ವಿದೇಶ

ಶ್ರೀಲಂಕಾದ 15ನೇ ಪ್ರಧಾನಿಯಾಗಿ ದಿನೇಶ್ ಗುಣವರ್ಧನ ಪ್ರಮಾಣ ವಚನ ಸ್ವೀಕಾರ

Nagaraja AB

ಕೊಲಂಬೋ: ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಇದೀಗ ಹಿರಿಯ ರಾಜಕಾರಣಿ ದಿನೇಶ್ ಗುಣವರ್ಧನ ಶ್ರೀಲಂಕಾದ 15ನೇ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಪ್ರಧಾನಿಯಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಶ್ರೀಲಂಕಾದ ರಾಜಕೀಯದ ನಿಷ್ಠಾತರಾಗಿರುವ 73 ವರ್ಷದ ಗುಣವರ್ಧನಾ ಅವರು ಈ ಹಿಂದೆ ವಿದೇಶಾಂಗ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಏಪ್ರಿಲ್‌ನಲ್ಲಿ ಗೋಟಬಯ ರಾಜಪಕ್ಸೆ ಅವರು ದಿನೇಶ್ ಗುಣವರ್ಧನ್ ಅವರನ್ನು ಗೃಹ ಸಚಿವರಾಗಿ ನೇಮಿಸಿದ್ದರು.

ಗೋಟಬಯ ರಾಜಪಕ್ಸೆ ಅವರು ದೇಶದಿಂದ ಪಲಾಯನಗೈದುಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ 73 ವರ್ಷದ ವಿಕ್ರಮಸಿಂಘೆ ಅವರು ಗುರುವಾರ ದೇಶದ ಎಂಟನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರಿಂದಾಗಿ ಪ್ರಧಾನಿ ಹುದ್ದೆ ಖಾಲಿಯಾಗಿತ್ತು. ದೇಶವು ಎದುರಿಸುತ್ತಿರುವ ಅಭೂತಪೂರ್ವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಅವರು ಉಭಯಪಕ್ಷಗಳಿಗೆ ಕರೆ ನೀಡಿದ್ದಾರೆ. 

SCROLL FOR NEXT