ವಿದೇಶ

ಅಮೆರಿಕ ಮೂಲದ ಮೂವರಿಗೆ ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರ

Lingaraj Badiger

ಸ್ಟಾಕ್‌ಹೋಮ್: ಉದ್ದೇಶಪೂರ್ವಕವಲ್ಲದ ಪ್ರಯೋಗಗಳು ಅಥವಾ "ನೈಸರ್ಗಿಕ ಪ್ರಯೋಗಗಳಿಗಾಗಿ" ಎಂದು ಅಮೆರಿಕ ಮೂಲದ ಮೂವರು ಅರ್ಥಶಾಸ್ತ್ರಜ್ಞರು 2021ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಡೇವಿಡ್ ಕಾರ್ಡ್; ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಜೋಶುವಾ ಆಂಗ್ರಿಸ್ಟ್; ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಗ್ವಿಡೋ ಇಂಬೆನ್ಸ್ ಅವರು ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಕಾರ್ಮಿಕರ ಆರ್ಥಿಕತೆಗೆ ಸಂಬಂಧಿಸಿದ ಕಾರ್ಯಗಳಿಗಾಗಿ ಡೇವಿಡ್‌ ಕಾರ್ಡ್‌ ಅವರಿಗೆ ನೊಬೆಲ್‌ ಗೌರವ ಸಂದಿದೆ. ಪ್ರಶಸ್ತಿಯಲ್ಲಿ ಅರ್ಧ ಭಾಗ ಡೇವಿಡ್‌ ಅವರಿಗೆ ಹಾಗೂ ಉಳಿದಾರ್ಧ ಪ್ರಶಸ್ತಿ ಮೊತ್ತವು ಜೋಶುವಾ ಮತ್ತು ಗ್ವಿಡೊ ಅವರಿಗೆ ಹಂಚಿಕೆಯಾಗಲಿದೆ.

2019ರಲ್ಲಿ ಭಾರತ ಮೂಲದ ಅಭಿಜಿತ್‌ ಬ್ಯಾನರ್ಜಿ, ಅವರ ಹೆಂಡತಿ ಎಸ್ತರ್‌ ಡಫ್ಲೊ ಮತ್ತು ಹಾರ್ವರ್ಡ್‌ನ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್‌ ಅವರು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು.

SCROLL FOR NEXT