ಕಿಮ್ ಜಾಂಗ್ ಉನ್ 
ವಿದೇಶ

ಉತ್ತರ ಕೊರಿಯಾ: ನಾಟಕ ವೀಕ್ಷಿಸಿ ಶೇರ್ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ ಮರಣ ದಂಡನೆ!

ದಕ್ಷಿಣ ಕೊರಿಯಾದ ನಾಟಕಗಳನ್ನು ವೀಕ್ಷಿಸಿದ ಮತ್ತು ಸ್ನೇಹಿತರೊಂದಿಗೆ ಅದನ್ನು ಹಂಚಿಕೊಂಡ ಕಾರಣಕ್ಕಾಗಿ ಉತ್ತರ ಕೊರಿಯಾದಲ್ಲಿ ಇಬ್ಬರು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಲಾಗಿದೆ

ಪೊಂಗ್ಯಾಂಗ್:  ದಕ್ಷಿಣ ಕೊರಿಯಾದ ನಾಟಕಗಳನ್ನು ವೀಕ್ಷಿಸಿದ ಮತ್ತು ಸ್ನೇಹಿತರೊಂದಿಗೆ ಅದನ್ನು ಹಂಚಿಕೊಂಡ ಕಾರಣಕ್ಕಾಗಿ ಉತ್ತರ ಕೊರಿಯಾದಲ್ಲಿ ಇಬ್ಬರು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಲಾಗಿದೆ

ದಕ್ಷಿಣ ಕೊರಿಯಾ ಸಿನಿಮಾ ವೀಕ್ಷಿಸುವುದನ್ನು ಉತ್ತರ ಕೊರಿಯಾ ನಿಷೇಧಿಸಿದೆ. 16-17 ವರ್ಷದ ಇಬ್ಬರು ವಿದ್ಯಾರ್ಥಿಗಳು ಶಾಲೆಯ ಕೋಣೆಯೊಂದರಲ್ಲಿ  ಕೆ- ಡ್ರಾಮಾ ವೀಕ್ಷಿಸಿದ್ದರಿಂದ ಅವರನ್ನು ಬಂಧಿಸಿ ವಾಯುನೆಲೆಯ ಮೈದಾನದಲ್ಲಿ ಸ್ಥಳೀಯರ ಎದುರು ಗಲ್ಲಿಗೇರಿಸಲಾಗಿದೆ ಎನ್ನುವ ಕುರಿತು ಮಾಹಿತಿ ಲಭ್ಯವಾಗಿದೆ.

ಉತ್ತರ ಕೊರಿಯಾದ ರಿಯಾಂಗ್‍ಗಾಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಈ ಭಾಗವು ಚೀನಾದ ಗಡಿ ಭಾಗದ ಸಮೀಪವಿದೆ. ಈ ಹಿನ್ನೆಲೆಯಲ್ಲಿ ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸುಲಭವಾಗಿ ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಸಿನಿಮಾಗಳು ಸುಲಭವಾಗಿ ಸಿಗುತ್ತವೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ವಿದ್ಯಾರ್ಥಿಗಳಿಗೂ ಕೆ- ಡ್ರಾಮಾ ದೊರೆತಿದಿದ್ದು, ವೀಕ್ಷಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ಬಾಲಕರನ್ನು ಗಲ್ಲಿಗೇರಿಸಲಾಗಿತ್ತು, ಈ ಸುದ್ದಿ ಕಳೆದ ವಾರ ಬೆಳಕಿಗೆ ಬಂದಿದೆ. ಬಾಲಕರು ದುಷ್ಕೃತ್ಯವೆಸಗಿದ್ದಾರೆ ಹೀಗಾಗಿ ಅವರನ್ನು ಗಲ್ಲಿಗೇರಿಸಲಾಗಿದೆ ಎಂದು ಉತ್ತರ ಕೊರಿಯಾ ನಿಲುವನ್ನು ಸಮರ್ಥಿಸಿಕೊಂಡಿದೆ.

ತಾವು ವೀಕ್ಷಿಸಿದ ದಕ್ಷಿಣ ಕೊರಿಯಾದ ಕೆ-ಡ್ರಾಮಾವನ್ನು ಈ ಇಬ್ಬರು ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೂ ನೀಡಿದ್ದಾರೆ. ಆದರೆ ಉತ್ತರ ಕೊರಿಯಾದಲ್ಲಿ ದಕ್ಷಿಣ ಕೊರಿಯಾದ ಸಿನಿಮಾ, ಡ್ರಾಮಾವನ್ನು ವೀಕ್ಷಿಸುವುದು ಕಾನೂನು ಬಾಹಿರವಾಗಿದೆ. ಈ ಹಿನ್ನೆಲೆಯಲ್ಲಿ ಕಿಮ್ ಜಾಂಗ್ ಉನ್ ಸರ್ಕಾರವು ಆ ಇಬ್ಬರು ವಿದ್ಯಾರ್ಥಿಗಳನ್ನು ಗಲ್ಲಿಗೇರಿಸಿದ್ದಾರೆ  ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT