ಹಸು ಜೊತೆ ಮದುವೆಯಾದ ಮಹಿಳೆ 
ವಿದೇಶ

ಗಂಡನ ಪುರ್ನಜನ್ಮ: ಹಸು ಜೊತೆ ಮದುವೆಯಾದ ಮಹಿಳೆ!

ಭಾರತದಂತೆಯೇ ಪ್ರಪಂಚದ ಹಲವು ದೇಶಗಳಲ್ಲಿ ಪುನರ್ಜನ್ಮದ ನಂಬಿಕೆ ಇದೆ. ಮನುಷ್ಯರು ಭೂಮಿಯ ಮೇಲೆ ಬೇರೆ ಯಾವುದಾದರೂ ರೂಪದಲ್ಲಿ ಮತ್ತೆ ಹುಟ್ಟುತ್ತಾರೆ ಎಂದು ನಂಬುವವರೂ ಇದ್ದಾರೆ.

ಕಾಂಬೋಡಿಯಾ: ಭಾರತದಂತೆಯೇ ಪ್ರಪಂಚದ ಹಲವು ದೇಶಗಳಲ್ಲಿ ಪುನರ್ಜನ್ಮದ ನಂಬಿಕೆ ಇದೆ. ಮನುಷ್ಯರು ಭೂಮಿಯ ಮೇಲೆ ಬೇರೆ ಯಾವುದಾದರೂ ರೂಪದಲ್ಲಿ ಮತ್ತೆ ಹುಟ್ಟುತ್ತಾರೆ ಎಂದು ನಂಬುವವರೂ ಇದ್ದಾರೆ.

ಪುನರ್ಜನ್ಮ ಎನ್ನುವುದು ವಿಜ್ಞಾನ ಮತ್ತು ನಂಬಿಕೆಯ ನಡುವಿನ ಚರ್ಚೆಯ ವಿಷಯವಾಗಿದೆಯಾದರೂ ಅದೆಷ್ಟೋ ಮಂದಿ ಇದನ್ನು ನಿಜವೆಂದು ನಂಬುವರರು ಇದ್ದಾರೆ.

ಇತ್ತೀಚೆಗೆ ಕಾಂಬೋಡಿಯಾದ ವೃದ್ಧೆಯೊಬ್ಬಳ ವಿಷಯದಲ್ಲಿ ಆಗಿದ್ದು ಕೂಡ ಇದೇ ಪುನರ್ಜನ್ಮ. ಕಾಂಬೋಡಿಯಾದ ಕ್ರಾತಿ ಪ್ರಾಂತ್ಯದಲ್ಲಿ ವಾಸಿಸುವ 74 ವರ್ಷದ ಖಿಮ್ ಹ್ಯಾಂಗ್ ಅನ್ನೋ ವೃದ್ಧೆ ಹಸುವಲ್ಲಿ ತೀರಿ ಹೋದ ತನ್ನ ಗಂಡನ ಎಲ್ಲಾ ಗುಣಲಕ್ಷಣಗಳು ಇವೆಯಂತ ಹಸುವನ್ನು ಮದುವೆಯಾಗಿದ್ದಾಳೆ. ಹೀಗೆ ಮದುವೆಯಾದ ಮಹಿಳೆ ವಯೋವೃದ್ಧೆಯಾಗಿದ್ದು, ಮದುವೆಯಾಗಿದ್ದಕ್ಕೆ ಯಾವುದೇ ವೀಡಿಯೊ ಇಲ್ಲ. ಆದರೆ ಗ್ರಾಮದ ಅನೇಕ ಜನರು ಮದುವೆಯನ್ನು ನೋಡಿದ್ದೇವೆ,  ಮದುವೆಯಲ್ಲಿ ಭಾಗವಹಿಸಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ.

ಮರುಜನ್ಮ ಪಡೆದು ತನ್ನ ಪತಿ ಹಸುವಿನ ರೂಪದಲ್ಲಿ ಮರಳಿದ್ದಾನೆ ಎಂದು ಮಹಿಳೆಗೆ ಹೇಗೆ ಅನಿಸಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ? ಇದಕ್ಕೆ ಉತ್ತರವನ್ನು‌ ನೋಡೋದಾದರೆ ಹಸು ಜನಿಸಿದಾಗ, ಮಹಿಳೆ ಅದರೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದಳು. ಆಗ ಹಸು ಆಕೆಯ ಕೈ ಮತ್ತು ಮುಖವನ್ನು ನೆಕ್ಕುತ್ತಿತ್ತು ಮತ್ತು ಅನೇಕ ಬಾರಿ ಮುಖಕ್ಕೆ ಮುತ್ತು ನೀಡುತ್ತಿತ್ತು. ತನ್ನ ಪತಿ ತನ್ನನ್ನು ಹೇಗೆ ಪ್ರೀತಿಸುತ್ತಿದ್ದನೋ ಅದೇ ರೀತಿ ಹಸು ತನ್ನನ್ನು ಪ್ರೀತಿಸುತ್ತದೆ ಎಂದು ಅಂದುಕೊಂಡು ಹಸುವನ್ನು ತನ್ನ ಗಂಡನಂತೆ ಪ್ರೀತಿಸುತ್ತಾಳೆ. ಗಂಡನ ಕೋಣೆಯಲ್ಲಿ ಇಟ್ಟಿದ್ದ ದಿಂಬನ್ನು ಹಸುವಿಗೆ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ ಆಕೆಯ ಮನೆಯಲ್ಲಿ ಹಸು ಒಟ್ಟಿಗೆ ವಾಸವಾಗಿದೆ. ಅಲ್ಲದೇ ಖಿಮ್ ತನ್ನ ಮಕ್ಕಳಿಗೂ ಇದೇ ಸೂಚನೆ ನೀಡಿದ್ದು, ಮಕ್ಕಳೂ ಈ ಹಸುವೇ ತಮ್ಮ ತಂದೆ ಎಂದು ನಂಬಿರುವುದರಿಂದ ಅವರೂ ಗೋವಿಗೆ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ.

ತನ್ನ ಮರಣದ ನಂತರ ಹಸುವನ್ನು ತಂದೆಯಂತೆ ಪ್ರೀತಿಸಬೇಕು, ಅದನ್ನು ಮಾರಾಟ ಮಾಡಬಾರದು ಮತ್ತು ಚೆನ್ನಾಗಿ  ಮೇವು ನೀಡಬೇಕು ಎಂದು ಎಂದು ಖಿಮ್ ಮಕ್ಕಳ‌ ಹತ್ರ ಆಣೆ ಪ್ರಮಾಣ‌ ಮಾಡಿಸಿಕೊಂಡು, ಹಸು ಸತ್ತಾಗ ಅದನ್ನು ಕೂಡ ಮನುಷ್ಯರಂತೆ ಸಂಸ್ಕಾರ ಮಾಡಬೇಕು ಎಂದು ಸೂಚಿಸಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT