ಇಮ್ರಾನ್ ಖಾನ್ 
ವಿದೇಶ

ಆಫ್ಘನ್ ನಲ್ಲಿ ಅಮೆರಿಕ ಬೆಂಬಲಿಸಿ ತಪ್ಪು ಮಾಡಿದೆವು, ತಾಲಿಬಾನಿಗಳೊಂದಿಗೆ ಚರ್ಚಿಸುತ್ತಿದ್ದೇನೆ: ಪಾಕ್‌ ಪ್ರಧಾನಿ ಇಮ್ರಾನ್ ಖಾನ್

ಅಫ್ಘಾನಿಸ್ತಾನದಲ್ಲಿ ಎಲ್ಲಾ ಸಮುದಾಯಗಳನ್ನು ಒಳಗೊಂಡ ಸಮ್ಮಿಶ್ರ ಸರ್ಕಾರ ಇರಬೇಕು ಎಂಬುದೇ ತಮ್ಮ ಆಶಯವಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 

ಇಸ್ಲಾಮಾಬಾದ್: ಅಫ್ಘಾನಿಸ್ತಾನದಲ್ಲಿ ಎಲ್ಲಾ ಸಮುದಾಯಗಳನ್ನು ಒಳಗೊಂಡ ಸಮ್ಮಿಶ್ರ ಸರ್ಕಾರ ಇರಬೇಕು ಎಂಬುದೇ ತಮ್ಮ ಆಶಯವಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 

ಇದಕ್ಕಾಗಿ ತಾಲಿಬಾನಿಗಳ ಜೊತೆ ಮಾತುಕತೆ ಆರಂಭಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. ತಜಿಕಿಗಳು, ಹಜಾರಗಳು, ಉಜ್ಬೆಕ್‌ಗಳಿಗೆ ಸರ್ಕಾರದಲ್ಲಿ ಪಾಲು ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಈ ಸಂಬಂಧ ಅವರು ಶನಿವಾರ ಟ್ವೀಟ್ ಮಾಡಿದ್ದು, ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಜನರ ಹಕ್ಕುಗಳನ್ನು ಗೌರವಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ ಎಂದು ತಾಲಿಬಾನಿಗಳಿಗೆ ಇಮ್ರಾನ್ ಖಾನ್‌ ಸಲಹೆ ನೀಡಿದ್ದಾರೆ. ಅಫ್ಘಾನ್ ನೆಲ ಮತ್ತೊಮ್ಮೆ ಭಯೋತ್ಪಾದಕರ ಸ್ವರ್ಗವಾಗಿ ಪರಿವರ್ತನೆಗೊಳ್ಳಬಾರದು ಎಂದು ಅವರು ಸೂಚನೆ ನೀಡಿದ್ದಾರೆ. 

ಅಫ್ಘಾನಿಸ್ತಾನದ ಹೊಸ ಸರ್ಕಾರದಲ್ಲಿ ಎಲ್ಲಾ ಸಮುದಾಯಗಳಿಗೆ ಪ್ರಾತಿನಿತ್ಯ ಲಭಿಸುವುದನ್ನು ಖಚಿತಪಡಿಸಲು ಪಾಕಿಸ್ತಾನ ಮುಂದಾಗಬೇಕೆಂದು ಶಾಂಘೈ ಸಹಕಾರ ಸಂಸ್ಥೆ (SCO) ಸದಸ್ಯ ರಾಷ್ಟ್ರಗಳು ಕರೆ ನೀಡಿದ ಮರುದಿನವೇ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ. ತಾಲಿಬಾನ್ ಸರ್ಕಾರದ ಮಂತ್ರಿ ಮಂಡಲದ 33 ಮಂದಿಯಲ್ಲಿ ತಜಿಕಿಗಳು, ಮಹಿಳೆಯರಿಗೆ ಯಾವುದೇ ಪ್ರಾತಿನಿಧ್ಯವಿಲ್ಲದಿರುವುದು ಗಮನಾರ್ಹವಾಗಿದೆ.

ಅಮೆರಿಕವನ್ನು ಬೆಂಬಲಿಸಿ ದೊಡ್ಡ ತಪ್ಪು ಮಾಡಿದೆವು
ಇದೇ ವೇಳೆ ಒಬ್ಬ ಪಾಕಿಸ್ತಾನಿಯಾಗಿ, ಅಮೆರಿಕ ಸೆನೆಟರ್‌ಗಳು ಮಾಡಿದ ಕೆಲವು ಟೀಕೆಗಳಿಂದ ನನಗೆ ತುಂಬಾ ನೋವಾಗಿದೆ. ಅಫ್ಘಾನಿಸ್ತಾನದಲ್ಲಿನ ಈ ಸೋಲಿಗೆ ಪಾಕಿಸ್ತಾನವನ್ನು ದೂಷಿಸುವುದು ಅತ್ಯಂತ ನೋವಿನ ಸಂಗತಿ. ಪಾಕಿಸ್ತಾನವು ತನ್ನ ಅಫ್ಘಾನಿಸ್ತಾನ ಆಕ್ರಮಣದಲ್ಲಿ ಅಮೆರಿಕದ ಪರವಾಗಿ ನಿಂತು "ಭಾರೀ ಬೆಲೆ" ತೆತ್ತಿದೆ ಎಂದು ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT