ವಿದೇಶ

ಚೀನಾದ ಕಿಂಗ್ಡಾವೊ ನಗರದಲ್ಲಿ ದಿನಕ್ಕೆ ಅರ್ಧ ಮಿಲಿಯನ್ ಮಂದಿಗೆ ಕೋವಿಡ್ ಸೋಂಕು

Sumana Upadhyaya

ಬೀಜಿಂಗ್: ಚೀನಾದ ಒಂದೇ ನಗರದಲ್ಲಿ ಪ್ರತಿದಿನ ಅರ್ಧ ಮಿಲಿಯನ್ ಜನರು ಕೋವಿಡ್ -19 ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೆಚ್ಚುತ್ತಿರುವ ಸೋಂಕಿನ ಪರಿಸ್ಥಿತಿ ನಿಭಾಯಿಸಲು ದೇಶಾದ್ಯಂತ ನಗರಗಳ ಆಸ್ಪತ್ರೆಗಳು ತೀವ್ರ ಹೆಣಗಾಡುತ್ತಿವೆ.ನಿನ್ನೆ ಶುಕ್ರವಾರ ಕಿಂಗ್ಡಾವೊದಲ್ಲಿ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ನಿರ್ವಹಿಸುವ ಸುದ್ದಿವಾಹಿನಿಯು ಮುನ್ಸಿಪಲ್ ಆರೋಗ್ಯ ಮುಖ್ಯಸ್ಥರು ಪೂರ್ವ ನಗರದಲ್ಲಿ ದಿನಕ್ಕೆ "4,90,000ದಿಂದ 5,30,000 ನಡುವೆ" ಹೊಸ ಕೋವಿಡ್ ಪ್ರಕರಣ ಕಾಣುತ್ತಿವೆ ಎಂದು ಹೇಳುತ್ತಿದೆ. 

ಸುಮಾರು 10 ಮಿಲಿಯನ್ ಜನರಿರುವ ಕರಾವಳಿ ನಗರದಲ್ಲಿ ಕೋವಿಡ್ ತೀವ್ರ ಹೆಚ್ಚಾಗುತ್ತಿದೆ ಎಂದು ಬೋ ಟಾವೊ ವರದಿ ಮಾಡಿದ್ದಾರೆ, ವಾರಾಂತ್ಯದಲ್ಲಿ ಸೋಂಕಿನ ಪ್ರಮಾಣವು ಇನ್ನೂ ಶೇಕಡಾ 10 ರಷ್ಟು ವೇಗವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಹಿಂದಿನ ದಿನ ದೇಶಾದ್ಯಂತ 4,103 ಹೊಸ ದೇಶೀಯ ಸೋಂಕುಗಳು ದಾಖಲಾಗಿವೆ, ಯಾವುದೇ ಹೊಸ ಸಾವುಗಳಿಲ್ಲ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ.

ಕಿಂಗ್ಡಾವೊ ಇರುವ ಪ್ರಾಂತ್ಯದ ಶಾಂಡೊಂಗ್‌ನಲ್ಲಿ, ಅಧಿಕೃತವಾಗಿ ಕೇವಲ 31 ಹೊಸ ದೇಶೀಯ ಪ್ರಕರಣಗಳು ಕಂಡಿವೆ. ಪೂರ್ವ ಜಿಯಾಂಗ್ಕ್ಸಿ ಪ್ರಾಂತ್ಯದ ಸರ್ಕಾರವು ಅದರ ಜನಸಂಖ್ಯೆಯ ಶೇಕಡಾ 80ರಷ್ಟು ಸುಮಾರು 36 ಮಿಲಿಯನ್ ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳುತ್ತಿದೆ. 

ಕಳೆದ ಎರಡು ವಾರಗಳಲ್ಲಿ 18,000 ಕ್ಕೂ ಹೆಚ್ಚು ಕೋವಿಡ್ ರೋಗಿಗಳನ್ನು ಪ್ರಾಂತ್ಯದ ಪ್ರಮುಖ ವೈದ್ಯಕೀಯ ಸಂಸ್ಥೆಗಳಿಗೆ ದಾಖಲಿಸಲಾಗಿದೆ, ಇದರಲ್ಲಿ ಸುಮಾರು 500 ತೀವ್ರತರವಾದ ಪ್ರಕರಣಗಳು ಸೇರಿವೆ ಆದರೆ ಯಾವುದೇ ಸಾವು ಸಂಭವಿಸಿಲ್ಲ. 

SCROLL FOR NEXT