ಲಸಿಕೆ ಪಡೆಯುತ್ತಿರುವ ಮಹಿಳೆ 
ವಿದೇಶ

ಚೀನಾ ಸಹಾಯದೊಂದಿಗೆ 'ಪಾಕ್‌ವ್ಯಾಕ್' ಸ್ವದೇಶಿ ಕೊರೋನಾ ಲಸಿಕೆ ಅಭಿವೃದ್ಧಿಪಡಿಸಿದ ಪಾಕ್!

ಪಾಕಿಸ್ತಾನ ಸ್ವದೇಶಿ ನಿರ್ಮಿತ 'ಪಾಕ್‌ವ್ಯಾಕ್' ಕೋವಿಡ್ -19 ಲಸಿಕೆ ಬಿಡುಗಡೆ ಮಾಡಿದೆ. 

ಇಸ್ಲಾಮಾಬಾದ್: ಪಾಕಿಸ್ತಾನ ಸ್ವದೇಶಿ ನಿರ್ಮಿತ 'ಪಾಕ್‌ವ್ಯಾಕ್' ಕೋವಿಡ್ -19 ಲಸಿಕೆ ಬಿಡುಗಡೆ ಮಾಡಿದೆ. 

ತನ್ನ ಮಿತ್ರ ರಾಷ್ಟ್ರವಾದ ಚೀನಾದ ಸಹಾಯದಿಂದ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ದೇಶದ ಜನರಿಗೆ ಲಸಿಕೆ ಹಾಕಲು ಮತ್ತು ರಾಷ್ಟ್ರದಲ್ಲಿ ಕೊರೋನಾ ಹರಡುವಿಕೆಯನ್ನು ನಿಯಂತ್ರಣಕ್ಕೆ ಸಹಾಯಕವಾಗುತ್ತದೆ. 

ಆರೋಗ್ಯ ವಿಶೇಷ ಸಹಾಯಕ ಡಾ. ಫೈಸಲ್ ಸುಲ್ತಾನ್ ಮಾತನಾಡಿ, ಪಾಕಿಸ್ತಾನವು ಕಠಿಣ ಸವಾಲುಗಳನ್ನು ನಿವಾರಿಸಲು, ಸ್ನೇಹಿತರ ಸಹಾಯದಿಂದ ಅವುಗಳನ್ನು ಅವಕಾಶಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. 'ಕೋವಿಡ್ -19 ಸವಾಲನ್ನು ಎದುರಿಸುವಲ್ಲಿ ನಮ್ಮ ಸ್ನೇಹಿತ ಚೀನಾ ನಮಗೆ ಸಹಾಯಕರಾಗಿದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ ಎಂದು ಬಿಡುಗಡೆ ಸಮಾರಂಭದಲ್ಲಿ ಹೇಳಿದರು.

ಚೀನಾ ಲಸಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಒದಗಿಸಿದೆ. ಆದರೆ ಲಸಿಕೆಯನ್ನು ಅಭಿವೃದ್ಧಿಪಡಿಸುವುದು ಸುಲಭವಲ್ಲ. ಮುಂದಿನ ದಿನಗಳಲ್ಲಿ ಲಸಿಕೆಯ ಸ್ಥಳೀಯ ಸಾಮೂಹಿಕ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ರಾಷ್ಟ್ರೀಯ ಕಮಾಂಡ್ ಮತ್ತು ಕಾರ್ಯಾಚರಣೆ ಕೇಂದ್ರದ (ಎನ್‌ಸಿಒಸಿ) ಮುಖ್ಯಸ್ಥ ಅಸಾದ್ ಉಮರ್ ಹೇಳಿದ್ದು ಇಂದು ಪಾಕಿಸ್ತಾನಕ್ಕೆ ಮಹತ್ವದ ದಿನವಾಗಿದೆ ಎಂದರು.

ಕಳೆದ 24 ಗಂಟೆಗಳಲ್ಲಿ 1,771 ಹೊಸ ಪ್ರಕರಣಗಳು ವರದಿಯಾಗಿದ್ದು ಮೂರು ತಿಂಗಳಲ್ಲಿ ಮೊದಲ ಬಾರಿಗೆ ಸಕಾರಾತ್ಮಕ ಪ್ರಮಾಣವು ಶೇಕಡಾ 4ಕ್ಕಿಂತ ಕಡಿಮೆಯಾಗಿದೆ. ಒಟ್ಟಾರೆ ಕೋವಿಡ್ ಸೋಂಕಿತರ ಸಂಖ್ಯೆ 922,824ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆಗಳು ಸಹ ನಡೆಯುತ್ತಿದ್ದು ಇಲ್ಲಿಯವರೆಗೆ 5.3 ಮಿಲಿಯನ್ ಜನರಿಗೆ ಲಸಿಕೆ ಹಾಕಲಾಗಿದೆ. ಇದರಲ್ಲಿ ಸುಮಾರು 2 ಮಿಲಿಯನ್ ಜನರಿಗೆ ಎರಡು ಡೋಸ್ ನ ಸಂಪೂರ್ಣ ಲಸಿಕೆ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO ಸಭೆ: ಒಂದೇ ವೇದಿಕೆಯಲ್ಲಿ ಚೀನಾ- ಭಾರತ- ರಷ್ಯಾ; ಕೆರಳಿದ Trump ಭಾರತದ ಬಗ್ಗೆ ಹೇಳಿದ್ದೇನು?

ಕನ್ನಡ ಕಲಿಯಲು ಯತ್ನ, ಎಲ್ಲಾ ಭಾಷೆ, ಸಂಪ್ರದಾಯಗಳ ಬಗ್ಗೆ ಗೌರವ ಇದೆ: ರಾಷ್ಟ್ರಪತಿ ಮುರ್ಮು

Kiccha47 Title: Max ಆಯ್ತು, ಈಗ ಸುದೀಪ್ Mark ಅವತಾರ!

ಪಂಚಶೀಲ ಒಪ್ಪಂದಗಳ ಹಾದಿಯಲ್ಲಿ ಸಾಗಿಬಂದ ಭಾರತ – ಚೀನಾ ಸಂಬಂಧಗಳತ್ತ ಒಂದು ನೋಟ (ಜಾಗತಿಕ ಜಗಲಿ)

ನಾಳೆ ಮಧ್ಯಾಹ್ನದೊಳಗೆ ಮುಂಬೈನ ಎಲ್ಲಾ ರಸ್ತೆಗಳನ್ನು ತೆರವುಗೊಳಿಸಿ: ಜಾರಂಗೆಗೆ ಬಾಂಬೆ ಹೈಕೋರ್ಟ್

SCROLL FOR NEXT