ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ 
ವಿದೇಶ

ಗಡಿಯಲ್ಲಿ ನಡೆದ ಘಟನೆಗಳಿಂದ ಚೀನಾ-ಭಾರತದ ಸಂಬಂಧ ಅತ್ಯಂತ ಕಠಿಣ ಹಂತದಲ್ಲಿದೆ: ವಿದೇಶಾಂಗ ಸಚಿವ ಜೈಶಂಕರ್ 

ಗಡಿಯಲ್ಲಿ ನಡೆದ ಘಟನೆಗಳಿಂದಾಗಿ ಭಾರತ ಮತ್ತು ಚೀನಾದ ಸಂಬಂಧ ಅತ್ಯಂತ ಕಠಿಣ ಹಂತದಲ್ಲಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. 

ಬ್ಯಾಂಕಾಕ್: ಗಡಿಯಲ್ಲಿ ನಡೆದ ಘಟನೆಗಳಿಂದಾಗಿ ಭಾರತ ಮತ್ತು ಚೀನಾದ ಸಂಬಂಧ ಅತ್ಯಂತ ಕಠಿಣ ಹಂತದಲ್ಲಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. 

ಚೀನಾ- ಭಾರತದ ಗಡಿ ಭಾಗದಲ್ಲಿ ಚೀನಾ ಮಾಡಿದ ಕೆಲಸಗಳಿಂದಾಗಿ ಈ ಪರಿಸ್ಥಿತಿ ಉಂಟಾಗಿದ್ದು, ಉಭಯ ದೇಶಗಳೂ ಕೈಜೋಡಿಸದೇ ಇದ್ದಲ್ಲಿ ಏಷ್ಯಾದ ಶತಮಾನವಾಗುವುದಿಲ್ಲ ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಂಕಾಕ್ ನ ಪ್ರತಿಷ್ಠಿತ ಚುಲಾಂಗ್‌ಕಾರ್ನ್ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ವೇಳೆ ಹಲವು ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾಗ ಈ ಅಭಿಪ್ರಾಯವನ್ನು ಜೈಶಂಕರ್ ಹಂಚಿಕೊಂಡಿದ್ದಾರೆ.

"ಭಾರತ ಹಾಗೂ ಚೀನಾ ಒಟ್ಟಿಗೆ ಬಂದಾಗ ಏಷ್ಯಾದ ಶತಮಾನ ಘಟಿಸುತ್ತದೆ. ಇಲ್ಲದೇ ಇದ್ದಲ್ಲಿ ಆ ಕನಸು ನನಸಾಗುವುದು ಕಷ್ಟ" ಎಂದು ಜೈ ಶಂಕರ್ ಹೇಳಿದ್ದಾರೆ.

"ಚೀನಾ ಗಡೊಯಲ್ಲಿ ಮಾಡಿದ ಕೆಲಸಗಳಿಂದ ಈಗ ಭಾರತ-ಚೀನಾ ಸಂಬಂಧ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದೆ, ಒಂದು ವೇಳೆ ಚೀನಾ-ಭಾರತ ಒಟ್ಟಿಗೆ ಬರುವುದಕ್ಕೆ ಕೇವಲ ಶ್ರೀಲಂಕಾ ಮಾತ್ರ ಅಲ್ಲ ಬಹಳಷ್ಟು ಕಾರಣಗಳಿವೆ" ಎಂದು ಜೈಶಂಕರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT