ವಿದೇಶ

ಚೀನಾದಲ್ಲಿ ಕೋವಿಡ್-19 ಮರಣ ಮೃದಂಗ: ಪ್ರತಿದಿನ 5,000 ಜನರು ಸಾವು, 1 ಮಿಲಿಯನ್ ಸೋಂಕಿತರು?

Nagaraja AB

ಚಾಂಗ್‌ಕಿಂಗ್ : ಚೀನಾದಲ್ಲಿ ಕೋವಿಡ್-19 ಮರಣ ಮೃದಂಗ ಬಾರಿಸುತ್ತಿದ್ದು, ಪ್ರತಿದಿನ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ನಿಂದ ಪ್ರತಿದಿನ 5,000ಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ. ಸುಮಾರು 1 ಮಿಲಿಯನ್ ಜನರು ವೈರಸ್‌ನಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಲಂಡನ್ ಮೂಲದ ಏರ್‌ಫಿನಿಟಿ ಎಂಬ ಆರೋಗ್ಯ ದತ್ತಾಂಶ ಸಂಸ್ಥೆಯು ಅಂದಾಜಿಸಿದೆ.

ಚೀನಾದಲ್ಲಿ 1.3 ರಿಂದ 2.1 ಮಿಲಿಯನ್ ಜನರು ಕೋವಿಡ್ ನಿಂದ ಸಾಯುವ ಸಾಧ್ಯತೆಯಿರುವುದಾಗಿ ಏರ್ ಫಿನಿಟಿ ವಿಶ್ಲೇಷಿಸಿರುವುದಾಗಿ ರಾಯಿಟರ್ಸ್ ಸಂಸ್ಥೆ ತಿಳಿಸಿದೆ. 

ಗುರುವಾರ ಪ್ರಮುಖ ನಗರಗಳಲ್ಲಿನ ಆಸ್ಪತ್ರೆಗಳ ವಾರ್ಡ್ ಗಳಲ್ಲಿ ವಯಸ್ಸಾದ ರೋಗಿಗಳು ಸಾಲುಗಟ್ಟಿ ನಿಂತಿದ್ದರು.  ಕಡ್ಡಾಯ ಸಾಮೂಹಿಕ ಪರೀಕ್ಷೆ ಅಂತ್ಯದ ನಂತರ ಸೋಂಕು ಪತ್ತೆ ಅಸಾಧ್ಯ ಎಂದು ಆಸ್ಪತ್ರೆಯವರು ಹೇಳಿದ್ದು, ಚೀನಾದಾದ್ಯಂತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಕೋವಿಡ್ -19 ನಿಂದ ಬಳಲುತ್ತಿರುವ ವೃದ್ಧರೊಬ್ಬರು ಮಧ್ಯ ಚೀನಾದ ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಸ್ಟ್ರೆಚರ್‌ನಲ್ಲಿ ನರಳುತ್ತಿದ್ದರು. ಈ ವೃದ್ಧ ಕೋವಿಡ್ ರೋಗಿಯೊಂದು ಖಚಿತಪಡಿಸಿದ ಆಸ್ಪತ್ರೆಯ ಅರೆವೈದ್ಯ, ಪ್ರತಿದಿನ 10ಕ್ಕಿಂತ ಹೆಚ್ಚು ಜನರನ್ನು ನೋಡುತ್ತಿದ್ದೇನೆ. ಶೇ. 80ಕ್ಕಿಂತ 90 ರಷ್ಟು ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಅವರಲ್ಲಿ ಬಹುತೇಕರು ವೃದ್ಧರಾಗಿದ್ದಾರೆ ಎಂದು ತಿಳಿಸಿದರು.

ಬಹುತೇಕ ಆಸ್ಪತ್ರೆ ಸಿಬ್ಬಂದಿ ಸಕಾರಾತ್ಮಕವಾಗಿ ಚಿಕಿತ್ಸೆ ನೀಡುತ್ತಿದ್ದು, ಕೆಲಸ ಮಾಡದೆ ಬೇರೆ ಆಯ್ಕೆಯಿಲ್ಲ ಎನ್ನುತ್ತಾರೆ. ಚೀನಾದ್ಯಂತ ಅಧಿಕ ಮಂದಿ ವೃದ್ಧರು ಸಂಪೂರ್ಣವಾಗಿ ಲಸಿಕೆ ಪಡೆದಿಲ್ಲ. ಹಾಗಾಗೀ ಈ ಗುಂಪಿನ ಹೆಚ್ಚಿನ ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದರು. 

SCROLL FOR NEXT