ಅಫ್ಘನ್ ರಾಷ್ಟ್ರೀಯ ಸೇನೆಗೆ ಅಮೆರಿಕ ನೀಡಿದ್ದ ಮಿಲಿಟರಿ ವಾಹನಗಳು 
ವಿದೇಶ

ಅಫ್ಘಾನಿಸ್ತಾನ ತೊರೆಯುವ ಮುನ್ನ ಅಮೆರಿಕದಿಂದ ನೂರಾರು ಮಿಲಿಯನ್ ಮೌಲ್ಯದ ಯುದ್ದೋಪಕರಣ ನಾಶ: ತಾಲಿಬಾನ್

ಅಮೆರಿಕ ಪಡೆ ಅಪ್ಘಾನಿಸ್ತಾನ ತೊರೆಯುವ ಮುನ್ನ ನೂರಾರು ಮಿಲಿಯನ್ ಮೌಲ್ಯದ ಯುದ್ದೋಪಕರಣಗಳನ್ನು ನಾಶಪಡಿಸಿದೆ ಎಂದು ತಾಲಿಬಾನ್ ಹೇಳಿದೆ.   

ಕಾಬೂಲ್: ಅಮೆರಿಕ ಪಡೆ ಅಪ್ಘಾನಿಸ್ತಾನ ತೊರೆಯುವ ಮುನ್ನ ನೂರಾರು ಮಿಲಿಯನ್ ಮೌಲ್ಯದ ಯುದ್ದೋಪಕರಣಗಳನ್ನು ನಾಶಪಡಿಸಿದೆ ಎಂದು ತಾಲಿಬಾನ್ ಹೇಳಿದೆ.

ಕೇಂದ್ರ ತನಿಖಾ ಸಂಸ್ಥೆಯ ಹಿಂದಿನ ಕಾರ್ಯಾಚರಣಾ ಕೇಂದ್ರದ ಒಳಗಡೆ ಸೋಮವಾರ ಸುದ್ದಿಗಾರರಿಗೆ ಅವಕಾಶ ಮಾಡಿಕೊಟ್ಟ ತಾಲಿಬಾನ್, ಅಮೆರಿಕ ಪಡೆ ಅಫ್ಘಾನಿಸ್ತಾನ ತೊರೆಯುವ  ಎಲ್ಲಾ ಮಿಲಿಟರಿ ಸಾಧನಗಳು, ವಾಹನಗಳು ಮತ್ತು ದಾಖಲಾತಿಗಳನ್ನು ಸುಟ್ಟುಹಾಕಿದೆ ಎಂದು ಹೇಳಿರುವುದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. 

ಅಮೆರಿಕದ ಗುಪ್ತಚರ ಅಧಿಕಾರಿಗಳು ಮತ್ತು ಅಫ್ಘಾನ್ ಎನ್ ಡಿಎಸ್ 01 ಪಡೆಯ ಕಾರ್ಯಾಚರಣೆಯ ಕೇಂದ್ರ ಇದೀಗ ತಾಲಿಬಾನ್ ನಿಯಂತ್ರಣದಲ್ಲಿದೆ. ಅನೇಕ ಮಹತ್ವದ ದಾಖಲೆಗಳು, ನೂರಾರು ಹಮ್ವೀಗಳು, ಶಸ್ತ್ರಸಜ್ಜಿತ ಟ್ಯಾಂಕ್‌ಗಳು ಮತ್ತು ಆಯುಧಗಳನ್ನು ಅಮೆರಿಕ ಪಡೆ ನಾಶಪಡಿಸಿದೆ ಎಂದು ತಾಲಿಬಾನ್ ಹೇಳಿರುವುದಾಗಿ ಹೇಳಿರುವುದಾಗಿ ಸ್ಥಳೀಯ ಮಾಧ್ಯಮ ಟೊಲೊ ನ್ಯೂಸ್ ವರದಿ ಮಾಡಿದೆ. 

ಬಳಸದಂತೆ ಎಲ್ಲಾ ಆಯುದ್ಧಗಳನ್ನುಅಮೆರಿಕ ಪಡೆ ನಾಶಪಡಿಸಿದ್ದಾರೆ. ಗಣಿಗಳ ಭಯದಿಂದ ಕ್ಯಾಂಪಿನ ಕೆಲ ರೂಮ್ ಗಳಿಗೆ ತಾಲಿಬಾನ್ ಇಲ್ಲಿಯವರೆಗೂ ಪ್ರವೇಶಿಸಿರಲಿಲ್ಲ ಎಂದು ಕಮಾಂಡರ್, ಮೌಲವಿ ಅಥ್ನೈನ್ ಹೇಳಿದ್ದಾರೆ. ಅಮೆರಿಕದ ಧೀರ್ಘ ಆಗಸ್ಟ್ 31 ರಂದು ಮುಂಜಾನೆ ಅಮೆರಿಕ ಪಡೆಗಳು ಅಫ್ಘಾನಿಸ್ತಾನದಿಂದ ನಿರ್ಗಮಿಸಿದ್ದವು.  

ಅಫ್ಘಾನಿಸ್ತಾನದಿಂದ 6 ಸಾವಿರ ಅಮೆರಿಕ ಜನರು ಮತ್ತು 1,24,000ಕ್ಕೂ ಹೆಚ್ಚು ನಾಗರಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ III ಈ ಹಿಂದೆ ತಿಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT