ವಿದೇಶ

ತಾಲಿಬಾನ್ ಆಡಳಿತವನ್ನು ಮಾನ್ಯ ಮಾಡುವುದಕ್ಕೆ ಆತುರವೇನು ಇಲ್ಲ: ಅಮೇರಿಕ

Srinivas Rao BV

ವಾಷಿಂಗ್ ಟನ್: ಅಫ್ಘಾನಿಸ್ತಾವನ್ನು ವಶಪಡಿಸಿಕೊಂಡಿರುವ ತಾಲೀಬಾನ್ ಆಡಳಿತವನ್ನು ಮಾನ್ಯ ಮಾಡುವುದಕ್ಕೆ ತನಗೆ ಹಾಗೂ ತಾನು ಮಾತುಕತೆ ನಡೆಸಿರುವ ರಾಷ್ಟ್ರಗಳಿಗೆ ಆತುರವೇನು ಇಲ್ಲ ಎಂದು ಅಮೆರಿಕ ಹೇಳಿದೆ. 

ಜಾಗತಿಕ ಸಮುದಾಯದಲ್ಲಿ ತಾಲೀಬಾನ್ ಯಾವ ರೀತಿ ವಿಶ್ವಾಸ ಗಳಿಸಿಕೊಳ್ಳುತ್ತದೆ ನಿರೀಕ್ಷೆಗಳನ್ನು ಉಳಿಸಿಕೊಳ್ಳುತ್ತದೆ ಎಂಬುದರ ಆಧಾರದಲ್ಲಿ ಮಾನ್ಯ ಮಾಡಬೇಕೋ ಬೇಡವೋ ಎಂಬುದು ನಿರ್ಧಾರವಾಗಲಿದೆ ಎಂದು ಶ್ವೇತ ಭವನ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ. 

ಮತ್ತೊಂದು ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಅಮೆರಿಕದ ಸಚಿವಾಲಯವೂ ಇದೇ ಅಭಿಪ್ರಾಯವನ್ನು ಪ್ರಕಟಿಸಿದೆ. 

ನಮ್ಮ ಹಾಗೂ ನಮ್ಮ ಮಿತ್ರರಾಷ್ಟ್ರಗಳ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಸಂವಾದ ನಡೆಸುತ್ತೇವೆ ಎಂದು ಅಮೆರಿಕದ ರಾಜಕೀಯ ವ್ಯವಹಾರಗಳ ಸಚಿವ ವಿಕ್ಟೋರಿಯಾ ಜೆ ನುಲಾಂಡ್ ಹೇಳಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳನ್ನು ತಾಲಿಬಾನಿಗಳು ಹೇಗೆ ಗೌರವಿಸಲಿದ್ದಾರೆ ಅಂತಾರಾಷ್ಟ್ರೀಯ ಕಾನೂನು, ಪ್ರಜೆಗಳನ್ನು ಗೌರವಿಸುವುದು ಹಾಗೂ ವಿದೇಶಕ್ಕೆ ತೆರಳಲು ಇಚ್ಛಿಸುವ ಅಫ್ಘನ್ನರನ್ನು ಗೌರವಿಸುವ ವಿಷಯದಲ್ಲಿ ತಾಲೀಬಾನಿಗಳು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಮುಂದಿನ ನಿರ್ಧಾರ ಅವಲಂಬಿತವಾಗಿರಲಿದೆ. ಸೇನಾ ಹಿಂತೆಗೆತದ ವೇಳೆ ಅಮೆರಿಕ ತಾಲೀಬಾನ್ ನೊಂದಿಗೆ ಸಂಪರ್ಕ ಹೊಂದಿತ್ತು ಎಂದು ಅಮೆರಿಕ ಇದೇ ವೇಳೆ ಸ್ಪಷ್ಟಪಡಿಸಿದೆ. 
 

SCROLL FOR NEXT