ಚೀನಾ 
ವಿದೇಶ

ವಿಶ್ವದ ಶ್ರೀಮಂತ ರಾಷ್ಟ್ರ: ಅಮೆರಿಕಾವನ್ನು ಹಿಂದಿಕ್ಕಿದ ಚೀನಾ ಬಳಿ ಇರುವ ಸಂಪತ್ತು ಎಷ್ಟು ಗೊತ್ತೇ?

ಕಳೆದ 2 ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಹೆಚ್ಚಾಗಿದ್ದು  ಶ್ರೀಮಂತಿಕೆಯಲ್ಲಿ ಚೀನಾ ಅಮೆರಿಕಾವನ್ನು ಹಿಂದಿಕ್ಕಿದೆ ಎಂದು ಬ್ಲೂಮ್ ಬರ್ಗ್ ವರದಿ ಪ್ರಕಟಿಸಿದೆ. 

ಬೀಜಿಂಗ್: ಕಳೆದ 2 ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಹೆಚ್ಚಾಗಿದ್ದು  ಶ್ರೀಮಂತಿಕೆಯಲ್ಲಿ ಚೀನಾ ಅಮೆರಿಕಾವನ್ನು ಹಿಂದಿಕ್ಕಿದೆ ಎಂದು ಬ್ಲೂಮ್ ಬರ್ಗ್ ವರದಿ ಪ್ರಕಟಿಸಿದೆ. 

ಜಾಗತಿಕ ಮಟ್ಟದ ಆಡಳಿತ ವ್ಯವಸ್ಥಾಪನಾ ಸಲಹಾ ಸಂಸ್ಥೆ ಮೆಕಿನ್ಸೆ & ಕಂಪನಿ ವರದಿ ಪ್ರಕಟಿಸಿರುವ ಪ್ರಕಾರ ಕಳೆದ ಎರಡು ದಶಕಗಳಲ್ಲಿ ಜಾಗತಿಕ ನಿವ್ವಳದ ಲಾಭದ ಪೈಕಿ ಚೀನಾ ಮೂರನೇ ಒಂದರಷ್ಟು ಪಾಲನ್ನು ಹೊಂದಿದೆ.
 
"ನಾವು ಹಿಂದೆಂದಿಗಿಂತಲೂ ಈಗ ಸಂಪತ್ಭರಿತವಾಗಿದ್ದೇವೆ" ಎಂದು ಜ್ಯೂರಿಚ್ ನಲ್ಲಿರುವ ಮೆಕಿನ್ಸೆ ಗ್ಲೋಬಲ್ ಇನ್ಸ್ಟಿಟ್ಯೂಟ್ ನ ಪಾಲುದಾರರಾದ ಜಾನ್ ಮಿಶ್ಕೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

2000 ರಲ್ಲಿ 156 ಟ್ರಿಲಿಯನ್ ಡಾಲರ್ ನಷ್ಟಿದ್ದ ವಿಶ್ವಾದ್ಯಂತ ನಿವ್ವಳ ಮೌಲ್ಯ 2020 ರಲ್ಲಿ 514 ಟ್ರಿಲಿಯನ್ ಗೆ ಏರಿಕೆಯಾಗಿದೆ ಎನ್ನುತ್ತಿದೆ ವರದಿ. ಈ ಏರಿಕೆಯಲ್ಲಿ ಚೀನಾದ್ದು ಮೂರನೇ ಒಂದರಷ್ಟು ಪಾಲಿದೆ. 

2000 ರಲ್ಲಿ 7 ಟ್ರಿಲಿಯನ್ ಡಾಲರ್ ನಷ್ಟಿದ್ದ ಚೀನಾದ ಸಂಪತ್ತು ಈಗ 120 ಟ್ರಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.

ಆಸ್ತಿ ಬೆಲೆಗಳ ಏರಿಕೆ ಕಂಡ ಅಮೆರಿಕಾದಲ್ಲಿ ಸಂಪತ್ತಿನ ನಿವ್ವಳ ಮೌಲ್ಯ ಈ ಅವಧಿಯಲ್ಲಿ ದುಪ್ಪಟ್ಟಾಗಿದ್ದು 90 ಟ್ರಿಲಿಯನ್ ಡಾಲರ್ ಗೆ ತಲುಪಿದೆ. 

ಜಗತ್ತಿನ ಅತಿ ದೊಡ್ಡ ಆರ್ಥಿಕತೆಗಳಾದ ಎರಡೂ ರಾಷ್ಟ್ರಗಳಲ್ಲಿ ಶೇ.10 ರಷ್ಟಿರುವ ಶ್ರೀಮಂತರ ಮನೆಗಳು ಮೂರನೇ ಎರಡರಷ್ಟು ಸಂಪತ್ತನ್ನು ಹೊಂದಿವೆ ಹಾಗೂ ಅವರ ಪಾಲು ಏರುತ್ತಲೇ ಇದೆ ಎಂದು ವರದಿ ಹೇಳಿದೆ. 

ಜಾಗತಿಕ ನಿವ್ವಳ ಮೌಲ್ಯದ ಶೇ.68 ರಷ್ಟು ರಿಯಲ್ ಎಸ್ಟೇಟ್ ನಲ್ಲಿ ಸಂಗ್ರಹವಾಗಿದ್ದರೆ, ಉಳಿದದ್ದು ಮೂಲಸೌಕರ್ಯ, ಯಂತ್ರೋಪಕರಣಗಳು ಮತ್ತು ಉಪಕರಣಗಳಲ್ಲಿದ್ದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೌದ್ಧಿಕ ಆಸ್ತಿ ಮತ್ತು ಪೇಟೆಂಟ್ ನಲ್ಲಿ ಸಂಗ್ರಹವಾಗಿದೆ ಎಂದು ವರದಿ ತಿಳಿಸಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Mysuru Dasara: ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ; ಜಂಬೂ ಸವಾರಿಗೆ ಸಿಎಂ ಚಾಲನೆ

ಯದುವೀರ್ ಒಡೆಯರ್ ರಿಂದ ಬನ್ನಿ ಮರಕ್ಕೆ ಶಮಿ ಪೂಜೆ: ಅರಮನೆ ದಸರಾ ಮುಕ್ತಾಯ

HAL ಗೇ ಠಕ್ಕರ್, ಟಾಟಾ-Airbus ನಿಂದ ಕರ್ನಾಟಕದಲ್ಲಿ H125 ಹೆಲಿಕಾಪ್ಟರ್ ನಿರ್ಮಾಣ!

RSS @100: ಪ್ರಚಾರಕರಾಗಿ ಸಂಘ ಸೇರಿದ ಕೇರಳದ ಮಾಜಿ ಪೊಲೀಸ್ ಮುಖ್ಯಸ್ಥ Jacob Thomas

ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ: NCRB ವರದಿ

SCROLL FOR NEXT