ವಿದೇಶ

ಚೀನಾದಲ್ಲಿ 20 ದಿನಗಳಲ್ಲಿ 250 ಮಿಲಿಯನ್ ಕೋವಿಡ್ ಪ್ರಕರಣಗಳು ವರದಿ

Srinivas Rao BV

ಬೀಜಿಂಗ್: ಕೋವಿಡ್ ಸೋಂಕಿನಿಂದ ಮತ್ತೆ ಚೀನಾ ತತ್ತರಿಸಿದ್ದು ಕೇವಲ 20 ದಿನಗಳಲ್ಲಿ 250 ಮಿಲಿಯನ್ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 

ಚೀನಾದಲ್ಲಿ ಶೂನ್ಯ ಕೋವಿಡ್ ನೀತಿಯನ್ನು ಸಡಿಲಗೊಳಿಸಿದ ಬೆನ್ನಲ್ಲೇ 20 ದಿನಗಳಲ್ಲಿ ಕೋವಿಡ್-19 ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಸಭೆಗೆ ಸಂಬಂಧಿಸಿದ ಡಾಕ್ಯುಮೆಂಟ್ ಸೋರಿಕೆಯಾಗಿದ್ದು, 248 ಮಿಲಿಯನ್ ಮಂದಿಗೆ ಅಥವಾ ಚೀನಾದ ಒಟ್ಟು ಜನಸಂಖ್ಯೆಯ ಶೇ.17.65 ರಷ್ಟು ಮಂದಿಗೆ ಡಿ.1 ರಿಂದ 20 ವರೆಗೆ ಕೋವಿಡ್-19 ಸೋಂಕು ತಗುಲಿದೆ.
 
ಚೀನಾ ಸರ್ಕಾರ ಬಿಡುಗಡೆ ಮಾಡಿರುವ ಕೋವಿಡ್-19 ಪ್ರಕರಣಗಳ ಡೇಟಾಗಿಂತಲೂ ವಾಸ್ತವಾಂಶ ಬೇರೆಯದ್ದೇ ಇದ್ದು, ಕನಿಷ್ಟ 37 ಮಿಲಿಯನ್ ಮಂದಿಗೆ ಸೋಂಕು ತಗುಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ರೇಡಿಯೋ ಫ್ರೀ ಏಷ್ಯಾ ವರದಿ ಪ್ರಕಟಿಸಿದೆ.

ಚೀನಾ ಮೇನ್ ಲ್ಯಾಂಡ್ ನಲ್ಲಿ 3,761 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಹೊಸ ಸಾವು ವರದಿಯಾಗಿಲ್ಲ. 

ಇನ್ನು ಚೀನಾದ ಪರಿಸ್ಥಿತಿಯ ಬಗ್ಗೆ ಬ್ರಿಟೀಷ್ ಮೂಲದ ಆರೋಗ್ಯ ಡೇಟಾ ಸಂಸ್ಥೆಯ ಪ್ರಕಾರ, ಚೀನಾದಲ್ಲಿ ದಿನವೊಂದಕ್ಕೆ ಒಂದು ಮಿಲಿಯನ್ ಸೋಂಕು ವರದಿಯಾಗಿ 5,000 ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ. 

SCROLL FOR NEXT