ಸಲ್ಮಾನ್ ರಶ್ದಿ 
ವಿದೇಶ

ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿತ: ಪರಿಸ್ಥಿತಿ ಗಂಭೀರ, ವೆಂಟಿಲೇಟರ್ ನಲ್ಲಿ ಚಿಕಿತ್ಸೆ, ದಾಳಿಕೋರನ ಬಂಧನ

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಶುಕ್ರವಾರ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಗಂಭೀರವಾಗಿರುವ ಹಿನ್ನಲೆಯಲ್ಲಿ ವೆಂಟಿಲೇಟರ್ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನಲ್ಲಿ ಶುಕ್ರವಾರ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಗಂಭೀರವಾಗಿರುವ ಹಿನ್ನಲೆಯಲ್ಲಿ ವೆಂಟಿಲೇಟರ್ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಶುಕ್ರವಾರ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಲೇಖಕ ರಶ್ದಿ ಅವರ ಕುತ್ತಿಗೆ ಮತ್ತು ಹೊಟ್ಟೆಗೆ ದಾಳಿಕೋರನೋರ್ವ 15ರಿಂದ 20 ಬಾರಿ ಇರಿದಿದ್ದ. 75 ವರ್ಷ ವಯಸ್ಸಿನ ಲೇಖಕ ರಶ್ದಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಶ್ದಿ ಪ್ರಸ್ತುತ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ರಶ್ದಿ ಅವರ ಕುತ್ತಿಗೆ, ಹೊಟ್ಟೆ ಮತ್ತು ಕಣ್ಣುಗಳಿಗೆ ಚಾಕು ಇರಿತವಾಗಿದ್ದು, ಅವರು ಕಣ್ಣು ಕಳೆದುಕೊಳ್ಳಬಹುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಆಸ್ಪತ್ರೆ ಮೂಲಗಳ ಪ್ರಕಾರ ಸಲ್ಮಾನ್ ರಶ್ದಿ ಅವರ ತೋಳಿನಲ್ಲಿ ನರಗಳು ತುಂಡಾಗಿದ್ದು, ಅವರ ಯಕೃತ್ತಿಗೆ ಹಾನಿಯಾಗಿದೆ. ಕಣ್ಣುಗಳಿಗೆ ಗಂಭೀರ ಹಾನಿಯಾಗಿದ್ದು, ಕಣ್ಣುಗಳು ಶಾಶ್ವತವಾಗಿ ಕಾರ್ಯನಿರ್ವಹಿಸದೇ ಇರಬಹುದು ಎಂದು ಹೇಳಲಾಗಿದೆ. ಈ ಕುರಿತಂತೆ ಅಮೆರಿಕದ ಮತ್ತೋರ್ವ ಲೇಖಕ ಆಂಡ್ರ್ಯೂ ವೈಲಿ ಇ-ಮೇಲ್ ನಲ್ಲಿ ಬರೆದುಕೊಂಡಿದ್ದು, ಸಲ್ಮಾನ್ ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು, ಅವರ ತೋಳಿನ ನರಗಳು ಕತ್ತರಿಸಲ್ಪಟ್ಟಿವೆ. ಯಕೃತ್ತಿಗೆ ಚಾಕು ಇರಿತವಾಗಿದ್ದು, ಗಂಭೀರವಾಗಿ ಹಾನಿಯಾಗಿದೆ ಎಂದು ಬರೆದಿದ್ದಾರೆ.

ದಾಳಿಕೋರನ ಬಂಧನ, ಗುರುತು ಪತ್ತೆ
ಇನ್ನು ರಶ್ದಿ ಅವರ ಮೇಲೆ ಚಾಕು ದಾಳಿ ಮಾಡಿದ ದಾಳಿಕೋರನನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದು, ಪ್ರಸ್ತುತ ಆತನ ಗುರುತು ಪತ್ತೆ ಮಾಡಿದ್ದಾರೆ. ದಾಳಿಕೋರನನ್ನು 24 ವರ್ಷದ ಹದಿ ಮಾತರ್ ಎಂದು ಗುರುತಿಸಲಾಗಿದ್ದು, ಈ ನ್ಯೂಜೆರ್ಸಿಯ ನಿವಾಸಿ ಎನ್ನಲಾಗಿದೆ. ರಶ್ದಿ ಅವರ ಮೇಲೆ ದಾಳಿಗೆ ನಿಖರ ಕಾರಣ ತಿಳಿದಬಂದಿಲ್ಲವಾದರೂ ಸೈದ್ದಾಂತಿಕ ವಿರೋಧಗಳು ದಾಳಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು ದಾಳಿಯಲ್ಲಿ ಸಂದರ್ಶಕ ಹೆನ್ರಿ ರೀಸ್ ಅವರ ತಲೆಗೂ ಗಾಯವಾಗಿದೆ ಎನ್ನಲಾಗಿದೆ.

ಹೇಗಾಯ್ತು ಘಟನೆ?
ಸುಮಾರು 2,500 ಮಂದಿ ಪ್ರೇಕ್ಷಕರಿದ್ದ ಕಾರ್ಯಕ್ರಮದಲ್ಲಿ ರಶ್ದಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂದರ್ಶಕ ಹೆನ್ರಿ ರೀಸ್ ಅವರು ರಶ್ದಿ ಅವರ ಸಂದರ್ಶನ ಪಡೆಯುತ್ತಿದ್ದರು. ಈ ವೇಳೆ ಎಲ್ಲರೂ ನೋಡುತ್ತಲೇ ವೇದಿಕೆ ಹತ್ತಿದ್ದ ಆರೋಪಿ ಹದಿ ಮಾತರ್ ರಶ್ದಿ ಅವರ ಬಳಿ ಬಂದು ತನ್ನ ಬಳಿ ಇದ್ದ ಚಾಕು ತೆಗೆದು ಮನಸೋ ಇಚ್ಛೆ ಇರಿದಿದ್ದಾನೆ. ಈ ವೇಳೆ ರಶ್ದಿ ಅವರ ಕುತ್ತಿಗೆ, ಹೊಟ್ಟೆ ಮತ್ತು ದೇಹದ ಇತರೆ ಭಾಗಗಳಿಗೆ ತೀವ್ರ ಹಾನಿಯಾಗಿದೆ. ಕೂಡಲೇ ಎಚ್ಚೆತ್ತ ಆಯೋಜಕರು ದಾಳಿಕೋರನನ್ನು ಹಿಡಿದಿದ್ದು, ರಶ್ದಿ ಅವರನ್ನು ವಿಮಾನದ ಮೂಲಕ ಆಸ್ಪತ್ರೆ ಸೇರಿಸಿದ್ದಾರೆ. ಅಲ್ಲಿ ಅವರು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದರು ಎನ್ನಲಾಗಿದೆ. 

ದಾಳಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 'ನಾವು ಎಲ್ಲಾ ಹಿಂಸಾಚಾರವನ್ನು ಖಂಡಿಸುತ್ತೇವೆ ಮತ್ತು ಜನರು ಮಾತನಾಡುವ ಮತ್ತು ಸತ್ಯವನ್ನು ಬರೆಯುವ ಸ್ವಾತಂತ್ರ್ಯವನ್ನು ಅನುಭವಿಸಲು ನಾವು ಬಯಸುತ್ತೇವೆ' ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT