ವಿದೇಶ

ಕೋವಿಡ್ ಲಸಿಕೆ ಅಡ್ಡ ಪರಿಣಾಮ ಕುರಿತು ವಿವಾದಾತ್ಮಕ ಟ್ವೀಟ್: ರ‍್ಯಾಪರ್ ನಿಕಿ ಮಿನಾಜ್ ಶ್ವೇತಭವನಕ್ಕೆ ಆಹ್ವಾನ

Nagaraja AB

ವಾಷಿಂಗ್ಟನ್ : ಕೋವಿಡ್-19 ಲಸಿಕೆ ಸುರಕ್ಷತೆ ಬಗ್ಗೆ ಪ್ರಶ್ನಿಸಿದ್ದ ಗ್ರ್ಯಾಮಿ ನಾಮನಿರ್ದೇಶನದ ರ‍್ಯಾಪರ್ ನಿಕಿ ಮಿನಾಜ್ ಅವರನ್ನು ಶ್ವೇತ ಭವನಕ್ಕೆ ಕರೆಯಲಾಗಿದೆ.

ಲಸಿಕೆ ಅಡ್ಡ ಪರಿಣಾಮ ಕುರಿತು ಈ ವಾರದ ಆರಂಭದಲ್ಲಿ 38 ವರ್ಷದ ನಿಕಿ ಮಿನಾಜ್ ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ತಮ್ಮನ್ನು ಶ್ವೇತಭವನಕ್ಕೆ ಕರೆಯಲಾಗಿದೆ ಎಂದು ಮಿನಾಜ್ ಬುಧವಾರ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಶ್ವೇತ ಭವನ ತಮ್ಮನ್ನು ಕರೆದಿದೆ. ಇದು ಸರಿಯಾದ ದಿಕ್ಕಿನ ಹೆಜ್ಜೆ ಎಂದು ಅನಿಸುತ್ತಿದೆ ಎಂದು ನಿಕಿ ಮಿನಾಜ್ ಟ್ವೀಟ್ ಮಾಡಿದ್ದಾರೆ.  ಶ್ವೇತ ಭವನಕ್ಕೆ ಹೋಗುತ್ತೇನೆ, ಜನರ ಪರವಾಗಿ ಲಸಿಕೆ ಸುರಕ್ಷತೆ ಕುರಿತಂತೆ ಪ್ರಶಿಸುವುದಾಗಿ ಅವರು ಹೇಳಿದ್ದಾರೆ. 

ಶ್ವೇತ ಭವನ ತಮ್ಮನ್ನು ಕರೆದಿದೆ. ಇದು ಸರಿಯಾದ ದಿಕ್ಕಿನ ಹೆಜ್ಜೆ ಎಂದು ಅನಿಸುತ್ತಿದೆ ಎಂದು ನಿಕಿ ಮಿನಾಜ್ ಟ್ವೀಟ್ ಮಾಡಿದ್ದಾರೆ.  ಶ್ವೇತ ಭವನಕ್ಕೆ ಹೋಗುತ್ತೇನೆ, ಜನರ ಪರವಾಗಿ ಲಸಿಕೆ ಸುರಕ್ಷತೆ ಕುರಿತಂತೆ ಪ್ರಶಿಸುವುದಾಗಿ ಅವರು ಹೇಳಿದ್ದಾರೆ. 

ನಿಕಿ ಮಿನಾಜ್ ಅವರನ್ನು ಶ್ವೇತ ಭವನಕ್ಕೆ ಕರೆಯಲಾಗಿದೆ. ನಮ್ಮ ಡಾಕ್ಟರ್ ಗಳು ಲಸಿಕೆ ಸುರಕ್ಷತೆ ಹಾಗೂ ಪರಿಣಾಮಕಾರಿತ್ವ ಕುರಿತಂತೆ ಮಿನಾಜ್ ಅವರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT