ವಿದೇಶ

ಶ್ರೀಲಂಕಾಗೆ 150 ಟನ್ ಆಮ್ಲಜನಕ ದೇಣಿಗೆ: ಕೊರೊನಾ ಸಂಕಟ ಕಾಲದಲ್ಲಿ ಮಿತ್ರರಾಷ್ಟ್ರಕ್ಕೆ ನೆರವಾದ ಭಾರತ 

Harshavardhan M

ಕೊಲಂಬೊ: ಭಾರತ 150 ಟನ್ ಪ್ರಮಾಣದ ಆಮ್ಲಜನಕವನ್ನು ಶ್ರೀಲಂಕಾಗೆ ಕಳುಹಿಸಿಕೊಟ್ಟಿದೆ. ಕೊರೊನಾ ಮೂರನೇ ಅಲೆಯಿಂದಾಗಿ ಶ್ರೀಲಂಕಾ ಪರಿಸ್ಥಿತಿ ನಿಯಂತ್ರಣ ಮೀರುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಕೊರತೆ ಕಂಡುಬಂದಿತ್ತು.  

ದೇಶಾದ್ಯಂತ ಲಾಕ್ ಡೌನ್ ಅನ್ನು ಸೆ.13ರ ತನಕ ವಿಸ್ತರಣೆ ಮಾಡಿರುವುದಾಗಿ ಶ್ರೀಲಂಕಾದ ರಾಜಪಕ್ಸ ಸರ್ಕಾರ ಶುಕ್ರವಾರವಷ್ಟೇ ಘೋಷಿಸಿತ್ತು. 

ಇಂಥ ಸಂದರ್ಭದಲ್ಲಿ ಭಾರತ 150 ಟನ್ ಆಮ್ಲಜನಕವನ್ನು ಕಳುಹಿಸಿಕೊಟ್ಟಿರುವುದಕ್ಕೆ ಶ್ರೀಲಂಕಾ ಮೆಚ್ಚುಗೆ ವ್ಯಕ್ತಪಡಿಸಿದೆ. ವೈಜಾಗ್ ಮತ್ತು ಚೆನ್ನೈನಿಂದ ಆಮ್ಲಜನಕ ತುಂಬಿದ ಹಡಗು ಶ್ರೀಲಂಕಾದ ಕೊಲಂಬೊ ಬಂದರನ್ನು ತಲುಪಿರುವುದಾಗಿ ಅಲ್ಲಿನ ಭಾರತೀಯ ಹೈಕಮಿಷನ್ ಕಚೇರಿ ಟ್ವೀಟ್ ಮಾಡಿದೆ 

ಕೊರೊನಾ ಸೋಂಕಿತರ ಏರಿಕೆಯಿಂದಾಗಿ ದೇಶಾದ್ಯಂತ ಮೇಲಿಂದ ಮೇಲೆ ಕಠಿಣ ಲಾಕ್ ಡೌನ್ ನಿಯಮಾವಳಿಯನ್ನು ಹೇರಲಾಗುತ್ತಿದ್ದು, ಅದರಿಂದಾಗಿ ದೇಶದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ.

SCROLL FOR NEXT