ವಿದೇಶ

ತಾಲಿಬಾನಿಗಳ ಹೊಸ ರೂಲ್: ಸ್ಟೈಲಿಷ್‌ ಕೇಶ ವಿನ್ಯಾಸ, ಕ್ಲೀನ್‌ ಶೇವ್‌, ಟ್ರಿಮ್ ಗೂ ನಿಷೇಧ

Lingaraj Badiger

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನಿಗಳು ತಮ್ಮ ವಿಕೃತ ಕಾನೂನುಗಳ ಮೂಲಕ ಜನರನ್ನು ಭಯಭೀತಗೊಳಿಸುವ ಜೊತೆಗೆ ಕಿರುಕುಳ ನೀಡುತ್ತಿರುವ ವಿಷಯ ಹೊಸತೇನು ಅಲ್ಲ. ಈ ಕ್ರಮದಲ್ಲಿ ಬಾಹ್ಯ ದೇಶಗಳು ತಮ್ಮ ಆಂತರಿಕ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಬಾರದು ಎಂದು ತಾಲಿಬಾನ್‌ ನಾಯಕರು ಎಚ್ಚರಿಕೆ ನೀಡಿದ್ದಾರೆ. 

ಆದರೆ, ಹೊಸದಾಗಿ ಪುರುಷರ ಕೆಲವೊಂದು ಕ್ಷೌರದ ಮೇಲೂ ನಿಷೇಧ ಹೇರಿರುವುದಾಗಿ ಘೋಷಿಸಿದೆ. ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಪುರುಷರು  ಸ್ಟೈಲಿಷ್‌ ಕೇಶ ವಿನ್ಯಾಸ, ಕ್ಲೀನ್ ಶೇವ್‌ ಮಾಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಇಸ್ಲಾಮಿಕ್ ಓರಿಯಂಟೇಶನ್ ಸಚಿವಾಲಯದ ಅಧಿಕಾರಿಗಳು, ಪ್ರಾಂತೀಯ ರಾಜಧಾನಿ ಲಷ್ಕರ್ ಗಾಹ್‌ನಲ್ಲಿರುವ ಪುರುಷರ ಸಲೊನ್‌ ಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ, ಸ್ಟೈಲಿಷ್‌ ಕೇಶ ವಿನ್ಯಾಸ, ಸಂಪೂರ್ಣ ದಾಡಿ ತಗೆಯುವುದು ಹಾಗೂ ಟ್ರಿಮ್ ಮಾಡಬಾರದು ಎಂದು ಸೂಚಿಸಿದೆ. 

ಕ್ಷೌರದ ಅಂಗಡಿಗಳಲ್ಲಿ ಜನಪ್ರಿಯ ಸಂಗೀತ ಇಲ್ಲವೇ ಶ್ಲೋಕಗಳನ್ನು ಬಳಸಬಾರದು ಎಂದು ಸಹ ತಾಲಿಬಾನ್ ಆದೇಶಿಸಿದೆ. ಪ್ರಸ್ತುತ ತಾಲಿಬಾನ್ ಆಡಳಿತದಲ್ಲಿ  ಅನುಸರಿಸುತ್ತಿರುವ ದಮನಕಾರಿ ಕಾನೂನು ನೋಡಿದರೆ ಮತ್ತೆ ಹಳೆಯ ನೀತಿಗಳಿಗೆ ಮರಳುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಒಂದೆಡೆ, ನಾವು ಬದಲಾಗಿದ್ದೇವೆ ಎಂದು ಹೇಳುತ್ತಲೇ ತಮ್ಮ ಹಳೆಯ ಧೋರಣೆಯನ್ನು ಪಾಲಿಸುತ್ತಾ ತಾಲಿಬಾನ್, ಅಫ್ಘಾನಿಸ್ತಾನದಲ್ಲಿ ದೊಡ್ಡ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮುಂದುವರೆಸಿದೆ. ಈ ಗುಂಪು ಇತ್ತೀಚೆಗೆ ಪಶ್ಚಿಮ ಹೆರಾತ್ ನಗರದಲ್ಲಿ ಅಪಹರಿಸಲು ಯತ್ನಿಸಿದ ನಾಲ್ವರ ಹತ್ಯೆ ನಡೆಸಿ ಅವರ ಮೃತ ದೇಹಗಳನ್ನು ಬಹಿರಂಗ ಸ್ಥಳದಲ್ಲಿ ಪ್ರದರ್ಶಿಸಿತ್ತು.

SCROLL FOR NEXT