ಕೆನಡಾ ಸಂಸತ್ ಗೆ 17 ಇಂಡೋ-ಕೆನೆಡಿಯನ್ನರ ಆಯ್ಕೆ 
ವಿದೇಶ

ಟ್ರೂಡೋ ಬಹುಮತ ಕೊರತೆ; ಸಂಸತ್ ಗೆ 17 ಇಂಡೋ-ಕೆನೆಡಿಯನ್ನರ ಆಯ್ಕೆ

ಕ್ಷಿಪ್ರ ಚುನಾವಣೆಯಲ್ಲಿ ಬಹುಮತ ಸಾಧಿಸುವುದಕ್ಕೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ವಿಫಲಗೊಂಡಿದ್ದು, ಭಾರತೀಯ ಮೂಲದ 17 ಮಂದಿ ಕೆನೆಡಿಯನ್ನರು ಸಂಸತ್ ಗೆ ಆಯ್ಕೆಯಾಗಿದೆ.

ಟೊರೊಂಟೋ: ಕ್ಷಿಪ್ರ ಚುನಾವಣೆಯಲ್ಲಿ ಬಹುಮತ ಸಾಧಿಸುವುದಕ್ಕೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ವಿಫಲಗೊಂಡಿದ್ದು, ಭಾರತೀಯ ಮೂಲದ 17 ಮಂದಿ ಕೆನೆಡಿಯನ್ನರು ಸಂಸತ್ ಗೆ ಆಯ್ಕೆಯಾಗಿದೆ.

ಟ್ರೂಡೋ ನೇತೃತ್ವದ ಪಕ್ಷಕ್ಕೆ 338 ಸದಸ್ಯ ಬಲ ಹೊಂದಿರುವ ಸಂಸತ್ ನಲ್ಲಿ 170 ಸ್ಥಾನಗಳು ದೊರೆತಿದ್ದು 14 ಸಂಸದರ ಬೆಂಬಲದ ಕೊರತೆ ಎದುರಾಗಿದೆ.

ಜಗ್ಮೀತ್ ಸಿಂಗ್ ನೇತೃತ್ವದ ನ್ಯೂ ಡೆಮೊಕ್ರೆಟಿಕ್ ಪಾರ್ಟಿ (ಎನ್ ಡಿಪಿ)ಯಿಂದ ಆಯ್ಕೆಯಾಗಿರುವ ಸಂಸದರ ಸಂಖ್ಯೆ 24 ರಿಂದ 27 ಕ್ಕೆ ಏರಿಕೆಯಾಗಿದ್ದು ಕಿಂಗ್ ಮೇಕರ್ ಪಕ್ಷವಾಗಿರಲಿದೆ.

ಪ್ರಮುಖ ವಿಪಕ್ಷ ಕನ್ಸರ್ವೆಟೀವ್ ಪಕ್ಷಕ್ಕೆ 122 ಸ್ಥಾನಗಳು ದೊರೆತಿದ್ದು ಕಳೆದ ಬಾರಿಗಿಂತಲೂ ಕೇವಲ ಒಂದು ಸ್ಥಾನವನ್ನು ಹೆಚ್ಚಿಸಿಕೊಂಡಿದೆ. ಜಗ್ಮೀತ್ ಸಿಂಗ್,  ಮಾಜಿ ಸಚಿವ, ಟಿಮ್ ಉಪ್ಪಲ್, ಹಾಲಿ ಸಚಿವರಾದ ಹರ್ಜೀತ್ ಸಿಂಗ್ ಸಜ್ಜನ್, ಬರ್ದಿಶ್ ಚಗ್ಗರ್, ಅನಿತಾ ಆನಂದ್ ಸಂಸತ್ ಗೆ ಆಯ್ಕೆಯಾಗಿರುವ ಭಾರತೀಯ ಕೆನೆಡಿಯನ್ನರಾಗಿದ್ದಾರೆ.

ರಕ್ಷಣಾ ಸಚಿವ ಹರ್ಜಿತ್ ಸಿಂಗ್ ಸಜ್ಜನ್ ವ್ಯಾಂಕೋವರ್ ದಕ್ಷಿಣ ಕ್ಷೇತ್ರದಿಂದ ಕನ್ಸರ್ವೇಟೀವ್ ಪಕ್ಷದ ಸುಖ್ಬೀರ್ ಗಿಲ್ ಅವರನ್ನು ಸೋಲಿಸಿ ಪುನರಾಯ್ಕೆಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಯೋತ್ಪಾದಕ ದಾಳಿ ವಿಫಲಗೊಳಿಸಿದ ಭಾರತೀಯ ಪೈಲಟ್‌ಗೆ Israel ಅತ್ಯುನ್ನತ ಗೌರವ: ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ, ಕ್ಯಾಪ್ಟನ್ ಸ್ಮಿತ್‌ಗೆ ಆಹ್ವಾನ..!

4 IAS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ; ಯಾರಿಗೆಲ್ಲಾ ಬದಲಾವಣೆ

ಆಧಾರ ರಹಿತ ಆರೋಪ ಸರಿಯಲ್ಲ, ‘ದಾಖಲೆ ತೋರಿಸಿ, ಜಮೀನನ್ನೇ ನಿಮ್ಮ ಕುಟುಂಬಕ್ಕೆ ಕೊಡ್ತೀನಿ; HDK NICE ಆರೋಪಕ್ಕೆ ಸಚಿವ ಬಾಲಕೃಷ್ಣ ತಿರುಗೇಟು

SIR ಅಕ್ರಮಗಳ ಕುರಿತು ರಾಜ್ಯದಿಂದ ಪ್ರತ್ಯೇಕ ತನಿಖೆ ಇಲ್ಲ: CM ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ