ಕೋವಿಡ್-19 ಎಚ್ಚರಿಕೆ ಫಲಕದ ಮುಂದೆ ನಿಂತಿರುವ ಆಸ್ಟ್ರೇಲಿಯಾ ಮಹಿಳೆ 
ವಿದೇಶ

ಭಾರತದಿಂದ ಬರುವವರಿಗೆ ಆಸ್ಟ್ರೇಲಿಯಾದಲ್ಲಿ ತಾತ್ಕಾಲಿಕ ನಿಷೇಧ: ನಿಯಮ ಉಲ್ಲಂಘಿಸಿದವರಿಗೆ ದಂಡ, 5 ವರ್ಷ ಜೈಲು ಶಿಕ್ಷೆ 

ಭಾರತದಿಂದ ವಾಪಸ್ಸಾಗುವ ಆಸ್ಟ್ರೇಲಿಯಾ ನಾಗರಿಕರಿಗೆ ಆಸ್ಟ್ರೇಲಿಯಾ ಸರ್ಕಾರ ನಿರ್ಬಂಧ ವಿಧಿಸಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ಜೈಲು ಶಿಕ್ಷೆ ಹಾಗೂ ದಂಡದ ಎಚ್ಚರಿಕೆಯನ್ನು ನೀಡಿದೆ. 

ಮೆಲ್ಬೋರ್ನ್: ಭಾರತದಿಂದ ವಾಪಸ್ಸಾಗುವ ಆಸ್ಟ್ರೇಲಿಯಾ ನಾಗರಿಕರಿಗೆ ಆಸ್ಟ್ರೇಲಿಯಾ ಸರ್ಕಾರ ನಿರ್ಬಂಧ ವಿಧಿಸಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ಜೈಲು ಶಿಕ್ಷೆ ಹಾಗೂ ದಂಡದ ಎಚ್ಚರಿಕೆಯನ್ನು ನೀಡಿದೆ. ಭಾರತದಲ್ಲಿ ಕೋವಿಡ್-19 ಹೆಚ್ಚಳವಾಗುತ್ತಿರುವ ಕಾರಣದಿಂದ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಆಸ್ಟ್ರೇಲ್ಪಿಯಾ ಹೇಳಿದೆ. 

ನಿಯಮಗಳನ್ನು ಉಲ್ಲಂಘಿಸಿ ಆಸ್ಟ್ರೇಲಿಯಾ ಪ್ರವೇಶಿಸಿದರೆ ಅಂತಹವರಿಗೆ 66,000 ಆಸ್ಟ್ರೇಲಿಯನ್ ಡಾಲರ್ ಗಳ ದಂಡ ಹಾಗೂ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. 

ಸೋಮವಾರದಿಂದ ಈ ತಾತ್ಕಾಲಿಕವಾಗಿ ಜಾರಿಗೆ ಬರಲಿದ್ದು, ಭಾರತಕ್ಕೆ 14 ದಿನಗಳಲ್ಲಿ ಭೇಟಿ ನೀಡಿ, ಆಸ್ಟ್ರೇಲಿಯಾಗೆ ವಾಪಸ್ಸಾಗಬೇಕೆಂದುಕೊಂಡವರಿಗೂ ಈ ಆದೇಶ ಅನ್ವಯವಾಗಲಿದೆ. ಭಾರತದಲ್ಲಿ ಅಂದಾಜು 9,000 ಆಸ್ಟ್ರೇಲಿಯನ್ನರಿದ್ದು, ಈ ಪೈಕಿ 600 ಮಂದಿಯನ್ನು ಕೋವಿಡ್-19 ಸೋಂಕಿಗೆ ದುರ್ಬಲರು ಎಂದು ಗುರುತಿಸಲಾಗಿದೆ 

ಶುಕ್ರವಾರದಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಆರೋಗ್ಯ ಸಚಿವಾಲಯ ಈ ತಾತ್ಕಾಲಿಕ ನಿಷೇಧದ ನಿರ್ಧಾರವನ್ನು ಪ್ರಕಟಿಸಿದೆ. ಈ ಆದೇಶಕ್ಕೂ ತೀವ್ರ ಟೀಕೆಗಳು ಆಸ್ಟ್ರೇಲಿಯಾದಲ್ಲಿ ವ್ಯಕ್ತವಾಗತೊಡಗಿದ್ದು, ತನ್ನದೇ ನಾಗರಿಕರು ಸಂಕಷ್ಟಕ್ಕೆ ಸಿಲುಕಿದಾಗಲೂ ಆಸ್ಟ್ರೇಲಿಯಾ ಸರ್ಕಾರ ಈ ರೀತಿಯ ನಿರ್ಬಂಧ ವಿಧಿಸುವುದು ತಪ್ಪು ಹಾಗೂ ಸರ್ಕಾರಕ್ಕೆ ಕ್ವಾರಂಟೈನ್ ನಲ್ಲಿ ನಂಬಿಕೆ ಇಲ್ಲದಂತಾಗಿದೆ ಎಂಬ ಟೀಕೆ ವ್ಯಕ್ತವಾಗತೊಡಗಿದೆ. ಆದರೆ ಸರ್ಕಾರ ಮಾತ್ರ ಈ ಆದೇಶವನ್ನು ಮೇ.15 ರ ನಂತರವಷ್ಟೇ ಮರುಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT