ವಿದೇಶ

ಕಾಶ್ಮೀರ ಸಮಸ್ಯೆ ಬಗೆಹರಿಸದೆ ಭಾರತದೊಂದಿಗೆ ಶಾಂತಿ ಮಾತುಕತೆ ಸಾಧ್ಯವೇ ಇಲ್ಲ: ಪಾಕಿಸ್ತಾನ ಪುನರುಚ್ಛಾರ

Sumana Upadhyaya

ಇಸ್ಲಾಮಾಬಾದ್: ನೆರೆ ದೇಶಗಳಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತಮ್ಮ ದೇಶ ಸೂಕ್ಷ್ಮವಾಗಿ ಗಮನಿಸಿ ಅರಿವು ಪಡೆದುಕೊಳ್ಳುತ್ತಿದ್ದು ಗಡಿ ಭಾಗದಲ್ಲಿ ಶಾಂತಿಯನ್ನು ಕದಡಲು ಯತ್ನಿಸಿದರೆ ಪಿತೂರಿ ನಡೆಸಿದರೆ ಅದನ್ನು ಮಟ್ಟಹಾಕಲು ಎದುರಿಸಲು ಸಿದ್ಧ ಎಂದು ಪಾಕಿಸ್ತಾನ ಅಧ್ಯಕ್ಷ ಅರಿಫ್ ಅಲ್ವಿ ಎಚ್ಚರಿಸಿದ್ದಾರೆ.

ಪಾಕಿಸ್ತಾನದ ರಕ್ಷಣಾ ದಿನದ ಅಂಗವಾಗಿ ನೀಡಿರುವ ಸಂದೇಶದಲ್ಲಿ ಅವರು, ಕಾಶ್ಮೀರ ಜನತೆಗೆ ತಮ್ಮ ಸರ್ಕಾರದ ಬೆಂಬಲವನ್ನು ಮತ್ತೆ ಘೋಷಿಸಿದ್ದಾರೆ.ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸದೆ ಭಾರತದೊಂದಿಗೆ ಶಾಂತಿ ಮಾತುಕತೆ ಸಾಧ್ಯವೇ ಇಲ್ಲ ಎಂದು ಪುನರುಚ್ಛರಿಸಿದ್ದಾರೆ.

ಕಾಶ್ಮೀರ ಸೇರಿದಂತೆ ಭಾರತದೊಂದಿಗಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಮಯ ಬಂದಿದೆ. ಸಮಸ್ಯೆಗಳನ್ನು ಬಗೆಹರಿಸಿದರೆ ಗಡಿ ಪ್ರದೇಶದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ಇಸ್ಲಾಮಾಬಾದ್ ನಲ್ಲಿ ನಡೆದ ರಕ್ಷಣಾ ದಿನ ಆಚರಣೆಯಲ್ಲಿ 31 ಸುತ್ತು ಬಂದೂಕು ವಂದನೆಯೊಂದಿಗೆ ಆರಂಭಿಸಲಾಯಿತು ಎಂದು ಸರ್ಕಾರದ ರೇಡಿಯೊ ಪಾಕಿಸ್ತಾನ ವರದಿ ಮಾಡಿದೆ. 

SCROLL FOR NEXT