ವಿದೇಶ

ಪುಟಿನ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ: ಮೆಟ್ಟಿಲಿನಿಂದ ಜಾರಿ ಬಿದ್ದು ಅನಿಯಂತ್ರಿತ ಮಲವಿಸರ್ಜನೆ; ಮೂಳೆಗೆ ಪೆಟ್ಟು!

Shilpa D

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಮಾಸ್ಕೋದ ತಮ್ಮ ಅಧಿಕೃತ ನಿವಾಸದಲ್ಲಿ ಮೆಟ್ಟಿಲು ಇಳಿಯುವಾಗ ಜಾರಿ ಬಿದ್ದಿದ್ದಾರೆ. ಇದರ ಪರಿಣಾಮ ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡಿದ್ದಾರೆ ಎಂದು ಪುಟಿನ್‌ ಅವರ ಭದ್ರತಾ ತಂಡದ ಹೇಳಿಕೆ ಉಲ್ಲೇಖೀಸಿ ಟೆಲಿಗ್ರಾಂ ಸುದ್ದಿವಾಹಿನಿ ವರದಿ ಮಾಡಿದೆ.

ಇನ್ನೇನು ಐದು ಮೆಟ್ಟಿಲುಗಳು ಇರುವಾಗ ಪುಟಿನ್‌(70) ಜಾರಿ ಬಿದ್ದರು. ಕ್ಯಾನ್ಸರ್‌ನಿಂದಾಗಿ ಹೊಟ್ಟೆ ಮತ್ತು ಕರುಳಿನ ಸಮಸ್ಯೆ ಇರುವುದರಿಂದ ಅವರು ಬಿದ್ದ ತಕ್ಷಣ ಅನಿಯಂತ್ರಿತ ಮಲವಿಸರ್ಜನೆ ಆಗಿದೆ’ ಎಂದು ವರದಿಗಳು ತಿಳಿಸಿವೆ.

70 ವರ್ಷದ ಪುಟಿನ್ ಅವರು 5 ಮೆಟ್ಟಿಲು ಕೆಳಗೆ ಬಿದ್ದಿದ್ದು, ಇದರಿಂದ ಅವರ ಮೂಳೆಗೆ ಸಹ ಪೆಟ್ಟಾಗಿದೆ ಎಂದು ವರದಿ ತಿಳಿಸಿದೆ. ಈಗಾಗಲೇ ಕ್ಯಾನ್ಸರ್‌ನಿಂದ ಬಳಲುತ್ತಿರುವ ರಷ್ಯಾ ಅದ್ಯಕ್ಷರು ಮೆಟ್ಟಿಲುಗಳಿಂದ ಕೆಳಕ್ಕೆ ಬಿದ್ದ ಕಾರಣದಿಂದ ಮಲವಿಸರ್ಜನೆ ಮಾಡಿಕೊಂಡರು ಎಂದು ಟೆಲಿಗ್ರಾಮ್‌ ಚಾನೆಲ್‌ ಹೇಳಿದೆ. ಅಲ್ಲದೆ, ಕ್ಯಾನ್ಸರ್‌ ಈಗ ಅವರ ಹೊಟ್ಟೆ ಹಾಗೂ ಕರುಳಿನ ಮೇಲೂ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ.

ಕಳೆದ ತಿಂಗಳು ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್ ಅವರೊಂದಿಗಿನ ಸಭೆಯ ಸಂದರ್ಭದಲ್ಲಿ ವ್ಲಾಡಿಮಿರ್‌ ಪುಟಿನ್‌ ಅವರ ಕೈಗಳು ಅಲುಗಾಡುತ್ತಿತ್ತು ಹಾಗೂ ನೇರಳೆ ಬಣ್ಣಕ್ಕೆ ತಿರುಗಿದ್ದವು ಎಂದು ಯುಕೆ ಮೂಲದ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ಈ ರೀತಿಯ ಉದಾಹರಣೆಗಳು ಹಾಗೂ ಘಟನೆಗಳು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಕ್ಷೀಣಿಸುತ್ತಿರುವ ಆರೋಗ್ಯದ ಸುತ್ತ ಬೆಳೆಯುತ್ತಿರುವ ಊಹಾಪೋಹಗಳಿಗೆ ಹೊಸ ಸೇರ್ಪಡೆಯಾದಂತಾಗಿದೆ. 

SCROLL FOR NEXT