ಸಂಗ್ರಹ ಚಿತ್ರ 
ವಿದೇಶ

'ವಿಮಾನ' ರಾವಣನ ಸಂಶೋಧನೆಯನ್ನು ಪುನರಾರಂಭಿಸಲು ಲಂಕಾ ತಯಾರಿ, ಭಾರತಕ್ಕೆ ಆಹ್ವಾನ!

ಶ್ರೀಲಂಕಾ ಈಗ ವಿಮಾನಗಳ ಬಗ್ಗೆ ತನ್ನ ಸುವರ್ಣ ಗತಕಾಲಕ್ಕೆ ಸಂಬಂಧಿಸಿದ ಪುರಾಣಗಳ ಬಗ್ಗೆ ವ್ಯಾಪಕ ಸಂಶೋಧನೆ ಮಾಡಲು ತಯಾರಿ ನಡೆಸುತ್ತಿದೆ.

ನವದೆಹಲಿ: ಶ್ರೀಲಂಕಾ ಈಗ ವಿಮಾನಗಳ ಬಗ್ಗೆ ತನ್ನ ಸುವರ್ಣ ಗತಕಾಲಕ್ಕೆ ಸಂಬಂಧಿಸಿದ ಪುರಾಣಗಳ ಬಗ್ಗೆ ವ್ಯಾಪಕ ಸಂಶೋಧನೆ ಮಾಡಲು ತಯಾರಿ ನಡೆಸುತ್ತಿದೆ.  

ವಾಸ್ತವವಾಗಿ, ಹೆಚ್ಚಿನ ಸಂಖ್ಯೆಯ ಶ್ರೀಲಂಕಾದವರು ರಾವಣ ವಿಶ್ವದ ಮೊದಲ ಪೈಲಟ್ ಎಂದು ನಂಬುತ್ತಾರೆ. ರಾವಣನ ಕಾಲದಲ್ಲಿ ಶ್ರೀಲಂಕಾದಲ್ಲಿ ವಿಮಾನಗಳು ಮತ್ತು ವಿಮಾನ ನಿಲ್ದಾಣಗಳು ಇದ್ದವು. ಇದನ್ನು ಪುರಾಣ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅನೇಕ ಜನರು ವೈಯಕ್ತಿಕ ಮಟ್ಟದಲ್ಲಿ ಸಂಶೋಧನೆಯನ್ನೂ ನಡೆಸಿದ್ದಾರೆ.

ಎರಡು ವರ್ಷಗಳ ಹಿಂದೆ ಕೊಲಂಬೊದಲ್ಲಿ ನಡೆದ ನಾಗರಿಕ ವಿಮಾನಯಾನ ತಜ್ಞರು, ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳ ಸಮ್ಮೇಳನದಲ್ಲಿ ಈ ಕಲ್ಪನೆಯನ್ನು ಬಲಪಡಿಸಲಾಯಿತು. ರಾವಣ ವಿಶ್ವದಲ್ಲಿಯೇ ಪ್ರಥಮ ಬಾರಿಗೆ ವಿಮಾನ ಹಾರಿಸಿದ್ದಾನೆ ಎಂದು ಸಮ್ಮೇಳನದಲ್ಲಿ ಒಪ್ಪಿಗೆ ಸೂಚಿಸಲಾಯಿತು. ಈ ವಿಮಾನ ಶ್ರೀಲಂಕಾದಿಂದ ಭಾರತಕ್ಕೆ ಮತ್ತು ನಂತರ ರಾವಣನು ವಿಮಾನದ ಮೂಲಕ ಶ್ರೀಲಂಕಾಕ್ಕೆ ಹಿಂದಿರುಗಿದನು. 

ಸಮ್ಮೇಳನದ ನಂತರ ಅಂದಿನ ಶ್ರೀಲಂಕಾ ಸರ್ಕಾರ 50 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರಿಂದ ಸಂಶೋಧನೆ ಆರಂಭಿಸಲಾಗಿತ್ತು. ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಶಿ ದಾನತುಂಗೆ ಮಾತನಾಡಿ "ಕೊರೋನಾ ಲಾಕ್‌ಡೌನ್‌ನಿಂದ ಸಂಶೋಧನೆಯನ್ನು ನಿಲ್ಲಿಸಬೇಕಾಯಿತು. ರಾಜಪಕ್ಷೆ ಸರ್ಕಾರವೂ ಈ ಸಂಶೋಧನೆಯ ಪರವಾಗಿದೆ. ಸಂಶೋಧನೆ ಪುನರಾರಂಭಿಸಲು ಸರ್ಕಾರ ಮುಂದಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಈ ಸಂಶೋಧನೆಯನ್ನು ಮತ್ತೆ ಪ್ರಾರಂಭಿಸಬಹುದು ಎಂದರು.

ಇತಿಹಾಸದಲ್ಲಿ ಆಸಕ್ತಿ ಹೊಂದಿರುವ ಶಶಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿದ್ದಾರೆ. ತಮ್ಮ ದೇಶದ ನಾಗರಿಕ ವಿಮಾನಯಾನದ ಇತಿಹಾಸವನ್ನು ತಿಳಿದುಕೊಳ್ಳಲು ಸಾಕಷ್ಟು ಪ್ರಯಾಣಿಸಿದ್ದಾರೆ. "ರಾವಣನು ಪೌರಾಣಿಕ ಪಾತ್ರವಲ್ಲ ಎಂದು ನನಗೆ ಸಂಪೂರ್ಣವಾಗಿ ಖಚಿತವಾಗಿದೆ. 

ರಾವಣ ನಿಜವಾದ ರಾಜನಾಗಿದ್ದನು. ವಾಸ್ತವವಾಗಿ ವಿಮಾನಗಳು ಮತ್ತು ವಿಮಾನ ನಿಲ್ದಾಣಗಳನ್ನು ಹೊಂದಿದ್ದನು.ಅವು ಇಂದಿನಂತೆ ವಿಮಾನಗಳಲ್ಲದಿರುವ ಸಾಧ್ಯತೆಯಿದೆ. ನಿಸ್ಸಂಶಯವಾಗಿ, ಪ್ರಾಚೀನ ಕಾಲದಲ್ಲಿ, ಶ್ರೀಲಂಕಾ ಮತ್ತು ಭಾರತೀಯ ಜನರು ಸುಧಾರಿತ ತಂತ್ರಜ್ಞಾನವನ್ನು ಹೊಂದಿದ್ದರು.  ಇದಕ್ಕಾಗಿ ವಿಸ್ತೃತ ಸಂಶೋಧನೆ ನಡೆಸಬೇಕು’ ಎಂದು ಶಶಿ ಭಾರತವನ್ನೂ ಈ ಸಂಶೋಧನೆಯ ಭಾಗವಾಗುವಂತೆ ಕೋರಿದ್ದಾರೆ.ಎರಡೂ ದೇಶಗಳ ಪ್ರಾಚೀನ ವೈಭವದ ದೃಷ್ಟಿಯಿಂದ ಈ ಸಂಶೋಧನೆ ಮಹತ್ವದ್ದಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್