ನೊಬೆಲ್ ಪದಕ 
ವಿದೇಶ

ತಾಂಜೇನಿಯಾ ಕಾದಂಬರಿಕಾರ ಅಬ್ದುಲ್ ರಜಾಕ್ ಗುರ್ನಾಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ

ತಾಂಜೇನಿಯಾದ ಕಾದಂಬರಿಕಾರ ಅಬ್ದುಲ್ ರಜಾಕ್ ಗುರ್ನಾ ಅವರಿಗೆ 2021ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.

ಸ್ಟಾಕ್ ಹೋಮ್: ತಾಂಜೇನಿಯಾದ ಕಾದಂಬರಿಕಾರ ಅಬ್ದುಲ್ ರಜಾಕ್ ಗುರ್ನಾ ಅವರಿಗೆ 2021ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.

ಸ್ವೀಡಿಷ್ ಅಕಾಡೆಮಿಯು, ಗಲ್ಫ್ ರಾಷ್ಟ್ರಗಳಲ್ಲಿನ ವಸಾಹತುಶಾಹಿಯ ಪರಿಣಾಮಗಳು, ಅಲ್ಲಿನ ಸಂಸ್ಕೃತಿ, ಏಷ್ಯಾ-ಆಫ್ರಿಕಾ ಖಂಡಗಳ ನಡುವಿನ ದೇಶಗಳಲ್ಲಿನ ವಲಸಿಗರ ಭವಿಷ್ಯದ ಕುರಿತ ಸಹಾನುಭೂತಿ ಹಾಗೂ ರಾಜಿ ಇಲ್ಲದ ನಿಲುವುಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದೆ.

ಜಾಂಜಿಬಾರ್‌ನಲ್ಲಿ ಜನಿಸಿ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಗುರ್ನಾ ಕೆಂಟ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರ ಕಾದಂಬರಿ "ಪ್ಯಾರಡೈಸ್" ಅನ್ನು 1994 ರಲ್ಲಿ ಬುಕರ್ ಪ್ರಶಸ್ತಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. 

ಅಬ್ದುಲ್ ರಜಾಕ್ ಗುರ್ನಾ ಅವರು ಒಟ್ಟು ಮೂರು ಕಾದಂಬರಿಗಳನ್ನು ಬರೆದಿದ್ದು, 1994ರಲ್ಲಿ ಅವರ ಮೊದಲ ಕಾದಂಬರಿ 
"ಪ್ಯಾರಡೈಸ್" ಪ್ರಕಟವಾಯಿತು. 2001ರಲ್ಲಿ 'ಬೈದಿ ಸೀ' ಹಾಗೂ 2005ರಲ್ಲಿ 'ಡಜರ್ಸನ್' ಕಾದಂಬರಿಯನ್ನು ಪ್ರಕಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಾಂಪ್ರದಾಯಿಕ ಮಾಧ್ಯಮಗಳಿಗೆ ಸೆಡ್ಡು ಹೊಡೆದ ಅಮೆರಿಕಾ ಅಧ್ಯಕ್ಷ; ಶ್ವೇತಭವನದಿಂದ 24/7 ‘ಟ್ರಂಪ್ ಟಿವಿ’ ಸ್ಟ್ರೀಮಿಂಗ್ ಆರಂಭ..!

ರಾಜ್ಯದ ಹಲವೆಡೆ ವರುಣನ ಆರ್ಭಟ: ಬೆಂಗಳೂರು ಸೇರಿ ಪ್ರಮುಖ ಜಿಲ್ಲೆಗಳಿಗೆ yellow ಅಲರ್ಟ್ ಘೋಷಣೆ!

ಕಸ್ತೂರಿರಂಗನ್ ವರದಿ ಜಾರಿಯಾದರೆ ರಕ್ತಪಾತ; ರಾಜ್ಯ ಸರ್ಕಾರಕ್ಕೆ ಆರಗ ಜ್ಞಾನೇಂದ್ರ ಎಚ್ಚರಿಕೆ

ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸುವ ಹಕ್ಕು ಯಾವುದೇ ಸರ್ಕಾರಕ್ಕೆ ಇಲ್ಲ: ಟ್ರಂಪ್ ವಿರುದ್ಧ ಒಂದಾದ ಅಮೆರಿಕದ ಮಾಧ್ಯಮಗಳು!

ಸೌಜನ್ಯ ಕೇಸ್‌ ಮರು ತನಿಖೆಗೆ ಸುಪ್ರೀಂ ಆದೇಶ: ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿದ್ದು ಏನು?