ವಿದೇಶ

ನಾಲ್ವರಿಗೆ ಕೋವಿಡ್ ಪಾಸಿಟಿವ್: ಭಾರತೀಯ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿದ ನೇಪಾಳ

Nagaraja AB

ಕಠ್ಮಂಡು: ಹಿಮಾಲಯನ್ ರಾಷ್ಟ್ರದಲ್ಲಿ ಕೊರೋನಾ ವೈರಸ್ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವಂತೆಯೇ, ನಾಲ್ವರು ಭಾರತೀಯ ಪ್ರಜೆಗಳಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟ ನಂತರ ಅವರನ್ನು ವಾಪಸ್ ಕಳುಹಿಸಿದ್ದು, ಭಾರತೀಯ ಪ್ರವಾಸಿಗರ ಪ್ರವೇಶವನ್ನು ನೇಪಾಳ ನಿರ್ಬಂಧಿಸಿದೆ.

ಜುಲಾಘಟ್ ಗಡಿ ಮೂಲಕ  ನಾಲ್ವರು ಭಾರತೀಯ ಪ್ರವಾಸಿಗರು ನೇಪಾಳ ಪ್ರವೇಶಿಸಿದ್ದರು. ನಾಲ್ವರು ಭಾರತೀಯ ಪ್ರಜೆಗಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ನಂತರ ಅವರನ್ನು ಭಾರತಕ್ಕೆ ಮರಳುವಂತೆ ತಿಳಿಸಲಾಯಿತು ಎಂದು ಬೈತಾಡಿ ಆರೋಗ್ಯ ಕೇಂದ್ರದ ಮಾಹಿತಿ ಅಧಿಕಾರಿ ಬಿಪಿನ್ ಲೆಕಾಕ್ ತಿಳಿಸಿದ್ದಾರೆ.

ಭಾರತೀಯರ ಕೋವಿಡ್-19 ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಭಾರತದಿಂದ ಆಗಮಿಸಿರುವ ಅನೇಕ ನೇಪಾಳಿ ಜನರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ. ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಭಾರತದ ಪ್ರವಾಸಿಗರು ನೇಪಾಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬೈತಾಡಿ ಜಿಲ್ಲೆ ನೆರೆಯ ಭಾರತದೊಂದಿಗಿನ ಗಡಿ ಜಿಲ್ಲೆಯಾಗಿದೆ. ನಾಲ್ಕು ವಾರಗಳ ಹಿಂದೆ ಒಂದೇ ಒಂದು ಪ್ರಕರಣವೂ ಇಲ್ಲದ ಬೈತಾಡಿ ಜಿಲ್ಲೆಯಲ್ಲಿ ಪ್ರಸ್ತುತ ಅಲ್ಲಿ 31 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. 
 

SCROLL FOR NEXT