ವಿದೇಶ

ಕೋವಿಡ್ ಸೋಂಕು ಏರಿಕೆಯ ನಡುವೆ ವಿದೇಶಿ ಪ್ರಯಾಣಿಕರಿಗೆ ಕ್ವಾರಂಟೈನ್ ನಿಯಮ ರದ್ದುಗೊಳಿಸಿದ ಚೀನಾ!

Srinivas Rao BV

ಬೀಜಿಂಗ್: ಚೀನಾ ಘೋಷಿಸಿದ್ದ ಶೂನ್ಯ ಕೋವಿಡ್ ನೀತಿಯ ವಿರುದ್ಧ ಜನಾಕ್ರೋಶ ಭುಗಿಲೆದ್ದ ಕಾರಣ ತನ್ನ ನೀತಿಯಲ್ಲಿ ಬದಲಾವಣೆಗೆ ಮುಂದಾಗಿರುವ ಚೀನಾ, ಜ.08 ರಿಂದ ಒಳಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಐಸೊಲೇಷನ್ ನಿಯಮಗಳನ್ನು ರದ್ದುಗೊಳಿಸುತ್ತಿರುವುದಾಗಿ ತಿಳಿಸಿದೆ. 

ಚೀನಾದ ರಾಷ್ಟ್ರಿಯ ಆರೋಗ್ಯ ಆಯೋಗ (ಎನ್ ಹೆಚ್ ಸಿ) ಕೋವಿಡ್-19 ನಿರ್ವಹಣೆಯನ್ನು ಮುಂದಿನ ತಿಂಗಳು ಕ್ಲಾಸ್ A ಯಿಂದ ಕ್ಲಾಸ್ B ಗೆ ಇಳಿಕೆ ಮಾಡಲಾಗುತ್ತದೆ. ಇದೇ ವಿಭಾಗದಲ್ಲಿ ಕಡಿಮೆ ತೀವ್ರತೆ ಇರುವ ರೋಗಗಳನ್ನು ಸೇರಿಸಲಾಗುತ್ತದೆ ಎಂದು ಹೇಳಿದೆ. 

ಜ.08, 2023 ರಿಂದ ಚೀನಾ ವಿದೇಶದಿಂದ ತನ್ನ ನೆಲಕ್ಕೆ ಆಗಮಿಸುವವರಿಗೆ ಇನ್ ಬೌಂಡ್ ಕ್ವಾರಂಟೈನ್ ನ್ನು ರದ್ದುಗೊಳಿಸಲಿದೆ. ಹಳೇಯ ನಿಯಮಗಳ ಪ್ರಕಾರ, ವಿದೇಶದಿಂದ ಚೀನಾಗೆ ಆಗಮಿಸುವವರು ಕಡ್ಡಾಯವಾಗಿ 2 ವಾರಗಳ ಕ್ವಾರಂಟೈನ್ ಗೆ ಒಳಪಡಬೇಕಿತ್ತು. ಕ್ರಮೇಣ ಇದನ್ನು ಮೂರು ದಿನಗಳ ನಿಗಾದೊಂದಿಗೆ ಒಟ್ಟು 5 ದಿನಗಳಿಗೆ ಏರಿಕೆ ಮಾಡಲಾಗಿತ್ತು. 

ಚೀನಾದಲ್ಲಿ ಕೋವಿಡ್ ಸಂಖ್ಯೆ ಏರಿಕೆಯಾಗುತ್ತಿರುವುದರ ನಡುವೆ ಚೀನಾ ಈ ಘೋಷಣೆ ಮಾಡಿದೆ. ಅಲ್ಲಿನ ಅಧಿಕಾರಿಗಳ ಪ್ರಕಾರ, ಓಮಿಕ್ರಾನ್ ರೂಪಾಂತರಿ ಡೆಲ್ಟಾಗಿಂತಲೂ ಅಪಾಯಕಾರಿ ಅಲ್ಲ ಎಂದು ಹೇಳಲಾಗುತ್ತಿದೆ.

SCROLL FOR NEXT