ವಿದೇಶ

ಅಫ್ಘಾನಿಸ್ತಾನ: ಅಧಿಕಾರಕ್ಕಾಗಿ ಹಕ್ಕಾನಿ, ಬರದರ್ ನಡುವೆ ಪೈಪೋಟಿ

Srinivas Rao BV

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಯಾರು ಅಧಿಕಾರ ಚುಕ್ಕಾಣಿ  ಹಿಡಿಯಬೇಕು ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಮುಲ್ಲಾ ಬರದಾರ್ ಜೊತೆ ಸರ್ಕಾರ ಹಂಚಿಕೊಳ್ಳಲು ಹಕ್ಕಾನಿ ನೆಟ್ವರ್ಕ್ ಸಿದ್ಧವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.  

ಹಕ್ಕಾನಿ ಗುಂಪನ್ನು ಪಾಕಿಸ್ತಾನ ಬೆಂಬಲಿಸುತ್ತಿದೆ. ಈ ಗುಂಪು ಅತ್ಯಂತ ಸಾಂಪ್ರಾದಾಯಿಕ ಸುನ್ನಿ ಪಶ್ತೂನ್ ಸರ್ಕಾರ ರಚನೆಯಾಗಬೇಕು ಎಂದು ಹಠ ಹಿಡಿದಿದೆ. 

ದೋಹಾ ಶಾಂತಿ ಮಾತುಕತೆಯ ವೇಳೆ ತಾಲಿಬಾನ್ ಸಹ ಸಂಸ್ಥಾಪಕ, ರಾಜಕೀಯ  ವಿಭಾಗದ ಮುಖ್ಯಸ್ಥ ಮುಲ್ಲಾ ಅಬ್ದುಲ್ ಘನಿ ಬರದರ್   ಕೈಗೊಂಡ ನಿರ್ಣಯದ ವಿರುದ್ದ ಅದು ವ್ಯವಹರಿಸುತ್ತಿದೆ.

ಅಂತರರಾಷ್ಟ್ರೀಯ ಸಮುದಾಯದ ಮಾನ್ಯತೆ ಪಡೆಯಬೇಕೆಂದರೆ, ಅಲ್ಪಸಂಖ್ಯಾತರು ಸರ್ಕಾರದ ಭಾಗವಾಗಬೇಕೆಂದು ಬರದರ್‌ ಬಯಸಿದ್ದಾರೆ.  ಆದರೆ ಹಕ್ಕಾನಿ ಮುಖ್ಯಸ್ಥ, ತಾಲಿಬಾನ್‌ ಉಪ ನಾಯಕ ಸಿರಾಜುದ್ದೀನ್‌ ಹಾಗೂ ಅವರ  ಬಂಡಕೋರ ಮಿತ್ರರು ಮಾತ್ರ ಯಾರೊಂದಿಗೂ ಸರ್ಕಾರ ಹಂಚಿಕೊಳ್ಳಲು ಬಯಸುತ್ತಿಲ್ಲ. ನೂರಕ್ಕೆ ನೂರರಷ್ಟು ತಾಲಿಬಾನ್ ಸರ್ಕಾರ  ರಚನೆಯಾಗಬೇಕು ಎಂದು ಹೇಳುತ್ತಿದ್ದಾರೆ. ತಾವು  ಕಾಬೂಲ್ ಅನ್ನು ವಶಪಡಿಸಿಕೊಂಡಿದ್ದೇವೆ. ಅಫ್ಘಾನ್ ರಾಜಧಾನಿಯ ಮೇಲೆ ತಮ್ಮ ಪ್ರಾಬಲ್ಯವಿದೆ ಹಾಗಾಗಿ ಉಳಿದರವರು ಹಿಂದೆ ಸರಿಯಬೇಕು  ಎಂದು ಬರದರ್‌ ಕೋರಿದ್ದಾರೆ. ಶನಿವಾರವೇ  ಬರದರ್ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಬೇಕಿತ್ತು ಆದರೆ, ಈ ಸಂಬಂಧ ಮಾತುಕತೆ ಇನ್ನೂ ಪೂರ್ಣಗೊಳ್ಳದ ಕಾರಣ ಮುಂದಿನ ವಾರ ಸರ್ಕಾರ ಸ್ಥಾಪಿಸುವುದಾಗಿ ತಾಲಿಬಾನ್ ಸ್ಪಷ್ಟಪಡಿಸಿದೆ.

SCROLL FOR NEXT