ವಿದೇಶ

ಕಾಶ್ಮೀರದ ಕುರಿತ ನಿರ್ಧಾರ ಬದಲಾಯಿಸುವವರೆಗೂ ಭಾರತದ ಜೊತೆ ಮಾತುಕತೆ ಇಲ್ಲ: ಪಾಕ್ 

Srinivas Rao BV

ಇಸ್ಲಾಮಾಬಾದ್: ಕಾಶ್ಮೀರದ ಕುರಿತ ನಿರ್ಧಾರವನ್ನು ಭಾರತದ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಮರುಸ್ಥಾಪನೆ ಮಾಡಬೇಕು, ರದ್ದುಗೊಳಿಸಿರುವ ನಿರ್ಧಾರವನ್ನು ಬದಲಾಯಿಸಬೇಕು ಆಗ ಮಾತ್ರವೇ ಮಾತುಕತೆ ಸಾಧ್ಯ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಭಾರತ 2019 ರಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು. 

ಆಗಸ್ಟ್ 05 ರ ಆದೇಶವನ್ನು ಭಾರತ ಹಿಂಪಡೆಯುವವರೆಗೂ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಸಾಧ್ಯವೇ ಇಲ್ಲ ಎಂದು ಸಾರ್ವಜನಿಕರ ಪ್ರಶ್ನೆಗಳಿಗೆ ನೇರ ಪ್ರಸಾರ ಕಾರ್ಯಕ್ರಮವೊಂದರಲ್ಲಿ ಇಮ್ರಾನ್ ಖಾನ್ ಹೇಳಿದ್ದಾರೆ. ಇದಕ್ಕೂ ಮುನ್ನ ವಿದೇಶಾಂಗ ಸಚಿವರೂ ಇದೇ ಮಾದರಿಯ ಹೇಳಿಕೆ ನೀಡಿದ್ದರು. ಈಗ ಭಾರತದೊಂದಿಗೆ ಮಾತುಕತೆ ನಡೆಸಲಾಗುತ್ತಿಲ್ಲ. ಆದರೆ ಭಾರತ ಕಾಶ್ಮೀರದೆಡೆಗಿನ ನೀತಿ ಬದಲಿಸಿದಲ್ಲಿ, ಕಾಶ್ಮೀರದ ಜನತೆಗೆ ರಿಲೀಫ್ ನೀಡಿದಲ್ಲಿ ಮಾತುಕತೆ ನಡೆಸಬಹುದೆಂದು ಖುರೇಷಿ ಹೇಳಿದ್ದಾರೆ. 

SCROLL FOR NEXT