ಸಲ್ಮಾನ್ ರಶ್ದಿ 
ವಿದೇಶ

ಸಲ್ಮಾನ್ ರಶ್ದಿಗೆ ಚಾಕು ಇರಿತ: ಪುಸ್ತಕಗಳು ಮತ್ತು ವಿವಾದಗಳು; ವಿವಾದಿತ ಲೇಖಕ ಹತ್ತು ವರ್ಷ ಭೂಗತ!

ವಿವಾದಿತ ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿಯಲಾಗಿದ್ದು ಗಂಭೀರ ಸ್ಥಿತಿಯಲ್ಲಿರುವ ಅವರನ್ನು ನ್ಯೂಯಾರ್ಕ್ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ವಿವಾದಗಳಿಂದಲೇ ವಿರೋಧ ಕಟ್ಟಿಕೊಂಡಿದ್ದ ರಶ್ದಿ ಕುರಿತ ಕೆಲ ಸಂಗತಿಗಳು ಇಲ್ಲಿವೆ.

ನ್ಯೂಯಾರ್ಕ್: ವಿವಾದಿತ ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿಯಲಾಗಿದ್ದು ಗಂಭೀರ ಸ್ಥಿತಿಯಲ್ಲಿರುವ ಅವರನ್ನು ನ್ಯೂಯಾರ್ಕ್ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ವಿವಾದಗಳಿಂದಲೇ ವಿರೋಧ ಕಟ್ಟಿಕೊಂಡಿದ್ದ ರಶ್ದಿ ಕುರಿತ ಕೆಲ ಸಂಗತಿಗಳು ಇಲ್ಲಿವೆ.

ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಸಲ್ಮಾನ್ ರಶ್ದಿ ಕಳೆದ 20 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಸಲ್ಮಾನ್ ರಶ್ದಿ ಅವರು ತಮ್ಮ 'ದಿ ಸೈಟಾನಿಕ್ ವರ್ಸಸ್' ಪುಸ್ತಕಕ್ಕೆ ಸಂಬಂಧಿಸಿದಂತೆ ಹಲವು ಬೆದರಿಕೆಗಳನ್ನು ಎದುರಿಸಿದ್ದಾರೆ. 1988 ರಿಂದ ಇರಾನ್‌ನಲ್ಲಿ ಈ ಪುಸ್ತಕವನ್ನು ನಿಷೇಧಿಸಲಾಗಿದೆ. ಏಕೆಂದರೆ ಅದು ಇಸ್ಲಾಂ ಧರ್ಮದ ವಿರುದ್ಧ ಧರ್ಮನಿಂದೆಯ ಆರೋಪ ಎದುರಿಸುತ್ತಿದೆ. ಇರಾನ್‌ನ ಉನ್ನತ ನಾಯಕರಿಂದ ಅವನ ತಲೆಯ ಮೇಲೆ ಬಹುಮಾನವನ್ನೂ ಕೂಡ ಘೋಷಿಸಲಾಗಿದೆ.

75 ವರ್ಷ ವಯಸ್ಸಿನ ಸಲ್ಮಾನ್‌ ರಶ್ದಿ 1981ರಲ್ಲಿ ಪ್ರಕಟಿಸಿದ, ಅವರ ಎರಡನೇ ಕಾದಂಬರಿ 'ಮಿಡ್‌ನೈಟ್ಸ್‌ ಚಿಲ್ಡ್ರನ್‌' (Midnights Children) ಜಗತ್ತಿನಾದ್ಯಂತ ಸಾಕಷ್ಟು ಜನಪ್ರಿಯ ಪಡೆಯಿತು. ಆ ಕಾದಂಬರಿಗೆ ಬ್ರಿಟನ್‌ನ ಪ್ರತಿಷ್ಠಿತ ಬೂಕರ್‌ ಪ್ರಶಸ್ತಿಯೂ ಸಂದಿತು. ಆ ಪುಸ್ತಕವು ಸ್ವಾತಂತ್ರ್ಯ ನಂತರದ ಭಾರತ ಕಥೆಯನ್ನು ಒಳಗೊಂಡಿದೆ.

ವಿವಾದಗಳಿಂದಲೇ ವಿರೋಧ ಕಟ್ಟಿಕೊಂಡಿದ್ದ ರಶ್ದಿ
1980ರ ದಶಕದಲ್ಲಿ ಅವರ ಬರಹಗಳ ಕಾರಣದಿಂದಾಗಿ ಇರಾನ್‌ನಿಂದ ಕೊಲೆ ಬೆದರಿಕೆಗಳು ಬಂದಿದ್ದವು ಹಾಗೂ ಹಲವು ವಿವಾದಗಳು ಅವರನ್ನು ಸುತ್ತುವರಿದಿವೆ. ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ರಶ್ದಿ ಕಳೆದ 20 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಸಲ್ಮಾನ್ ರಶ್ದಿ ಅವರು ತಮ್ಮ 1988 ರ ಪುಸ್ತಕ ದಿ ಸೈಟಾನಿಕ್ ವರ್ಸಸ್‌ಗಾಗಿ ದಶಕಗಳಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಈ ಕಾದಂಬರಿಯನ್ನು ಕೆಲವು ಧರ್ಮಗುರುಗಳು ಪ್ರವಾದಿ ಮೊಹಮ್ಮದ್‌ಗೆ ಅಗೌರವವೆಂದು ಪರಿಗಣಿಸಿದ್ದಾರೆ. ಬ್ರಿಟನ್‌ನಲ್ಲಿ ಅವರಿಗೆ ಪೊಲೀಸ್‌ ಭದ್ರತೆ ನೀಡಲಾಯಿತು. ರಶ್ದಿ ಅವರ ಪುಸ್ತಕ ಮುದ್ರಕರು ಹಾಗೂ ತರ್ಜುಮೆದಾರರ ಪ್ರಾಣಕ್ಕೂ ಅಪಾಯ ಎದುರಾಗುವ ಸ್ಥಿತಿ ಇತ್ತು.

ರಶ್ದಿ ಹತ್ಯೆಗೆ ಕರೆಕೊಟ್ಟಿದ್ದ ಇರಾನ್‌ ಕ್ರಾಂತಿಕಾರಿ
1988ರಲ್ಲಿ ಹೊರತಂದ ಪುಸ್ತಕ 'The Satanic Verses' ಪುಸ್ತಕವು ಊಹಿಗೂ ಮೀರಿದಷ್ಟು ಚರ್ಚೆಗೆ ಕಾರಣವಾಯಿತು. ಓದುಗರನ್ನು ಸೆಳೆಯುವ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿರೋಧಿಗಳೂ ಸೃಷ್ಟಿಯಾದರು. ಆ ಪುಸ್ತಕದಲ್ಲಿನ ಅಂಶಗಳು ಧಾರ್ಮಿಕ ವ್ಯಕ್ತಿಗಳ ಕಣ್ಣು ಕೆಂಪೇರಿಸಿತು. ಇರಾನ್‌ನ ಕ್ರಾಂತಿಕಾರಿ ಅಯಾತೊಲ್ಲಾ ರುಹೊಲ್ಲಾ ಖೊಮೀನಿ, ರಶ್ದಿ ಹತ್ಯೆಗೆ ಕರೆಕೊಟ್ಟಿದ್ದರು. ಆ ಕಾದಂಬರಿಯಲ್ಲಿ ಪ್ರವಾದಿ ಮೊಹಮ್ಮದ್‌ರಿಗೆ ಅಗೌರವ ತರುವಂತೆ ಚಿತ್ರಿಸಲಾಗಿದೆ ಎಂದು ಕೆಲವು ಮುಸ್ಲೀಮರು ಆಕ್ರೋಶ ವ್ಯಕ್ತಪಡಿಸಿದ್ದರು. ಭಾರತದ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ ರಶ್ದಿ ಅವರು ನಾಸ್ತಿಕ (ದೇವರಲ್ಲಿ ನಂಬಿಕೆ ಇರದವರು). ಅವರ ತಲೆ ಉರುಳಿಸಲು ಕರೆ ಕೊಟ್ಟಿದ್ದರಿಂದ, ಪ್ರಾಣ ಉಳಿಸಿಕೊಳ್ಳಲು ಭೂಗತರಾಗಬೇಕಾಯಿತು. ಈಗಲೂ ಅವರ ಮೇಲೆ ತೂಗುಗತ್ತಿ ನೇತಾಡುತ್ತಿದೆ.

ಇರಾನ್‌ನ ಉನ್ನತ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಹತ್ಯೆಗೆ ಕರೆ ನೀಡಿದ್ದರಿಂದ ಅವರ ತಲೆಯ ಮೇಲೆ ಬಹುಮಾನವನ್ನು ಘೋಷಣೆ ಮಾಡಲಾಗಿತ್ತು. ಅವರು ಸುಮಾರು ಒಂದು ದಶಕಕಾಲ ಭೂಗತರಾಗಿದ್ದರು. ಪದೇ ಪದೇ ಮನೆಗಳನ್ನು ಬದಲಾಯಿಸುತ್ತಿದ್ದರು ಮತ್ತು ಅವರು ಎಲ್ಲಿ ವಾಸಿಸುತ್ತಿದ್ದಾರೆಂದು ಅವರ ಮಕ್ಕಳಿಗೂ ಕೂಡ ಹೇಳಲು ಸಾಧ್ಯವಾಗುತ್ತಿರಲಿಲ್ಲ. 1998ರಲ್ಲಿ ಇರಾನ್ ಸರ್ಕಾರವು 'ಫತ್ವಾ' ಅಥವಾ ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿದ ನಂತರ ರಶ್ದಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ತೊರೆದಿದ್ದರು.

ರಶ್ದಿ ಭಾಗಿಯಾಗುವ ಬಹುತೇಕ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲೂ ಅವರ ವಿರುದ್ಧ ಘೋಷಣೆಗಳನ್ನು ಕೂಗಲಾಗಿದೆ ಹಾಗೂ ಸಮ್ಮೇಳನವನ್ನು ಬಹಿಷ್ಕರಿಸಲಾಗಿದೆ. ಬೆದರಿಕೆಯನ್ನೂ ಒಡ್ಡಲಾಗಿದೆ. 2007ರಲ್ಲಿ ಅವರ ವಿರುದ್ಧ ಇರಾನ್ ಮತ್ತು ಪಾಕಿಸ್ತಾನದಲ್ಲಿ ತೀವ್ರ ಪ್ರತಿರೋಧ ಎದುರಾಗಿತ್ತು. ಅವರ ಮಿಡ್‌ನೈಟ್ಸ್‌ ಚಿಲ್ಡ್ರನ್‌ ಕಾದಂಬರಿಯು 600ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿದ್ದು, ನಾಟಕ ಹಾಗೂ ಸಿನಿಮಾಗೆ ಅಳವಡಿಸಿಕೊಳ್ಳಲಾಗಿದೆ. ಅವರ ಪುಸ್ತಕಗಳನ್ನು 40ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. 

ಇಸ್ಲಾಂ ವಿರುದ್ಧ ವಿಮರ್ಶಿಸಿದರೆ ಹಲ್ಲೆ; ತಸ್ಲೀಮಾ ನಸ್ರೀನ್
'ನ್ಯೂಯಾರ್ಕ್‌ನಲ್ಲಿ ಸಲ್ಮಾನ್‌ ರಶ್ದಿ ಅವರ ಹಲ್ಲೆ ನಡೆದಿರುವುದು ತಿಳಿಯಿತು. ನಿಜಕ್ಕೂ ನನಗೆ ದಿಗ್ಭ್ರಮೆಯಾಯಿತು. ಈ ರೀತಿ ನಡೆಯಬಹುದೆಂದು, ಯಾವತ್ತಿಗೂ ಯೋಚಿಸಿರಲಿಲ್ಲ. 1989ರಿಂದಲೂ ಅವರಿಗೆ ರಕ್ಷಣೆ ನೀಡಲಾಗಿದೆ. ಅವರು ಪಶ್ಚಿಮ ರಾಷ್ಟ್ರಗಳಲ್ಲೇ ಉಳಿದಿದ್ದಾರೆ. ಇಸ್ಲಾಂ ವಿರುದ್ಧ ಯಾರೇ ವಿಮರ್ಶಿಸಿದರೂ ಅವರ ಮೇಲೆ ಹಲ್ಲೆಯಾಗಬಹುದು. ನನಗಿದು ಚಿಂತೆಗೀಡು ಮಾಡಿದೆ' ಎಂದು ಲೇಖಕಿ ತಸ್ಲಿಮಾ ನಸ್ರೀನ್‌ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT