ವ್ಲಾಡಿಮಿರ್ ಪುಟಿನ್ 
ವಿದೇಶ

ರಷ್ಯಾ- ಉಕ್ರೇನ್ ಸಂಘರ್ಷ: ಪರಮಾಣು ಯುದ್ಧದ ಬೆದರಿಕೆ ಹೆಚ್ಚುತ್ತಿದೆ ಎಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಪರಮಾಣು ಯುದ್ಧದ ಬೆದರಿಕೆ ಹೆಚ್ಚುತ್ತಿದೆ. ಆದರೆ, ಮಾಸ್ಕೋ ಅಂತಹ 'ಹುಚ್ಚುತನಕ್ಕೆ ಮುಂದಾಗಿಲ್ಲ' ಮತ್ತು ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದರು.

ಮಾಸ್ಕೊ: ಪರಮಾಣು ಯುದ್ಧದ ಬೆದರಿಕೆ ಹೆಚ್ಚುತ್ತಿದೆ. ಆದರೆ, ಮಾಸ್ಕೋ ಅಂತಹ 'ಹುಚ್ಚುತನಕ್ಕೆ ಮುಂದಾಗಿಲ್ಲ' ಮತ್ತು ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದರು.

ರಷ್ಯಾದ ಮಾನವ ಹಕ್ಕುಗಳ ಮಂಡಳಿಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಉಕ್ರೇನ್‌ನಲ್ಲಿನ ಯುದ್ಧವು 'ಸುದೀರ್ಘ ಪ್ರಕ್ರಿಯೆ' ಆಗಿರಬಹುದು ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

'ಅಂತಹ ಬೆದರಿಕೆ ಬೆಳೆಯುತ್ತಿದೆ, ಅದನ್ನು ಮರೆಮಾಡುವುದು ತಪ್ಪಾಗುತ್ತದೆ' ಎಂದು ಮಾಸ್ಕೋದಿಂದ ವಿಡಿಯೋ ಲಿಂಕ್ ಮೂಲಕ ಪರಮಾಣು ಯುದ್ಧದ ಭವಿಷ್ಯದ ಬಗ್ಗೆ ಮಾತನಾಡುವಾಗ ಪುಟಿನ್ ಎಚ್ಚರಿಸಿದ್ದಾರೆ. ಆದರೆ, ರಷ್ಯಾವು ಯಾವುದೇ ಸಂದರ್ಭದಲ್ಲಿಯೂ ಮೊದಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲ ಮತ್ತು ಪರಮಾಣು ಶಸ್ತ್ರಾಗಾರದಿಂದ ಯಾರಿಗೂ ಬೆದರಿಕೆ ಹಾಕುವುದಿಲ್ಲ ಎಂದರು.

'ನಾವೇನು ಹುಚ್ಚರಲ್ಲ, ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ನಮಗೆ ಅರಿವಿದೆ. ಈ ಅಸ್ತ್ರವನ್ನು ಕತ್ತಿಯಂತೆ ಝಳಪಿಸುತ್ತಾ ನಾವು ಪ್ರಪಂಚದಾದ್ಯಂತ ಓಡಲು ಹೊರಟಿಲ್ಲ. ರಷ್ಯಾವು ವಿಶ್ವದ ಅತ್ಯಂತ ಆಧುನಿಕ ಮತ್ತು ಸುಧಾರಿತ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ ಮತ್ತು ಅದರ ಪರಮಾಣು ತಂತ್ರವು ಯುಎಸ್‌ಗೆ ವ್ಯತಿರಿಕ್ತವಾಗಿದೆ. ಅಮೆರಿಕದವರು ಇತರ ಪ್ರದೇಶಗಳಲ್ಲಿ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಇರಿಸುವ ಮೂಲಕ ರಷ್ಯಾಕ್ಕಿಂತ ಮುಂದೆ ಹೋಗಿದ್ದಾರೆ ಎಂದು ಅವರು ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಇತರ ದೇಶಗಳ ಭೂಪ್ರದೇಶದಲ್ಲಿ ನಾವು ಯುದ್ಧತಂತ್ರ ಸೇರಿದಂತೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲ. ಆದರೆ, ಅಮೆರಿಕನ್ನರು ಟರ್ಕಿಯಲ್ಲಿ ಮತ್ತು ಇತರ ಹಲವಾರು ಯುರೋಪಿಯನ್ ದೇಶಗಳಲ್ಲಿ ಹೊಂದಿದ್ದಾರೆ ಎಂದರು.

ರಷ್ಯಾದ ಪರಮಾಣು ಸಿದ್ಧಾಂತವು ಪರಮಾಣು ಶಸ್ತ್ರಾಸ್ತ್ರಗಳ ರಕ್ಷಣಾತ್ಮಕ ಬಳಕೆಗೆ ಮಾತ್ರ ಅವಕಾಶ ನೀಡುತ್ತದೆ ಎಂದು ಪುಟಿನ್ ಈ ಹಿಂದೆ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT