ವಿದೇಶ

ಕಿರ್ಗಿಸ್ತಾನಕ್ಕೆ ಭಾರತದಿಂದ 200 ಮಿಲಿಯನ್ ಡಾಲರ್ ದಸರಾ ಗಿಫ್ಟ್!

Srinivas Rao BV

ಕಿರ್ಗಿಸ್ತಾನ: ಕಿರ್ಗಿಸ್ತಾನಕ್ಕೆ ಭಾರತ 200 ಮಿಲಿಯನ್ ಡಾಲರ್ ನಷ್ಟು ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಭಾರತ ನೀಡುವ ಈ ಹಣ ಅಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆಯಾಗಲಿದ್ದು, ಕಿರ್ಗಿಸ್ತಾನದ ನಾಯಕರೊಂದಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಯಶಸ್ವಿ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ.

ರಕ್ಷಣಾ ಸಹಕಾರ ಅಫ್ಘಾನಿಸ್ತಾನ ಮೊದಲಾದವು ದ್ವಿಪಕ್ಷೀಯ ಮಾತುಕತೆಯ ಪ್ರಮುಖ ಅಂಶಗಳಾಗಿತ್ತು. ವಿದೇಶಾಂಗ ಸಚಿವ ಜೈಶಂಕರ್ ಕಿರ್ಗಿಸ್ತಾನ, ಅರ್ಮೇನಿಯ, ಕಜಕಸ್ತಾನಗಳಿಗೆ ನಾಲ್ಕು ದಿನಗಳ ಭೇಟಿಯಲ್ಲಿದ್ದು,  ಮಧ್ಯಪ್ರಾಚ್ಯದ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆಯ ಉದ್ದೇಶ ಹೊಂದಿದ್ದಾರೆ.

"ಕಿರ್ಗಿಸ್ತಾನದ ವಿದೇಶಾಂಗ ಸಚಿವ ರಸುಲನ್ ಕಜಕಬೇವ್ ಅವರೊಂದಿಗೆ ನಡೆಸಿದ ಮಾತುಕತೆ ಸೌಹಾರ್ದಯುತ ಹಾಗೂ ರಚನಾತ್ಮಕವಾಗಿತ್ತು ಎಂದು ವಿದೇಶಾಂಗ ಸಚಿವ ಜೈಶಂಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.  ಅಲ್ಲಿನ ಅಭಿವೃದ್ಧಿಗಾಗಿ 200 ಮಿಲಿಯನ್ ಡಾಲರ್ ಲೈನ್ ಆಫ್ ಕ್ರೆಡಿಟ್ ಲೈನ್ ನ್ನು ಘೋಷಣೆ ಮಾಡಲಾಗುತ್ತಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.

SCROLL FOR NEXT