ಸಾಂದರ್ಭಿಕ ಚಿತ್ರ 
ವಿದೇಶ

ಪಾಕಿಸ್ತಾನ “ಮಾವಿನ ಹಣ್ಣು" ರಾಯಭಾರಕ್ಕೆ ಅಮೆರಿಕಾ, ಚೀನಾ ಕಹಿ ಪ್ರತಿಕ್ರಿಯೆ..!

ಪಾಕಿಸ್ತಾನ ಸ್ನೇಹಪೂರ್ವಕವಾಗಿ ಕಳುಹಿಸಿದ್ದ  ಮಾವಿನ ಹಣ್ಣುಗಳನ್ನು ಅಮೆರಿಕಾ, ಚೀನಾ ಮತ್ತಿತರ ದೇಶಗಳು ತಿರಸ್ಕರಿಸಿವೆ. ಕೊರೊನಾ ಕ್ವಾರಂಟೈನ್‌ ನಿಬಂಧನೆಗಳ ನೆಪವೊಡ್ಡಿ ಈ ಹಣ್ಣುಗಳನ್ನು ಸ್ವೀಕರಿಸಲು ಈ ದೇಶಗಳು ನಿರಾಕರಿಸಿವೆ ಎಂದು ವರದಿಯಾಗಿದೆ.

ಇಸ್ಲಾಮಾಬಾದ್‌: ಪಾಕಿಸ್ತಾನ ಸ್ನೇಹಪೂರ್ವಕವಾಗಿ ಕಳುಹಿಸಿದ್ದ  ಮಾವಿನ ಹಣ್ಣುಗಳನ್ನು ಅಮೆರಿಕಾ, ಚೀನಾ ಮತ್ತಿತರ ದೇಶಗಳು ತಿರಸ್ಕರಿಸಿವೆ. ಕೊರೊನಾ ಕ್ವಾರಂಟೈನ್‌ ನಿಬಂಧನೆಗಳ ನೆಪವೊಡ್ಡಿ ಈ ಹಣ್ಣುಗಳನ್ನು ಸ್ವೀಕರಿಸಲು ಈ ದೇಶಗಳು ನಿರಾಕರಿಸಿವೆ ಎಂದು ವರದಿಯಾಗಿದೆ.

ಪಾಕಿಸ್ತಾನ ಬುಧವಾರ 32 ದೇಶಗಳಿಗೆ ಮಾವಿನ ಹಣ್ಣುಗಳನ್ನು ಸ್ನೇಹ ಪೂರ್ವಕ ಕಾಣಿಕೆಯಾಗಿ ಕಳುಹಿಸಿತ್ತು. ಆದರೆ ಈ ದೇಶಗಳು ಹಣ್ಣುಗಳನ್ನು ಸ್ವೀಕರಿಸಲು ತಿರಸ್ಕರಿಸಿವೆ. ಈ ದೇಶಗಳಲ್ಲಿ ಅಮೆರಿಕಾ, ಚೀನಾ, ಕೆನಡಾ, ನೇಪಾಳ, ಈಜಿಪ್ಟ್‌, ಶ್ರೀಲಂಕಾ ಕೂಡ ಸೇರಿವೆ. ತಾವು ಅವುಗಳನ್ನು ಸ್ವೀಕರಿಸದಿರುವುದಕ್ಕೆ ವಿಷಾದ ವ್ಯಕ್ತಪಡಿಸಿವೆ. ಪಾಕಿಸ್ತಾನ ಅಧ್ಯಕ್ಷ ಡಾ ಅರೀಫ್‌ ಅಲ್ವಿ ಪರವಾಗಿ ಈ ಮಾವಿನ ಹಣ್ಣುಗಳನ್ನು ಕಳುಹಿಸಲಾಗಿತ್ತು.

2015ರಲ್ಲಿ ಅಂದಿನ ಪಾಕಿಸ್ತಾನ ಪ್ರಧಾನ ಮಂತ್ರಿ ನವಾಜ್‌ ಷರೀಫ್‌ ಇದೇ ರೀತಿಯಲ್ಲಿ  ಮಾವಿನ ಹಣ್ಣುಗಳನ್ನು ಪ್ರಧಾನಿ ನರೇಂದ್ರ ಮೋದಿ, ಅಂದಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸ್ನೇಹ ಪೂರ್ವಕವಾಗಿ ಕಳುಹಿಸಿಕೊಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗ್ರೇಟರ್ ನೋಯ್ಡಾದಲ್ಲಿ ಪ್ರವಾಸಿ ಬಸ್‌ಗೆ ಬೆಂಕಿ: 9ಮಂದಿ ಸಜೀವ ದಹನ; ಜಿಗಿದು ಪ್ರಾಣ ಉಳಿಸಿಕೊಂಡ ಜನ

ಸ್ಪರ್ಧೆ ಇರಲಿ, ವೈರತ್ವ ಬೇಡ: Trump ಭೇಟಿಯಾಗುತ್ತಿದ್ದಂತೆ Xi Jinping ಶಾಂತಿ ಮಂತ್ರ; US-China ನಡುವೆ ಶುರುವಾಯ್ತಾ ಹೊಸ ಸ್ನೇಹ ಪರ್ವ?

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಆತಂಕ; ನಾವಿಕರು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಲಿ: ಕ್ಷಿಪಣಿ ದಾಳಿ ಬೆನ್ನಲ್ಲೇ ವಿಶ್ವಕ್ಕೆ ಭಾರತ ಖಡಕ್ ಸಂದೇಶ..!

ಬರಗಾಲ ಕುರಿತು ಮುಗಿಯದ ಚರ್ಚೆ: ರಾಜ್ಯ ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

ಪ್ರಧಾನಿ ಮೋದಿಗೆ ಸಿಎಂ ಡಿಕೆ ಶಿವಕುಮಾರ್ ಪತ್ರ: ಬರ ನಿರ್ವಹಣೆಗಾಗಿ ಶೇ. 50ರಷ್ಟು ಮಧ್ಯಂತರ ಪರಿಹಾರ ಬಿಡುಗಡೆಗೆ ಒತ್ತಾಯ!