ವಿದೇಶ

ಚೀನಾದಲ್ಲಿ ಉಲ್ಭಣಿಸಿದ ಕೋವಿಡ್-19: ಪರಿಸ್ಥಿತಿಯ ಬಗ್ಗೆ‌ ವಿಶ್ವ ಆರೋಗ್ಯ ಸಂಸ್ಥೆ ಕಳವಳ

Manjula VN

ಲಂಡನ್: ಚೀನಾದಲ್ಲಿ ಮಹಾಮಾರಿ ಕೊರೋನಾ ಉಲ್ಭಣಿಸಿದ್ದು, ಅಲ್ಲಿನ ಪರಿಸ್ಥಿತಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸು ಅವರು, ಚೀನಾದಲ್ಲಿನ ಕೋವಿಡ್ ಪರಿಸ್ಥಿತಿಯ ಸಮಗ್ರ ಅಪಾಯದ‌ ಬಗ್ಗೆ ಮೌಲ್ಯಮಾಪನವನ್ನು ಮಾಡಲು ವಿಶ್ವ ಆರೋಗ್ಯ ಸಂಸ್ಥೆಗೆ ಅಲ್ಲಿನ ಸಾಂಕ್ರಾಮಿಕದ ತೀವ್ರತೆ, ಆಸ್ಪತ್ರೆಯ ದಾಖಲಾತಿಗಳ ಮಾಹಿತಿಯ ಅಗತ್ಯವಿದೆ. ಅಲ್ಲದೇ ತೀವ್ರತರವಾದ ಕೋವಿಡ್‌ ಸಾಂಕ್ರಾಮಿಕದ ವರದಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೈಕೆ ಘಟಕಗಳ ಬೆಂಬಲದ ಅಗತ್ಯತೆಯ ಮಾಹಿತಿಯ ಅಗತ್ಯವೂ ಎಂದು ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ಮೂಲವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಮರ್ಪಕ ಡೇಟಾವನ್ನು ಹಂಚಿಕೊಳ್ಳುವಂತೆ ಮತ್ತೊಮ್ಮೆ ಚೀನಾಗೆ ಕರೆ ನೀಡಿದ್ದಾರೆ.

ದೇಶಾದ್ಯಂತ ಹೆಚ್ಚಿನ ಅಪಾಯದಲ್ಲಿರುವ ಜನರಿಗೆ ಲಸಿಕೆ ಹಾಕುವಲ್ಲಿ ಚೀನಾ ತನ್ನ ಪ್ರಯತ್ನಗಳನ್ನು ಕೇಂದ್ರೀಕರಿಸುವಂತೆ ಅವರು ಒತ್ತಾಯಿಸಿದ್ದಾರೆ. ಅಲ್ಲದೇ ಕ್ಲಿನಿಕಲ್ ಆರೈಕೆ ಮತ್ತು ಇತರ ಆರೋಗ್ಯ ವ್ಯವಸ್ಥೆಯನ್ನು ರಕ್ಷಿಸಲು ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲ ಇದೆ ಎಂದು ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ಹಿಂದಿಗಿಂತ ನಾವು ಈಗ ಉತ್ತಮ ಸ್ಥಿತಿಯಲ್ಲಿದ್ದೇವೆ. ಆದರೆ, ಸಾಂಕ್ರಾಮಿಕ ರೋಗವು ಮುಗಿದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಟೆಡ್ರೊಸ್ ಎಚ್ಚರಿಸಿದ್ದಾರೆ.

SCROLL FOR NEXT