ವಿದೇಶ

ಕೊಲಂಬಿಯಾದಲ್ಲಿ ಪತ್ತೆಯಾದ ಹೊಸ ಕೊರೊನಾ ರೂಪಂತರಿ ತಳಿ 'ಮ್ಯು' ಮೇಲೆ ವಿಶ್ವ ಆರೋಗ್ಯ ಸಂಸ್ಥೆ ನಿಗಾ

Harshavardhan M

ಜಿನೇವಾ: ವಿಶ್ವ ಆರೋಗ್ಯ ಸಂಸ್ಥೆ ತಾನು ಹೊಸ ಕೊರೊನಾ ರೂಪಾಂತರ ತಳಿಯಾದ ಮ್ಯು ಮೇಲೆ ತೀವ್ರ ನಿಗಾ ಇರಿಸಿರುವುದಾಗಿ ತಿಳಿಸಿದೆ.

ವೈಜ್ಞಾನಿಕವಾಗಿ ಬಿ.1.621 ಎಂದು ಕರೆಯಲ್ಪಡುವ ಮ್ಯು ತಳಿ ಮುಂಬರುವ ದಿನಗಳಲ್ಲಿ ಜಗತ್ತಿಗೆ  ಆತಂಕವನ್ನು ತಂದೊಡ್ಡಬಲ್ಲ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮ್ಯು ವೈರಾಣು ರೋಗ ನಿರೋಧಕ ಶಕ್ತಿಯ ಕಣ್ತಪ್ಪಿಸಿ ಕಾಯಿಲೆ ಹರಡಬಲ್ಲ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿರುವ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಅದರ ಮೇಲೆ ನಿಗಾ ಇರಿಸಿದೆ. 

ಮ್ಯು ತಳಿಯ ವೈರಾಣು ಜನವರಿ ತಿಂಗಳಲ್ಲಿ ದಕ್ಷಿಣ ಅಮೆರಿಕ ರಾಷ್ಟ್ರವಾದ ಕೊಲಂಬಿಯಾದಲ್ಲಿ ಮೊದಲು ಪತ್ತೆಯಾಗಿತ್ತು. 

ಸದ್ಯ ವಿಶ್ವ ಆರೋಗ್ಯ ಸಂಸ್ಥೆ ನಿಗಾ 5 ಕೊರೊನಾ ರೂಪಾಂತರಿ ತಳಿಗಳ ಮೇಲೆ ನಿಗಾ ಇರಿಸಿದೆ. ಆಲ್ಫಾ ವೈರಾಣು 193 ದೇಶಗಳಲ್ಲಿ ಹಾವಳಿ ಎಬ್ಬಿಸಿದೆ. ಇನ್ನು ಭಾರತದಲ್ಲಿ ಮೊದಲು ಪತ್ತೆಯಾಗಿದ್ದ ಡೆಲ್ಟಾ ತಳಿ ಜಗತ್ತಿನ 170 ದೇಶಗಳಲ್ಲಿ ಕಂಡು ಬಂದಿದೆ. ಇದೀಗ ಈ ಪಟ್ಟಿಗೆ ವಿಶ್ವ ಆರೋಗ್ಯ ಸಂಸ್ಥೆ ಮ್ಯು ಅನ್ನೂ ಸೇರಿಸಿದೆ.

SCROLL FOR NEXT