದಿಯೊಂದಕ್ಕೆ ತೆರಳಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ.

 ಆದಾಗ್ಯೂ, ಒಬ್ಬ ಪತ್ರಕರ್ತ ಮಸೀದಿಯಲ್ಲಿದ್ದನೆಂಬ ಸುದ್ದಿ ಹರಡುತ್ತಿದ್ದಂತೆ, ತಾಲಿಬಾನ್ ದಾಳಿ ಮಾಡಿತು. ಸಿದ್ಧಿಕಿ ಅಲ್ಲಿದ್ದರಿಂದಲೇ  ತಾಲಿಬಾನ್ ಮಸೀದಿ ಮೇಲೆ ದಾಳಿ ಮಾಡಿತ್ತು ಎಂದು ಸ್ಥಳೀಯ ಮಾಹಿತಿಗಳಿಂದ ತಿಳಿದುಬಂದಿದೆ ಎಂದು ವರದಿ ಹೇಳಿದೆ. ಜೀವಂತವಾಗಿದ್ದ ಸಿದ್ದಿಕಿಯನ್ನು ಸೆರೆ ಹಿಡಿದ ತಾಲಿಬಾನ್ ಗುರುತು ಪತ್ತೆ ಹಚ್ಚಿದ ನಂತರ ಆತನನ್ನು ಗಲ್ಲಿಗೇರಿಸಿದೆ. ಆತನನ್ನು ರಕ್ಷಿಸಲು ಮುಂದಾದ ಕಮಾಂಡರ್ , ತಂಡದಲ್ಲಿದ್ದ ಇತರರನ್ನು ಸಹ ಸಾಯಿಸಿದೆ ಎಂದು ವರದಿ ತಿಳಿಸಿದೆ.

ಸಿದ್ದಿಕಿ ಅವರ ದೇಹದ ವೀಡಿಯೊವನ್ನು ಭಾರತ ಸರ್ಕಾರದ ಮೂಲವೊಂದು ನನಗೆ ಒದಗಿಸಿದೆ, ಅದು ತಾಲಿಬಾನ್ ಸಿದ್ದಿಕಿಯ ತಲೆ  ಸುತ್ತಲೂ ಹೊಡೆದು ನಂತರ ಅವರ ದೇಹವನ್ನು ಗುಂಡುಗಳಿಂದ ಹೊಡೆದಿದೆ ಎಂದು ತೋರಿಸುತ್ತದೆ ಎಂದು  ಅಮೆರಿಕನ್ ಎಂಟರ್ ಪ್ರೈಸಸ್  ಇನ್ಸ್ಟಿಟ್ಯೂಟಿನ ಹಿರಿಯ ಸಹವರ್ತಿ ಬರಹಗಾರ ಮೈಕೆಲ್ ರೂಬಿನ್ ಬರೆದಿದ್ದಾರೆ.

ಸಿದ್ದಿಕಿಯನ್ನು ಸೆರೆ ಹಿಡಿದು, ಮರಣ ದಂಡನೆಗೊಳಪಡಿಸಿ ನಂತರ ಶವವನ್ನು ವಿರೂಪಗೊಳಿಸುವ ತಾಲಿಬಾನ್ ನಿರ್ಧಾರವು ಯುದ್ಧದ ನಿಯಮಗಳನ್ನು ಅಥವಾ ಜಾಗತಿಕ ಸಮುದಾಯದ ನಡವಳಿಕೆಯನ್ನು ನಿಯಂತ್ರಿಸುವ ಸಂಪ್ರದಾಯಗಳನ್ನು ಗೌರವಿಸುವುದಿಲ್ಲ ಎಂದು ತೋರಿಸುತ್ತದೆ ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT