ಜೋ ಲಾರಾ 
ವಿದೇಶ

ವಿಮಾನ ದುರಂತ: ಟಾರ್ಜನ್ ನಟ ಜೋ ಲಾರಾ, ಪತ್ನಿ ಸೇರಿದಂತೆ 7 ಮಂದಿ ದುರ್ಮರಣ

'ಟಾರ್ಜನ್' ಖ್ಯಾತಿಯ  ಅಮೆರಿಕಾ ನಟ ಜೋ ಲಾರಾ ವಿಮಾನ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಜೋ ಲಾರಾ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಏಳು ಮಂದಿಯೂ ಮೃತಪಟ್ಟಿದ್ದಾರೆ. 

ವಾಷಿಂಗ್ಟನ್: 'ಟಾರ್ಜನ್' ಖ್ಯಾತಿಯ  ಅಮೆರಿಕಾ ನಟ ಜೋ ಲಾರಾ ವಿಮಾನ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಜೋ ಲಾರಾ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಏಳು ಮಂದಿಯೂ ಮೃತಪಟ್ಟಿದ್ದಾರೆ. 

ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಟೆನ್ನೆಸ್ಸೀ ಏರ್‌ಪೋರ್ಟ್‌ನಿಂದ ಫ್ಲೋರಿಡಾದ ಪಾಮ್ ಬೀಚ್‌ಗೆ ಸಣ್ಣ ಬಿಸಿನೆಸ್ ಜೆಟ್ ಹೊರಟಿತ್ತು. ಜೆಟ್ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ನ್ಯಾಶ್‌ವಿಲ್ಲೆಯಲ್ಲಿರುವ ಪರ್ಸಿ ಪ್ರೀಸ್ಟ್ ಸರೋವರದಲ್ಲಿ ಪತನಗೊಂಡಿದೆ.

ವಿಮಾನದಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ದೃಢಪಡಿಸಿದೆ. ವಿಮಾನದಲ್ಲಿ ನಟ ಜೋ ಲಾರಾ ಹಾಗೂ ಪತ್ನಿ ಗ್ವೆನ್ ಶ್ಯಾಬ್ಲಿನ್ ಲಾರಾ ಪ್ರಯಾಣಿಸುತ್ತಿದ್ದರು. ಇವರಿಬ್ಬರೊಂದಿಗೆ ವಿಮಾನದಲ್ಲಿದ್ದ ಐವರು ಸ್ಥಳೀಯರು ಎನ್ನಲಾಗಿದೆ. ಅಪಘಾತಕ್ಕೆ ಖಚಿತ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೋ ಲಾರಾ (ವಿಲಿಯಂ ಜೋಸೆಫ್ ಲಾರಾ) ಅಮೇರಿಕಾದ ಖ್ಯಾತ ನಟ, ಮಾರ್ಷಲ್ ಆರ್ಟಿಸ್ಟ್ ಹಾಗೂ ಮ್ಯೂಸಿಷಿಯನ್. ಲಾರಾ (ವಿಲಿಯಂ ಜೋಸೆಫ್ ಲಾರಾ) 1989ರಲ್ಲಿ ತೆರೆ ಕಂಡ “ ಟಾರ್ಜನ್ ಇನ್ ಮ್ಯಾನ್‌ಹ್ಯಾಟನ್” ಸಿನಿಮಾ ಮೂಲಕ ಪ್ರಸಿದ್ಧರಾಗಿದ್ದರು. ನಂತರ ಅವರು 1996 ರಿಂದ ವರ್ಷ ಕಾಲ ಪ್ರಸಾರಗೊಂಡ ‘ಟಾರ್ಜನ್ ದಿ ಎಪಿಕ್ ಅಡ್ವೆಂಚರ್ಸ್’ ಟಿವಿ ಸರಣಿ ಮೂಲಕ ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳನ್ನು ಪಡೆದಿದ್ದರು. ಸ್ವಭಾವತಃ ಮಾರ್ಷಲ್‌ ಆರ್ಟ್ಸ್‌ ತಜ್ಞರಾದ ಲಾರಾ ಟಾರ್ಜನ್‌ ಆಗಿ ಡೋಪ್ ಇಲ್ಲದೆ ಸಾಹಸ ಮಾಡುತ್ತಿದ್ದರು. 55 ವರ್ಷದ ಲಾರಾ, ಗ್ವೆನ್ ಶ್ವಾಂಬ್ಲಿನ್ ಅವರನ್ನು 2018 ರಲ್ಲಿ ವಿವಾಹವಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕರ್ನಾಟಕ ಮೂಲದ ವ್ಯಕ್ತಿಯ ಶಿರಚ್ಛೇದ ಪ್ರಕರಣ: ಅಕ್ರಮ ವಲಸಿಗರ ಬಗ್ಗೆ ಮೃದು ಧೋರಣೆ ತೋರುವ ಕಾಲ ಮುಗಿದಿದೆ- ಟ್ರಂಪ್

ಗ್ರೇಟರ್ ಬೆಂಗಳೂರು ಚುನಾವಣೆಗೆ ಭದ್ರ ಬುನಾದಿ ಹಾಕುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್!

Asia Cup 2025: ಪಾಕ್ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಸೇನಾಪಡೆಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್! Video

ರಾಜಕೀಯ ಲಾಭಕ್ಕಾಗಿ 'ಮೃದು ಹಿಂದುತ್ವ'ಕ್ಕೆ ಕೈ ಹಾಕುತ್ತಿರುವ ಡಿ.ಕೆ ಶಿವಕುಮಾರ್ - ಡಾ. ಪರಮೇಶ್ವರ್?

Asia Cup 20225: Operation Sindoor ಬಳಿಕ ಪಾಕಿಸ್ತಾನಕ್ಕೆ ಮತ್ತೆ ಸೋಲಿನ ರುಚಿ ತೋರಿಸಿದ ಭಾರತ!

SCROLL FOR NEXT