ವಿದೇಶ

ಚೀನಾದಲ್ಲಿ ಡೆಲ್ಟಾ ರೂಪಾಂತರ ಹರಡುವಿಕೆ ಮುಂದುವರೆಯುವ ಸಾಧ್ಯತೆ: ಅಧಿಕಾರಿಗಳ ಎಚ್ಚರಿಕೆ

Nagaraja AB

ಬೀಜಿಂಗ್: ಡೆಲ್ಟಾ ರೂಪಾಂತರದ ಹೊಸ ಅಲೆ ಪೂರ್ವ ಚೀನಾದ ನಾಂಜಿಂಗ್ ನಗರದಲ್ಲಿ ಕಂಡುಬಂದಿದ್ದು, ಇದು ಕಿರು ಅವಧಿಯಲ್ಲಿ ಹೆಚ್ಚಿನ ವಲಯಗಳಿಗೆ ಹರಡುವ ಸಾಧ್ಯತಿರುವುದಾಗಿ ರಾಷ್ಟ್ರೀಯ ಆರೋಗ್ಯ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇತ್ತೀಚಿನ ಏಕಾಏಕಿ ಕಾಣಿಸಿಕೊಂಡಿರುವ ಡೆಲ್ಟಾ ರೂಪಾಂತರ ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ವೇಗವಾಗಿ ಹರಡುತ್ತದೆ ಎಂದು ಸರ್ಕಾರದಿಂದ ನಡೆಸಲ್ಪಡುತ್ತಿರುವ ಗ್ಲೋಬಲ್ ಟೈಮ್ಸ್ ಹೇಳಿದೆ. ನಾಜಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೇಸಿಗೆಯಲ್ಲಿ ಪ್ರವಾಸಿಗರು ಸೇರಿದ್ದಾಗ ರಷ್ಯಾದಿಂದ ಬಂದ ವಿಮಾನವೊಂದನ್ನು ನಿರ್ವಹಿಸುತ್ತಿದ್ದ ಕ್ಲೀನರ್ ಗಳಿಂದ ಈ ಸೋಂಕು ಹರಡದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ನಾಜಿಂಗ್ ವಿಮಾನ ನಿಲ್ದಾಣದಿಂದ ಇತರ ವಲಯಗಳಿಗೆ ಸೋಂಕು ಹರಡಿದೆ. ಇನ್ನೂ ಹೆಚ್ಚಿನ ವಲಯಗಳಿಗೆ ಸೋಂಕು ಹರಡುವಿಕೆ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.  ಇದೇ ಮೊದಲ ಬಾರಿಗೆ 175 ದಿನಗಳ ನಂತರ ಬೀಜಿಂಗ್ ನಲ್ಲಿ ಕೋವಿಡ್-19 ಕೇಸ್ ಗಳು ವರದಿಯಾಗಿವೆ.

ನಗರದ ಲಕ್ಸುರಿ ಹೋಟೆಲ್ ವೊಂದರಲ್ಲಿ ಸೋಂಕು ಕಾಣಿಸಿಕೊಂಡ ನಂತರ ಅಲ್ಲಿನ ಗೆಸ್ಟ್ ಗಳಿಗೆ 21 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ವರದಿಗಳು ಹೇಳಿವೆ.

SCROLL FOR NEXT