ವಿದೇಶ

ಪಾಕಿಸ್ತಾನದಲ್ಲಿ ಉಗ್ರಸಂಘಟನೆಯಿಂದ ಸುಸೈಡ್ ಬಾಂಬ್ ದಾಳಿ: ಮೂವರು ಸೈನಿಕರು ಸಾವು

Harshavardhan M

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ಸಂಭವಿಸಿದ್ದು, ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.ಲ್ಲದೆ 20 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕ್ವೆಟ್ಟಾದಲ್ಲಿ ನೆಲೆಗೊಂಡಿದ್ದ ಪಾಕ್ ಭದ್ರತಾಪಡೆಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ದಾಳಿಯ ಹೊಣೆಯನ್ನು ತೆಹ್ರೀಕ್ ಇ ತಾಲಿಬಾನ್ ಉಗ್ರಸಂಘಟನೆ ಹೊತ್ತುಕೊಂಡಿದೆ. 

ದುರ್ಘಟನೆಯಲ್ಲಿ ಸತ್ತಿರುವ ಮೂವರು ಭದ್ರತಾಪಡೆ ಸಿಬ್ಬಂದಿ ಎಂದು ತಿಳಿದುಬಂದಿದೆ. ಅಲ್ಲದೆ ಗಾಯಗೊಂಡ ಎಲ್ಲಾ 20 ಮಂದಿಯಲ್ಲಿ 18 ಮಂದಿ ಪಾಕ್ ಸೈನಿಕರು ಎಂದು ತಿಳಿದುಬಂದಿದೆ. ಉಳಿದಿಬ್ಬರು ನಾಗರಿಕರಾಗಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸರ್ಕಾರ ಬದಲಾದ ಮಾತ್ರಕ್ಕೆ ಪಾಕ್ ಸರ್ಕಾರಕ್ಕೆ ಮುಖಭಂಗ ಮಾಡುವ ತನ್ನ ಪ್ರಯತ್ನ ನಿಲ್ಲುವುದಿಲ್ಲ ಎಂದು ಉಗ್ರಸಂಘಟನೆ ಸೂಚನೆ ನೀಡಿದೆ. 

ಆಫ್ಘನ್ ನೆಲದಲ್ಲಿ ಅಡಗಿರುವ ಟಿಟಿಪಿ ಬಂಡುಕೋರರನ್ನು ಸೆರೆಹಿಡಿಯಲು ಮುಂದಾಗಿರುವ ಪಾಕ್ ಸರ್ಕಾರ ಅದೇ ಉದ್ದೇಶದಿಂದ ತಾಲಿಬಾನ್ ಜೊತೆ ಮಾತುಕತೆ ನಡೆಸಲು ಮುಂದಾಗಿತ್ತು. ಅದರ ನಡುವೆಯೇ ಟಿಟಿಪಿ ಸಂಘಟನೆಯ ಆಪ್ತ ಸಂಘಟನೆಯಾದ ತೆಹ್ರೀಕ್ ಇ ತಾಲಿಬಾನ್ ಪಾಕ್ ನಲ್ಲಿ ಹಿಂಸಾಚಾರ ಮುಂದುವರಿಸಿದೆ.

SCROLL FOR NEXT